ಪತಿ ಮತ್ತು ಮಗಳ ಜೊತೆ ಅಯೋಧ್ಯೆಗೆ ಭೇಟಿ ನೀಡಿದ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ!

ಅಮೇರಿಕಾದ ಗಾಯಕ ನಿಕ್ ಜೋನಸ್ ಅವರನ್ನು ಮದುವೆಯಾಗಿ ಸದ್ಯ ಅಮೇರಿಕಾದಲ್ಲೇ ನೆಲೆಸಿರುವ ಬಾಲಿವುಡ್‌ ಮತ್ತು ಹಾಲಿವುಡ್‌ನ ಹೆಸರಾಂತ ನಟಿ ಪ್ರಿಯಾಂಕಾ ಚೋಪ್ರಾ ಅವರು ಅವರ ತಾಯಿ, ಪತಿ ಮತ್ತು ಮಗಳ ಜೊತೆ ಅಯೋಧ್ಯೆಗೆ ಭೇಟಿ ನೀಡಿ ಪ್ರಭು ಶ್ರೀ ರಾಮನ ದರ್ಶನ ಪಡೆದಿದ್ದಾರೆ.‌

 

View this post on Instagram

 

A post shared by Priyanka (@priyankachopra)

ನಟಿ ಪ್ರಿಯಾಂಕಾ ಚೋಪ್ರಾ ಅವರು ಹಿಂದೆ ಒಂದು ಸಂದರ್ಶನದಲ್ಲಿ ಬಾಲಿವುಡ್‌ನಲ್ಲಿ ನಿಜವಾದ ಪ್ರತಿಭೆಗಳಿಗೆ ಬೆಲೆ ಇಲ್ಲ ಹಾಗಾಗಿ ತಾನು ಹಾಲಿವುಡ್‌ಗೆ ಹೋಗಬೇಕಾಯಿತು ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದು ಅಲ್ಲಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ತಮಿಳು ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ನಟಿ‌ ಬಾಲಿವುಡ್‌ನ ಹೆಸರಾಂತ ನಾಯಕ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಕೊನೆಯದಾಗಿ ಮಾಡಿದ ಬಾಜಿ ರಾವ್ ಮಸ್ತಾನಿ ಚಿತ್ರದಲ್ಲಿ ಇವರ ಕಾಶಿಬಾಯಿ ಪಾತ್ರ ಎಲ್ಲರ ಮನಸೂರೆಗೊಂಡಿದ್ದು ತದನಂತರ ಹಾಲಿವುಡ್‌ನ ಕೆಲವು ಸಿನೆಮಾ ಹಾಗೂ ಸೀರೀಸ್ ಗಳಲ್ಲಿ ಅಭಿನಯಿಸುವ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಹಾಲಿವುಡ್‌ನಲ್ಲಿ ಇವರ ಇತ್ತೀಚಿನ ಅಭಿನಯದ ಸಿಟಾಡೆಲ್ ಸೀರೀಸ್ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲು ಲಭ್ಯವಿದೆ.

ಇನ್ನು ದೀಪಾವಳಿ ಹಬ್ಬದಲ್ಲಿ ಪಟಾಕಿ ಕಡಿಮೆ ಹೊಡೆಯಿರಿ ಎಂದು ಉಪದೇಶ ನೀಡುವ ಮೂಲಕ ನಟಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದರು. ಆದಾದ ನಂತರ, ಈ ತರದ ಯಾವುದೇ ತೆರನಾದ ಹೇಳಿಕೆ ಕೊಡದಿರಲು ನಿರ್ಧರಿಸಿದಂತಿತ್ತು.‌ ಅಮೇರಿಕಾದ ಗಾಯಕ ನಿಕ್ ಜೋನಸ್ ರನ್ನು ಮದುವೆಯಾದ ನಟಿಗೆ ಒಂದು ಹೆಣ್ಣು ಮಗುವಿದ್ದು ಮಾಲ್ತಿ ಮೇರಿ ಜೋನಸ್ ಎಂದು ಹೆಸರಿಟ್ಟಿದ್ದಾರೆ. ಒಂದು ಕಾಲದಲ್ಲಿ ಹಿಂದೂ ಹಬ್ಬಗಳ ಬಗ್ಗೆ ಉಪದೇಶ ಕೊಡುತ್ತಿದ್ದ ನಟಿ ಈಗ ಅಮೇರಿಕಾದಲ್ಲಿ ಪ್ರತಿ ಹಿಂದೂ ಹಬ್ಬಗಳನ್ನು ಆಚರಿಸುವುದನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

