ಸರಯೂ ತಟದಲ್ಲಿ ಅತೀವ ದೈವಿಕ ಶಕ್ತಿ – ಪಿ. ಟಿ. ಉಷಾ

ಸರಯೂ ನದಿ ತಟದಲ್ಲಿ ವಿಶೇಷವಾದ ದೈವಿಕ ಶಕ್ತಿಯ ಅನುಭವವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಹಂಚಿಕೊಂಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಗಮಿಸಿರುವ ಅವರು, ಸರಯೂ ನದಿ ತೀರಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಸರಯೂ ನದಿಯ ದಡದಲ್ಲಿ ವಿಶೇಷವಾದ ಶಾಂತಿಯನ್ನು ಅನುಭವಿಸಿದೆ. ದೈವಿಕ ಶಕ್ತಿಯ ಅನುಭವವಾಗಿದೆ. ಈ ನದಿಯು ಅಯೋಧ್ಯೆ ಮತ್ತು ಭಗವಾನ್ ರಾಮನ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಇಂದಿಗೂ ತನ್ನ ದೈವಿಕ ಶಕ್ತಿಯಿಂದ ಜನರನ್ನು ಆಶೀರ್ವದಿಸುತ್ತಿದೆ ಎಂದು ಅವರು X ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ಸರಯೂ ನದಿಯ ದಡದಲ್ಲಿ ನೆರೆದಿದ್ದ ಸ್ಥಳೀಯರು ಮತ್ತು ಭಕ್ತರೊಂದಿಗೆ ಅವರು ಸಂವಾದ ನಡೆಸಿದ್ದು, ಈ ವೀಡಿಯೋವನ್ನು ಅವರು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.

You might also like
Leave A Reply

Your email address will not be published.