ಡಿಸೆಂಬರ್ 31ಕ್ಕೆ ಡೆಡ್ ಲೈನ್: ಯಾಕೆ? ತಪ್ಪದೇ ಓದಿ!

2023 ಕೊನೆಗೊಳ್ಳುತ್ತಿದ್ದು, 2024 ರ ಪ್ರಾರಂಭಕ್ಕೆ ದಿನಗಣನೆ ಉಳಿದಿದೆ. ಜನರೋ ಹೊಸ ವರ್ಷದ ಆಚರಣೆ ಮತ್ತು ಸಂಭ್ರಮದಲ್ಲಿ ಮುಳುಗಿ ಹೋಗಿದ್ದಾರೆ. ಇತ್ತ ಕಡೆ ಕೋವಿಡ್ ವೈರಸ್ ಮತ್ತೆ ವಕ್ಕರಿಸಿದ್ದು, ಕೆಲವರು ಅದರ ಭೀತಿಯಲ್ಲಿದ್ದಾರೆ. ಇದರ ನಡುವೆ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31ಕ್ಕೆ ಕೆಲ ಡೆಡ್’ಲೈನ್ ಇದೆ ಎಂಬುದನ್ನು ಜನರು ಮರೆತೇ ಹೋಗಿದ್ದಾರೆ.

ಹೌದು! ಈ ಆಧಾರ್ ಅಪ್ಡೇಟ್, ಬ್ಯಾಂಕ್ ಲಾಕರ್ ಅಂಗ್ರಿಮೆಂಟ್ ಅನ್ನು ನವೀಕರಿಸುವುದು, ವಿಶೇಷ ಫಿಕ್ಸೆಡ್ ಡೆಪಾಸಿಟಿ ಯೋಜನೆಗಳು ಸೇರಿದಂತೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸದೆ ಇರುವವರಿಗೆ ಈ ವರ್ಷದ ಕೊನೆಯ ದಿನ ಡೆಡ್ ಲೈನ್ ಎಂಬುದನ್ನು ಮರೆತಿದ್ದೀರ? ಇವಿಷ್ಟೇ ಅಲ್ಲದೇ ಇನ್ನೂ ಯಾವ್ಯಾವ ಕಾರ್ಯಗಳಿಗೆ ಡೆಡ್ ಲೈನ್ ಇದೆ ಎಂಬುದನ್ನು ಇಲ್ಲಿ ನೋಡೋಣ!

1. ಸಕ್ರಿಯವಲ್ಲದ ಯುಪಿಐ ಐಡಿಗಳು ಬಂದ್ ಆಗಲಿದೆ!


ಹೌದು! ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಕೆಯಲ್ಲಿಲ್ಲದ ಯುಪಿಐ ಐಡಿಗಳನ್ನು ಡಿಸೆಂಬರ್ 31 ರಂದು ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ. ಈ ನಿಯಮದಂತೆ ಇಲ್ಲಿಯವರೆಗೂ ವಹಿವಾಟು ನಡೆಸದೆ ಇರುವವರು ಇನ್ನೂ ಮುಂದೆ ವಹಿವಾಟು ನಡೆಸುವ ಮೂಲಕ ಮರುಚಾಲನೆಗೊಳಿಸಿ. ಇಲ್ಲದಿದ್ದಲ್ಲಿ ಹೊಸ ವರ್ಷದಿಂದ ನೀವು ನಿಮ್ಮ ಯುಪಿಐ ಐಡಿಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

2. ಬ್ಯಾಂಕ್ ಲಾಕರ್ ಅಗ್ರೀಮೆಂಟ್ ನವೀಕರಣ!


ಬ್ಯಾಂಕುಗಳು ತಮ್ಮಲ್ಲಿ ಲಾಕರ್ ಸರ್ವೀಸ್ ಪಡೆದಿರುವ ಎಲ್ಲಾ ಗ್ರಾಹಕರೊಂದಿಗೆ ಹಂತ ಹಂತವಾಗಿ ಒಪ್ಪಂದ ನವೀಕರಣ ಮಾಡಬೇಕೆಂದು ಆರ್.ಬಿ.ಐ ಸೂಚಿಸಿದ್ದು, ಡಿಸೆಂಬರ್ 31 ಅನ್ನು ಮೊದಲ ಹಂತದ ಡೆಡ್ ಲೈನ್ ಆಗಿ ಫಿಕ್ಸ್ ಮಾಡಲಾಗಿದೆ.

