ಬಾಲ ರಾಮ ನಗುತ್ತಿದ್ದಾನೆ – ವಿಡಿಯೋ ನೀವೂ ನೋಡಿದ್ರಾ?

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮನ ಮೂರ್ತಿಯ ಸೊಬಗು ಜಗತ್ತಿನೆಲ್ಲೆಡೆ ಇರುವ ರಾಮಭಕ್ತರ ಮನವ ಸೆಳೆದಿದೆ. ಮಗುವಿನ ಮಂದಸ್ಮಿತದಿಂದ ಕಂಗೊಳಿಸುವ ರಾಮಮೂರ್ತಿಯನ್ನು ನೋಡಿ ಜನ ಬಾಲರಾಮನೇ ಧರೆಗಿಳಿದು ಬಂದಷ್ಟು ಭಾವುಕರಾಗಿದ್ದಾರೆ. ಈ ನಡುವೆ ಬಾಲರಾಮ ಮುಗುಳ್ನಗುತ್ತಾ ತನ್ನ ತಲೆಯನ್ನು ಅತ್ತಿತ್ತ ತಿರುಗಿಸುತ್ತಾ ನೋಡುತ್ತಿರುವಂತೆ ಭಾಸವಾಗುವ ವಿಡಿಯೋ ನೋಡಿದ್ದಿರಾ?

ಹೌದು! ರಾಮಲಲ್ಲಾನ ಮೂರ್ತಿ ನೋಡಿಯೇ ಫಿದಾ ಆಗಿರುವ ತಮ್ಮೆಲ್ಲರಿಗೂ ಕೃತಕ ಬುದ್ದಿಮತ್ತೆ ಬಳಸಿ ಸೃಷ್ಟಿಸಲಾಗಿರುವ ರಾಮನನ್ನು ನೋಡಿದ್ರೆ ಕರಗುವುದು ಅಕ್ಷರಶಃ ಸತ್ಯ. ಮಂದಸ್ಮಿತನಾಗಿರುವ ರಾಮ ತನ್ನ ತಲೆಯನ್ನು ಅತ್ತಿತ್ತ ಅಲ್ಲಾಡಿಸುತ್ತಾ ನೋಡುತ್ತಿರುವಂತೆ ಭಾಸವಾಗುವ ವೀಡಿಯೋವೊಂದನ್ನು ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿಸಲಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪಿಸಿದ ನಂತರ ಬಿಡುಗಡೆಯಾದ ಮುದ್ದು ಬಾಲರಾಮನ ಚಿತ್ರವನ್ನು ಬಳಸಿಕೊಂಡು ಎಐ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಕಲಾವಿದರೊಬ್ಬರು ಸೃಷ್ಟಿಸಿದ ಈ ಅದ್ಭುತ ವೀಡಿಯೋ ವೈರಲ್ ಆಗಿದ್ದು, ನೋಡುಗರ ಮನವನ್ನು ರೋಮಾಂಚನಗೊಳಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಸುನೀಲ್ ಚೌಧರಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವಿಡಿಯೋ ನೋಡಿ ಮೈ ರೋಮಾಂಚನವಾಯ್ತ, ಇದನ್ನು ನಿರ್ಮಿಸಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ವೀಡಿಯೋ ನೋಡಿದ ಬಹುತೇಕರು ಇದಕ್ಕೆ ನಿಜವಾಗಿಯೂ ಬಾಲರಾಮನೇ ತಲೆ ಅಲ್ಲಾಡಿಸುತ್ತಾ ಅತ್ತಿತ್ತ ನೋಡುವಂತಿದೆ ಈ ವೀಡಿಯೋ. ಹಾಗೂ ಅದ್ಭುತ, ಸುಂದರ ಅತೀ ಸುಂದರ ಎಂದು ಕಾಮೆಂಟ್ ಮಾಡಿದ್ದಾರೆ.

You might also like
Leave A Reply

Your email address will not be published.