ರಾಹುಲ್ ನ್ಯಾಯದ ಯಾತ್ರೆಗೆ ಅಸ್ಸಾಂ ಪೊಲೀಸರ ತಡೆ – ಕಾಂಗ್ರೆಸ್ ಕೆಂಡಾಮಂಡಲ

ರಾಹುಲ್‌ ಗಾಂಧಿ‌ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂನ ಗುವಾಹಟಿ ತಲುಪಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಸ್ಸಾಂ ಪೋಲಿಸರ ನಡುವೆ ಘರ್ಷಣೆ ಉಂಟಾಗಿದೆ. ‌ಯಾತ್ರೆಯನ್ನು ತಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಪೋಲಿಸರು ಹಾಜಾರಿದ್ದ ಬಗ್ಗೆ ANI ಸುದ್ದಿ ಸಂಸ್ಥೆಯು ವರದಿ ಮಾಡಿದೆ.

ನಾವು ಯಾತ್ರೆಯ ಸಂದರ್ಭದಲ್ಲಿ ಎಲ್ಲಾ ಕಡೆ ತಡೆಯಲ್ಪಡುತ್ತಿದ್ದೇವೆ. ದೇಶದ ಗೃಹ ಮಂತ್ರಿಗಳು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರಿಗೆ ಕರೆ ಮಾಡಿ ರಾಹುಲ್ ಗಾಂಧಿ ಯಾವುದೇ ಕಾರಣಕ್ಕೂ ಅಸ್ಸಾಂನ ವಿದ್ಯಾರ್ಥಿಗಳನ್ನು ಭೇಟಿಯಾಗಬಾರದು ಎಂದು ಹೇಳುತ್ತಾರೆ.‌ ರಾಹುಲ್ ಗಾಂಧಿ ಇಲ್ಲಿಗೆ ಬರುತ್ತಾರೋ ಇಲ್ಲವೋ ಅದು ಮುಖ್ಯವಲ್ಲ ಆದರೆ ವಿದ್ಯಾರ್ಥಿಗಳು ಅವರಿಗೆ ಬೇಕಾದುದನ್ನು, ಬೇಕಾದವರ ಬಳಿ‌ ಕೇಳಬೇಕು ಅದು ಮುಖ್ಯ. ಆದರೆ ಅಸ್ಸಾಂನ‌ ಯಾವುದೇ ಶಾಲಾ ಕಾಲೇಜುಗಳಲ್ಲಿ ಇದು ನಡೆಯುತ್ತಿಲ್ಲ. ಎಂದು ಹೇಳಿದರು.

ಇನ್ನೊಂದು ಕಡೆ, ಯುವ ಕಾಂಗ್ರೆಸ್‌ನ ಮುಖ್ಯಸ್ಥ ಬಿ.ವಿ. ಶ್ರೀನಿವಾಸ್ ಅವರು ಹಂಚಿಕೊಂಡ ವಿಡಿಯೋ ಒಂದಕ್ಕೆ ಪ್ರತಿಕ್ರಿಯೆ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ, ಪ್ರಚೋದನಕಾರಿ ಭಾಷಣದ ಮೂಲಕ ಜನರನ್ನು ಪ್ರಚೋದಿಸಲು ಯತ್ನಿಸಿದ ರಾಹುಲ್ ಗಾಂಧಿ ವಿರುದ್ಧ ಅಶಿಸ್ತು ಮತ್ರು ಸಾರಿಗೆ ನಿಯಮಗಳ ಉಲ್ಲಂಘನೆ ಮಾಡಿದ ಕಾರಣದಿಂದ ಭಾರಿ ಟ್ರಾಫಿಕ್ ಜಾಮ್ ಆಗಿದ್ದು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಸ್ಸಾಂ ಪೋಲಿಸರಿಗೆ ಸೂಚಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು, ಹಾಕಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಗುವಾಹಟಿ ನಗರಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ವರದಿಯಾಗಿತ್ತು.

You might also like
Leave A Reply

Your email address will not be published.