3. ಆಧಾರ್ ಅಪ್ಡೇಟ್ ಮಾಡಲು ಡೆಡ್ ಲೈನ್


ಸರ್ಕಾರವು ಈಗಾಗಲೇ ಆನ್ಲೈನ್ ಅಲ್ಲೆ ಆಧಾರ್ ಕಾರ್ಡ್ ಅನ್ನು ಶುಲ್ಕರಹಿತವಾಗಿ ಅಪ್ಡೇಟ್ ಮಾಡಲು ಅವಕಾಶ ನೀಡಿದ್ದು, ನಿಮ್ಮ ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸ ಇತ್ಯಾದಿಯನ್ನು ನೀವು ಉಚಿತವಾಗಿ ಬದಲಾಯಿಸಬಹುದಾಗಿದೆ. ಆದರೆ, ಉಚಿತವಾಗಿ ಅಪ್ಡೇಟ್ ಮಾಡಲು ಡಿಸೆಂಬರ್ 31 ಕೊನೆ ದಿನಾಂಕವಾಗಿದ್ದು, ನಂತರ ಅಪ್ಡೇಟ್ ಮಾಡುವವರು ನಿರ್ದಿಷ್ಠ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

4. ವಿಶೇಷ ಫಿಕ್ಸೆಡ್ ಡೆಪಾಸಿಟಿ ಯೋಜನೆಗಳಿಗೆ ಡೆಡ್ಲೈನ್ ಫಿಕ್ಸ್


SBI ನ ಅಮೃತ್ ಕಳಶ್ ಎಫ್ಡಿ, ಇಂಡಿಯನ್ ಬ್ಯಾಂಕಿನ ಇಂಡ್ ಸೂಪರ್ 400 ಮತ್ತು ಇಂಡ್ ಸೂಪರ್ 300 ಡೇಸ್ ಇತ್ಯಾದಿ ಎಫ್ಡಿ ಸ್ಕೀಮ್ಗಳು ಇವೆ. ಈ ವಿಶೇಷ ಠೇವಣಿ ಯೋಜನೆಗಳು ಮಾಮೂಲಿಗಿಂತ ತುಸು ಹೆಚ್ಚು ಬಡ್ಡಿ ಕೊಡುತ್ತವೆ. ಇವುಗಳೊಂದಿಗೆ ಕೆಲ ಬ್ಯಾಂಕುಗಳ ವಿಶೇಷ ಠೇವಣಿ ಯೋಜನೆಗಳು ಈ ಡಿಸೆಂಬರ್ 31ಕ್ಕೆ ಕೊನೆಗೊಳ್ಳುತ್ತವೆ.

5. ಡಿಮ್ಯಾಟ್ ಅಕೌಂಡ್ ಗಳಿಗೆ ನಾಮೀನೇಶನ್ ಸಲ್ಲಿಕೆಗೆ ಕೊನೆ ದಿನಾಂಕ ಫಿಕ್ಸ್


ಡಿಮ್ಯಾಟ್ ಖಾತೆಗಳಿಗೆ ನಾಮಿನೇಶನ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದ್ದು, ಸೆಬಿ ಡಿಸೆಂಬರ್ 31 ಅನ್ನು ಡೆಡ್ಲೈನ್ ಆಗಿ ನಿಗದಿ ಮಾಡಿದೆ.

6. ಅಪ್ಡೇಟೆಡ್ ಐಟಿಆರ್ ಸಲ್ಲಿಸಲು ಡೆಡ್ಲೈನ್


ಆದಾಯ ತೆರಿಗೆ ರಿಟರ್ನ್ ಸಲ್ಲಿಸದೇ ಇರುವವರಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ಇದೆ. ಲೇಟ್ ಫೀ ಪಾವತಿಸಿ ರಿಟರ್ನ್ ಫೈಲ್ ಮಾಡಬಹುದು. ಮುಂದಿನ ವರ್ಷದಲ್ಲೂ ನೀವು ಸಲ್ಲಿಕೆ ಮಾಡಬಹುದಾದರೂ ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ. ನೆನಪಿರಲಿ!

You might also like
Leave A Reply

Your email address will not be published.