ಜೆಸ್ಕಾಂ ಅಧಿಕಾರಿಗೆ ಶಾಕ್ ನೀಡಿದ ಲೋಕಾಯುಕ್ತ – ಈ ವರದಿ ಓದಿ

ಜಿಲ್ಲೆಯ ಲಿಂಗಸುಗೂರಿನಲ್ಲಿ ಲಂಚ ಪಡೆಯುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಏನದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.

ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಚಪ್ಪ ಬಾವಿಮನಿ ಎಂಬುವವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ. ಲಿಂಗಸುಗೂರಿನ ಆಶಿಹಾಳ ತಾಂಡದ ನಿವಾಸಿ ವಿದ್ಯುತ್ ಗುತ್ತಿಗೆದಾರ ಪ್ರೇಮಕುಮಾರ ಎಂಬುವವರಿಗೆ ಹೊಸ ಮನೆಯ ಆರ್.ಆರ್ ನಂಬರ್ ನೀಡಲು 10 ಸಾವಿರ ಲಂಚ ಕೇಳಿದ್ದ.

ಬೇಸತ್ತ ಗುತ್ತಿಗೆದಾರ ಲೋಕಾಯುಕ್ತಕ್ಕೆ ದೂರು ನೀಡಿದ:

Lokayukta

ಈಗಾಗಲೇ 5 ಸಾವಿರ ರೂಪಾಯಿ ನೀಡಿದ್ದ ಗುತ್ತಿಗೆದಾರ ಉಳಿದ ಹಣವನ್ನು ನೀಡಲು ಈ ಅಧಿಕಾರಿಯಿಂದ ಬೇಸತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದ. ಲೋಕಾಯುಕ್ತರ ಮಾರ್ಗದರ್ಶನದಂತೆ ಉಳಿದ 5 ಸಾವಿರ ನೀಡಲು ಗುತ್ತಿಗೆದಾರ ಕಚೇರಿ ತಲುಪಿದ್ದ.

ಲೋಕಾಯುಕ್ತರು ಗುತ್ತಿಗೆದಾರನನ್ನು ಹಿಂಬಾಲಿಸಿಕೊಂಡು ಬಂದಿದ್ದು, ಜೆಸ್ಕಾಂ ಅಧಿಕಾರಿ ಲಂಚ ಸ್ವೀಕರಿಸುವಾಗ ಅಧಿಕಾರಿಯ ಮೇಲೆ ದಾಳಿ ನಡೆಸಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದ ಬಳಿಕ ಅಧಿಕಾರಿ ಅನಾರೋಗ್ಯದ ಹೈಡ್ರಾಮಾ ಮಾಡಿ ಲಿಂಗಸುಗೂರು ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಬಳಿಕ ಲೋಕಾಯುಕ್ತ ಅಧಿಕಾರಿಗಳು ಎಇಇ ಕೆಂಚಪ್ಪ ಬಾವಿಮನಿಯನ್ನ ವಶಕ್ಕೆ ಪಡೆದಿದ್ದಾರೆ.

You might also like
Leave A Reply

Your email address will not be published.