ಲೋಕಸಭಾ ಚುನಾವಣೆ – ಕಾಂಗ್ರೆಸ್ ಸಮಾಜವಾದಿ ಮೈತ್ರಿ ಸ್ಪರ್ಧೆ

ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭಾ ಚುನಾವಣೆಗಾಗಿ ಒಂದಾಗಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿಗಳು ಚುನಾವಣೆಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದ್ದವು. ಈ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಯೋಗಿ ಆದಿತ್ಯನಾಥ್ ಅವರು ಸಂಪೂರ್ಣವಾಗಿ ಪರಿಚಯಿಸುವಲ್ಲಿ ಇವೆರಡು ಪಕ್ಷಗಳ ಪಾತ್ರ ಮುಖ್ಯವಾಗಿತ್ತು.

ಈಗ ಕೆಲವು ವಾರಗಳ ಮಾತುಕತೆಯ ನಂತರ ಮತ್ತೆ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವುದಾಗಿ ತಮ್ಮ ಮೈತ್ರಿಯನ್ನು ಅಂತಿಮಗೊಳಿಸಿವೆ. ಈ ಒಪ್ಪಂದದ ಭಾಗವಾಗಿ ಉತ್ತರಪ್ರದೇಶದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಗೆ 17 ಸ್ಥಾನಗಳನ್ನು ನೀಡಲಾಗಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ನರೇಶ್ ಉತ್ತಮ್ ಪಟೇಲ್ ಘೋಷಣೆ ಮಾಡಿದ್ದಾರೆ. ಅವುಗಳೆಂದರೆ ರಾಯಬರೇಲಿ, ಅಮೇಥಿ, ಕಾನ್ಪುರ, ಪತೇಪುರ್ ಸಿಕ್ರಿ, ಬನ್ಸ್ ಗಾಂವ್, ಸಹರಾನ್ಪುರ್, ಪ್ರಯಾಗ್ ರಾಜ್, ಮಹಾರಾಜ್ಗಂಜ್, ವಾರಣಾಸಿ, ಅಮ್ರೋಹಾ, ಝಾನ್ಸಿ, ಬುಲಂದ್ಶಹರ್, ಗಾಜಿಯಾ ಬಾದ್, ಮಥುರ, ಸೀತಾಪುರ, ಬಾರಾಬಂಕಿ ಮತ್ತು ಡಿಯೋರಿಯಾ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ.

Lok Sabha Elections - Congress Samajwadi Alliance Contest

ನರೇಶ್ ಅವರ ಪ್ರಕಾರ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜಂಟಿಯಾಗಿ ಸವಾಲು ಹಾಕಲು ಎರಡು ಪಕ್ಷಗಳು ಈ ಸೀಟು ಹಂಚಿಕೆಯ ಸ್ಟ್ರಾಟಜಿಯನ್ನು ಒಪ್ಪಿಕೊಂಡಿವೆ. ಹಾಗೆ ನೋಡುವುದಾದರೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಕಳೆದ ವರ್ಷ ಅಷ್ಟೇ ಬಿಜೆಪಿಯ ವಿರುದ್ಧ ಸ್ಪರ್ಧಿಸಲು ಸ್ಥಾಪನೆಗೊಂಡ ಇಂಡಿ ಮೈತ್ರಿಕೂಟದ ಸದಸ್ಯ ಪಕ್ಷಗಳೇ ಆಗಿದೆ. ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶದ ಉಸ್ತುವಾರಿ ಅವಿನಾಶ್ ಪಾಂಡೆ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಸಮಾಜವಾದಿ ಪಾರ್ಟಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಅನ್ನು ಖಚಿತಪಡಿಸಿದ್ದು ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಹಾಗೂ ಉಳಿದ 63 ಸ್ಥಾನಗಳನ್ನು ಎಸ್ಪಿ ಮತ್ತು ಇತರ ಪಕ್ಷಗಳನ್ನು ಒಳಗೊಂಡಿರುವ ಇಂಡಿ ಮೈತ್ರಿಕೂಟದ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಭರ್ತಿ ಮಾಡುತ್ತಾರೆ ಎಂದು ಹೇಳಿದ್ದಾರೆ.

Lok Sabha Elections - Congress Samajwadi Alliance Contest

ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶ ರಾಜ್ಯ ಒಂದರಲ್ಲಿ ಬಿಜೆಪಿಯು 70ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಮೂಲಕ ಬಿಜೆಪಿಯು ಕೆಂದ್ರದಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತದೆ.

ಅದೇನೇ ಇದ್ದರೂ ಚುನಾವಣೆ ಮುಗಿಯುವ ತನಕವೂ ಕಾಂಗ್ರೆಸ್ ಪಕ್ಷದ ಜೊತೆಗೆ ಯಾವೆಲ್ಲ ಪಕ್ಷಗಳು ಇರಲಿವೆ ಎಂಬುದನ್ನು ಊಹಿಸಲು ಕಷ್ಟ ಸಾಧ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿಗೆ ಸವಾಲು ಒಡ್ಡಲು ಸಜ್ಜಾಗಿದ್ದ ಹಾಗೂ ಬಿಜೆಪಿಯನ್ನು ಮಣಿಸಲು ಇಂಡಿ ಮೈತ್ರಿಕೂಟದ ಮಾಸ್ಟರ್ ಪ್ಲಾನ್ ಮಾಡಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ ಖುದ್ದು ಈಗ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ರಾಜಕೀಯದಲ್ಲಿ ಯಾವುದು ಯಾವಾಗ ಬೇಕಾದರೂ ಸಂಭವಿಸಬಹುದಾದ್ದರಿಂದ ಚುನಾವಣೆ ಬರುವ ತನಕ ಯಾವ ಪಾರ್ಟಿಗಳು ಯಾರಿಗೆ ಬೆಂಬಲಿಸಲಿದೆ ಎಂಬುದನ್ನು ಹೇಳಲು ಅಸಾಧ್ಯವಾಗಿದೆ.

You might also like
Leave A Reply

Your email address will not be published.