ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನವೇ ಜನಿಸಿದ್ದು ಎಷ್ಟು ಕಂದಮ್ಮಗಳು ಗೊತ್ತಾ?

ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನೆರವೇರುತ್ತಿದ್ದಂತೆ, ರಾಜಧಾನಿಯಲ್ಲಿ ಸುಮಾರು 80ಕ್ಕೂ ಹೆಚ್ಚು ಕಂದಮ್ಮಗಳು ಜನ್ಮ ಪಡೆದುಕೊಂಡಿವೆ. ಸಿಲಿಕಾನ್ ಸಿಟಿಯಲ್ಲಿ ಜ.22 ರಂದು ಡೆಲಿವರಿ ಡಿಮ್ಯಾಂಡ್ ಕ್ರೇಜ್ ಹೆಚ್ಚಾಗಿತ್ತು. ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾನೆ ದಿನ ಕಂದಮ್ಮಗಳನ್ನು ಪಡೆಯಲು ಕರ್ನಾಟಕವಲ್ಲದೇ ವಿವಿಧ ರಾಜ್ಯಗಳಲ್ಲೂ ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಪೋಷಕರು ಆಸಕ್ತಿ ವಹಿಸಿರುವುದು ಕಂಡುಬಂದಿದೆ.

Rama Lalla prana pratshapana

ಯಾವ ಆಸ್ಪತ್ರೆಯಲ್ಲಿ ಎಷ್ಟು ಶಿಶುಗಳ ಜನನ:

ವಾಣಿವಿಲಾಸ್ ಆಸ್ಪತ್ರೆ – 16 ಗಂಡು, 12 ಹೆಣ್ಣು ಸೇರಿದಂತೆ ಒಟ್ಟು 28 ಕಂದಮ್ಮಗಳು ಜನಿಸಿದ್ದು, ಈ ಪೈಕಿ 10 ನಾರ್ಮಲ್, 1 ಸಿಸೇರಿಯನ್ ಮಾಡಲಾಗಿದೆ.

ಕೆಸಿ ಜನರಲ್ ಆಸ್ಪತ್ರೆ – 4 ಶಿಶುಗಳು ಜನನವಾಗಿದ್ದು, ಈ ಪೈಕಿ 2 ಸಹಜ, 2 ಸಿಸೇರಿಯೆನ್​ ಆಗಿದೆ.

ಘೋಷಾ ಆಸ್ಪತ್ರೆ – ಒಟ್ಟು 6 ಕಂದಮ್ಮಗಳ ಜನನ, 5 ನಾರ್ಮಲ್, 1 ಸಿಸೇರಿಯನ್​

ಇತರೆ ಖಾಸಗಿ ಆಸ್ಪತ್ರೆ – 25 ಕ್ಕೂ ಅಧಿಕ ಮಕ್ಕಳ ಜನನವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ್ದು, ಈ ಹಿನ್ನೆಲೆ ಡೆಲಿವರಿ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕಿದ್ದಾರೆ.

ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಮಗು ಜನನಕ್ಕೆ ಪೋಷಕರ ತಾಕೀತು:

ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದ ಸಮಯಕ್ಕೇ ಮಗು ಜನಿಸುವಂತಾಗಲಿ ಎಂದು ಪೋಷಕರು ನಿರ್ಧರಿಸಿರುವಂತಹ ಸಾಕಷ್ಟು ಉದಾಹರಣೆಗಳು ಕಂಡುಬಂದಿವೆ. ತಮ್ಮ ಹೆರಿಗೆ ದಿನಾಂಕವನ್ನು ಜನವರಿ 22 ರ ಮೊದಲು ಅಥವಾ ನಂತರ ಕೆಲವು ದಿನಗಳಲ್ಲಿ ಮಾಡುವಂತೆ ಸಹ ವೈದ್ಯರಿಗೆ ವಿನಂತಿ ಮಾಡಿಕೊಂಡಿದ್ದಾರೆ.

ವಿಶಿಷ್ಟ ಕಾರ್ಯಕ್ಕೆ ಸಾಕ್ಷಿಯಾದ ಸಿದ್ದೇಶ್ವರ ಸಂಸ್ಥೆಯ ಆಸ್ಪತ್ರೆ

Siddeshwar Institute Hospital

ಹೌದು! ವಿಜಯಪುರದಲ್ಲೊಂದು ವಿಶಿಷ್ಟ ಕಾರ್ಯಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಆಸ್ಪತ್ರೆ ಸಾಕ್ಷಿಯಾಗಿದೆ. ಮೂರು ಗಂಡು ಮಕ್ಕಳಿಗೆ ರಾಮ ಎಂದು ನಾಮಕರಣ ಮಾಡಲಾಗಿದ್ದು, ಒಂದು ಹೆಣ್ಣು ಮಗುವಿಗೆ ಸೀತಾ ಎಂದು ಹೆಸರಿಡಲಾಗಿದೆ. ಶಾಸಕ ಯತ್ನಾಳ್ ಪುತ್ರ ರಾಮನಗೌಡ ಪಾಟೀಲ್, ಆಸ್ಪತ್ರೆಯ ವೈದ್ಯರು ಸಿಬ್ಬಂದಿ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ. ಈ ಮುಖೇನ ಆಸ್ಪತ್ರೆಯಲ್ಲಿ ರಾಮಮಂದಿರ ಉದ್ಘಾಟನೆಯನ್ನು ಅದ್ದೂರಿಯಾಗಿ ಸಂಭ್ರಮಿಸಿರುವುದು ಸ್ವಾಗತಾರ್ಹ.

You might also like
Leave A Reply

Your email address will not be published.