ಪುರದ ಪುಣ್ಯಂ ಪುರುಷ ರೂಪಿಂದೆ ಮರಳಿದೆ

ಪುರದ ಪುಣ್ಯಂ ಪುರುಷ ರೂಪಿಂದೆ ಮರಳುತಿದೆ ಎಂಬುದಕ್ಕೆ ನಿನ್ನೆ ಧರ್ಮಪುರಿ ಅಯೋಧ್ಯೆಯಲ್ಲಿ ಸಾಕ್ಷಿಯಾದ ಘಟನೆಗಳೇ ಸಾಕ್ಷಿ. ಬಾಲರಾಮನ ಮುಂದೆ ಭಕ್ತರೆಲ್ಲರೂ ಪ್ರಭು ಶ್ರೀ ರಾಮನ ಭಕ್ತಿಸುಧೆಯಲ್ಲಿ ಮಿಂದೆದ್ದ ಅಮೃತಘಳಿಗೆ ಕಲಿಗಾಲದ ಒಂದು ಮಹೋನ್ನತ ಸುದಿನಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಗೆ ಹೋಗಿ ಸಂಭ್ರಮ ಪಟ್ಟವರ ದಂಡು ಒಂದೆಡೆಯಾದರೆ ಮನೆಯಲ್ಲಿಯೇ ಕುಳಿತು ಆನಂದ ಭಾಷ್ಪ ಸುರಿಸಿ, ಸಿಹಿ ಹಂಚಿ ಮೆರೆದವರು ಒಂದು ಕಡೆ. ಯಾರ ಭಕ್ತಿ ಹೆಚ್ಚು ಯಾರ ಭಕ್ತಿ ಕಡಿಮೆ ಎನ್ನುವ ಪ್ರಶ್ನೆಗೆ ಅವಕಾಶವೇ ಇರಲಿಲ್ಲ.‌

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಭು ಶ್ರೀ ರಾಮನ ಬಗ್ಗೆ ವರ್ಣಿಸಿದ ರೀತಿ ಇಂತಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಭು ಶ್ರೀ ರಾಮನ ಬಗ್ಗೆ ವರ್ಣಿಸಿದ ರೀತಿ ಇಂತಿದೆ. ರಾಮ ಭಾರತದ ವಿಶ್ವಾಸ,
ರಾಮ ಭಾರತದ ಆಧಾರ,
ರಾಮ ಭಾರತದ ವಿಚಾರ,
ರಾಮನು ಭಾರತದ ವಿಧಾನ,
ರಾಮನು ಭಾರತದ ಚೇತನ,
ರಾಮನು ಭಾರತದ ಚಿಂತನ,
ರಾಮನು ಭಾರತದ ಪ್ರತಿಷ್ಠಾ,
ರಾಮನು ಭಾರತದ ಪ್ರತಾಪ,
ರಾಮನು ಪ್ರಭೆಯೂ ಹೌದು ಪ್ರಭಾವವೂ ಹೌದು,
ರಾಮನು ನಿಯತ್ತೂ ಹೌದು ನೀತಿಯೂ ಹೌದು,
ರಾಮನು ನಿತ್ಯತೆಯೂ ಹೌದು ನಿರಂತರತೆಯೂ ಹೌದು,
ರಾಮನು ವ್ಯೂಹವೂ ಹೌದು, ಸಮೂಹವೂ ಹೌದು,
ರಾಮನು ವ್ಯಾಪಕವಾಗಿದ್ದಾನೆ,
ರಾಮನು ವಿಶ್ವ,
ರಾಮನು ವಿಶ್ವಾತ್ಮ,ಎಂದ ಮಾತುಗಳು ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನದಾಳದ ಮಾತುಗಳಲ್ಲ ಸಮಸ್ತ ಹಿಂದೂಗಳ ಎದೆಯದನಿ ಇದಾಗಿತ್ತು ಎಂದರೆ ಖಂಡಿತಾ ಉತ್ಪ್ರೇಕ್ಷೆಯಲ್ಲ.

narendra modi

ನಿನ್ನೆ ಬರೀ ಅಯೋಧ್ಯೆ ಮಾತ್ರವಲ್ಲ ಪೂರ್ತಿ ಭಾರತವೇ ಇನ್ನೊಮ್ಮೆ ದೀಪಾವಳಿಯನ್ನು ಆಚರಿಸಿತು. ವರ್ಷದಲ್ಲಿ ಎರಡು ಭಾರಿ ದೀಪಾವಳಿಯ ಸಂಭ್ರಮ ಕಂಡ ಕಣ್ಣುಗಳು ಎಷ್ಟು ಧನ್ಯ!! ನಿನ್ನೆ ನಡೆದ ರಾಮೋತ್ಸವ ಬರೀ ಮನೆಗಳನ್ನಲ್ಲ ಅಂಧಕಾರದಲ್ಲಿದ್ದ ಮನಗಳನ್ನು ಬೆಳಗಿತೆಂದರೆ ಅತಿಶಯೋಕ್ತಿ ಖಂಡಿತಾ ಅಲ್ಲ. ಅಯೋಧ್ಯೆಯ ಸರಯೂ ನದಿ ತಟವೇ ಇರಲಿ, ಹನುಮಾನ್ ಘಡಿಯೇ ಇರಲಿ ಅಲ್ಲಿನ ಸಂಭ್ರಮ ತುಸು ಹೆಚ್ಚೇ ಎಂದರೆ ನಂಬಲೇ ಬೇಕು. ಪ್ರಧಾನಿಯವರು ರಾಮನು ಬೆಂಕಿಯಲ್ಲ, ಬಲ ಎಂದ ಮಾತುಗಳು ಸಮಸ್ತ ಹಿಂದೂ ಜನ ಜಾತಿಗೆ ಮತ್ತಷ್ಟು ಆತ್ಮವಿಶ್ವಾಸ ತುಂಬಿದೆ.‌ ತಮ್ಮ ತನವನ್ನು ಸಾರುವ ಭವ್ಯ ಭಾರತದ ಇತಿಹಾಸದಲ್ಲಿ ಹುದುಗಿ ಹೋದ ಅನೇಕ ಘಟನೆಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ‌ ಮಾಡಿ, ಜಾಗೃತರನ್ನಾಗಿ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಜನರು ಸಾಮಾಜಿಕ ಜಾಲತಾಣಗಳ ಮೂಲಕ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.

You might also like
Leave A Reply

Your email address will not be published.