ರಾಮನ ಮೇಲೆ ಭಕ್ತಿ ಇಲ್ಲ, ಆದರೆ ರಾಮ ಮಂದಿರ ನೋಡಲು ಹೋಗುತ್ತೇನೆ – ಹೀಗ್ಯಾಕಂದ್ರು ಪ್ರಿಯಾಂಕ್ ಖರ್ಗೆ

ನನಗೆ ರಾಮನ ಮೇಲೆ ಭಕ್ತಿ ಇಲ್ಲ, ನಾನು ಅಯೋಧ್ಯೆಗೆ ಹೋಗಲ್ಲ. ಆದರೆ ರಾಮ‌ಮಂದಿರದ ಕಲೆ, ವಾಸ್ತು ಶಿಲ್ಪವನ್ನು ನೋಡಲು ಹೋಗುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವ ಬಗ್ಗೆ ವರದಿಯಾಗಿದೆ‌.

Priyank Kharge

ವಿಕಾಸ ಸೌಧದಲ್ಲಿ ಮಾಧ್ಯಮಗಳ ಎದುರು ಮಾತನಾಡಿದ ಪ್ರಿಯಾಂಕ್ ಖರ್ಗೆಯವರು ಕಾಂಗ್ರೆಸ್ ರಾಮ‌ ಮಂದಿರ ವಿರೋಧ ಮಾಡಿಲ್ಲ, ವಿರೋಧ ಮಾಡಿದ್ದು ಶಂಕರಾಚಾರ್ಯರ ಮಠಗಳು. ರಾಮನಿಗೆ ಸಾಧು ಸಂತರು ಜೀವ ತುಂಬಬೇಕು, ಅಪೂರ್ಣ ಮಂದಿರ ಉದ್ಘಾಟನೆ ಬೇಡ ಎಂದು ಹೇಳಿದ್ದರು. ಇನ್ನು ರಾಮ‌ ಮಂದಿರ ಪ್ರಾಣ ಪ್ರತಿಷ್ಠಾನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಮಂದಿರವಾಗಿದೆ ಎಂದು ಹೇಳಿದ್ದಾರೆ, ನಾವೇನು ಸುಪ್ರಿಂ ಕೋರ್ಟ್ ಆದೇಶದ ವಿರೋಧಿಗಳಲ್ಲ, ಹಾಗೂ ನಮ್ಮ ಕಾರ್ಯಕರ್ತರು ಅವರ ಇಚ್ಚೆಯಂತೆ ಮಾಡಿ ಎಂದು ಹೈಕಮಾಂಡ್ ಹೇಳಿದೆ ಎಂದು ಹೇಳಿದರು.

Supreme Court order

ರಾಮನ ಮೇಲೆ ನನಗೆ ಭಕ್ತಿ ಇಲ್ಲ, ಭಕ್ತಿ ಇಂದ ನಾನಲ್ಲಿಗೆ ಹೋಗುವುದಿಲ್ಲ ಆದರೆ ಅಲ್ಲಿನ ಕಲೆ ವಾಸ್ತು ಶಿಲ್ಪವನ್ನು‌ ನೋಡಲು ಹೋಗುತ್ತೇನೆ. ನಾನು ಬುದ್ಧ-ಬಸವ ತತ್ತ್ವಗಳನ್ನು ಅನುಸರಿಸುತ್ತೇನೆ. ಹಾಗೆಯೇ ನಾನು ಬಿಜೆಪಿಗರಿಗೆ ಕೇಳುತ್ತೇನೆ, ಎಷ್ಟು ಜನರಿಗೆ ಹನುಮಾನ್ ಚಾಲಿಸಾ, ರಾಮಾಯಣ, ಋಗ್ವೇದ ಬರುತ್ತೆ ಹೇಳಲಿ ನೋಡೋಣ ಎಂದರು.‌ ಇನ್ನು ಕೊನೆಯದಾಗಿ ಮುಖ್ಯಮಂತ್ರಿಗಳು ಹೇಳಿದರೆ ಅಯೋಧ್ಯೆಗೆ ಹೋಗುತ್ತೇನೆ ಆದರೆ ನನಗೆ ರಾಮನ ಬಗೆಗೆ ಭಕ್ತಿ ಇಲ್ಲ ಎಂದು ಹೇಳಿದರು‌.

You might also like
Leave A Reply

Your email address will not be published.