 

View this post on Instagram

 

A post shared by Priyanka (@priyankachopra)

ದೀಪಾವಳಿ, ಗಣೇಶ ಚತುರ್ಥಿ, ಕರ್ವಾ ಚೌತ್ ಸೇರಿದಂತೆ ಪ್ರತಿ ಹಬ್ಬಗಳನ್ನು ಸಂಭ್ರಮದಿಂದ ಕುಟುಂಬದ ಜೊತೆ ಆಚರಿಸುವ ನಟಿ ತಮ್ಮ ಸಾಮಾಜಿಕ ಜಾಲತಾಣದಲಿ ಹಬ್ಬದ ತುಣುಕುಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಮಗಳು ಮಾಲ್ತಿ‌ ಮೇರಿಯ ಜನನದ ಬಳಿಕ‌ ಮೊದಲ ಭಾರಿ ಭಾರತಕ್ಕೆ ಆಗಮಿಸಿದ್ದ ಅವರು ಮೊದಲ ಬಾರಿ‌ ಮುಂಬೈನ ಸಿದ್ದಿ ವಿನಾಯಕ ದೇವಾಲಯಕ್ಕೆ ಮಗಳೊಂದಿಗೆ ಭೇಟಿ ನೀಡಿ ಅದರ ತುಣುಕನ್ನು ಹಂಚಿಕೊಂಡಿದ್ದರು.

ಇದೀಗ ಮಗಳ ಎರಡನೇ ಭಾರತ ಪ್ರವಾಸದಲ್ಲಿ ಪ್ರಭು ಶ್ರೀ ರಾಮನ ಜನ್ಮಸ್ಥಾನಕ್ಕೆ ಪತಿ, ತಾಯಿ ಮತ್ತು ಮಗಳೊಂದಿಗೆ ಭೇಟಿ ನೀಡಿ ಜೈ ಸಿಯಾ ರಾಮ್ ಎಂಬ ಶೀರ್ಷಿಕೆಯಡಿ ಚಿತ್ರಗಳನ್ನು ಹಂಚಿಕೊಂಡಿದ್ದು, ಅಮೇರಿಕಾದಲ್ಲಿದ್ದರೂ ದೇಸಿಗರ್ಲ್‌ನ ಹಿಂದೂ ಧರ್ಮದ ಮೇಲಿನ ನಂಬಿಕೆ ಮತ್ತು ವಿಚಾರಗಳನ್ನು ನೋಡಿ, ಮಗಳಿಗೆ ಸನಾತನ ಧರ್ಮದ ಮೇಲಿನ ಆಚರಣೆಗಳನ್ನು ತಿಳಿಸುತ್ತಿರುವುದಕ್ಕಾಗಿ ಅಭಿಮಾನಿಗಳು ಆಕೆಯನ್ನು ಕೊಂಡಾಡುತ್ತಿದ್ದಾರೆ.

ಅಷ್ಟಲ್ಲದೇ ಹೇಳುತ್ತಾರೇನು? ‘ನೀವು ಒಬ್ಬ ಭಾರತೀಯನನ್ನು ಭಾರತದಿಂದ ಹೊರಗೆ ಕರೆದೊಯ್ಯಬಹುದು, ಆದರೆ ನೀವು ಎಂದಿಗೂ ಭಾರತವನ್ನು ಭಾರತೀಯರಿಂದ ಹೊರಹಾಕಲು ಸಾಧ್ಯವಿಲ್ಲ’ ಎಂದು.

You might also like
Leave A Reply

Your email address will not be published.