ಅರ್ಚಕರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ – ಈ ವರದಿ ಓದಿ

ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬೀಗುತ್ತಿರುವ ರಾಜ್ಯ ಸರ್ಕಾರ ವ್ಯಯವಾಗುತ್ತಿರುವ ಹಣವನ್ನು ಸರಿದೂಗಿಸಲು ನಾನಾ ಬಗೆಗಳಲ್ಲಿ ದರ ಹೆಚ್ಚಳ ಮಾಡಿತ್ತು. ಆದರೆ ಇದೀಗ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನು ವಾಪಸ್ ಕೇಳಿ ನೋಟಿಸ್ ಕಳಿಸುತ್ತಿದ್ದು, ಈ ಸುದ್ದಿ ಅರ್ಚಕರಿಗೆ ನುಂಗಲಾರದ ತುತ್ತಾಗಿದೆ.

Notice

ಇದಕ್ಕೆ ನಿದರ್ಶನವೆಂದರೆ, ಚಿಕ್ಕಮಗಳೂರಿನ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿರುವ ಕನ್ನಡದ ಪಂಡಿತ ಹಿರೇಮಗಳೂರು ಕಣ್ಣನ್ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತವು ಕಣ್ಣನ್ ಅವರ ವೇತನ ತಡೆಹಿಡಿದು ಈ ನೋಟಿಸ್ ನೀಡಿದ್ದು, ಇಡೀ ಕುಟುಂಬ ಆತಂಕದಲ್ಲಿದೆ.

ನೋಟಿಸ್’ನಲ್ಲೇನಿದೆ..?

ದೇವಾಲಯದ ಆದಾಯ ಕಡಿಮೆ ಇರುವುದರಿಂದ ಸರ್ಕಾರ ನೀಡಿದ ಸಂಬಳ ವಾಪಸ್ ನೀಡುವಂತೆ ತಿಳಿಸಲಾಗಿದೆ. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಜಮೆಯಾಗುತ್ತಿತ್ತು. ಇದೀಗ 7,500 ರೂ. ಸಂಬಳದಲ್ಲಿ 4,500 ವಾಪಸ್ ನೀಡಲು ಸೂಚನೆ ನೀಡಲಾಗಿದೆ.

Notice

ಕಣ್ಣನ್ ಅವರು ಕಳೆದ 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಪ್ರತಿ ತಿಂಗಳು ಬರುತ್ತಿದ್ದ ಸಂಬಳವನ್ನು ಜಿಲ್ಲಾಡಳಿತ ತೆಡೆಹಿಡಿದಿದೆ. ಚಿಕ್ಕಮಗಳೂರು ತಹಶಿಲ್ದಾರ್ ಸುಮಂತ್ ನೀಡಿರುವ ನೋಟಿಸ್ ಕಂಡು ಕಣ್ಣನ್ ಅವರು ಆತಂಕಗೊಂಡಿದ್ದಾರೆ.

You might also like
Leave A Reply

Your email address will not be published.