ನಾನೇ ಭಾಗ್ಯವಂತ – ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್

ನಾನು ಈ ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿಯಾಗಿದ್ದು, ನನ್ನ ಪೂರ್ವಜರು, ಕುಟುಂಬ ಸದಸ್ಯರು, ಭಗವಾನ್ ರಾಮಲಲ್ಲಾನ ಆಶೀರ್ವಾದ ಎಂದಿಗೂ ನನ್ನ ಮೇಲಿದೆ ಎಂದು ರಾಮಲಲ್ಲಾನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಭಾವುಕರಾಗಿ ನುಡಿದಿದ್ದಾರೆ.

Arun Yogiraj is the sculptor of Ramlalla

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗಾಗಿ ರಾಷ್ಟ್ರವು ಕುತೂಹಲದಿಂದ ಕಾಯುತ್ತಿದೆ. ಅರುಣ್ ಯೋಗಿರಾಜ್ ಅವರು ಸಮರ್ಪಣೆ ಮತ್ತು ಸಾರ್ಥಕತೆಯ ಸಂಕೇತವಾಗಿ ಅಯೋಧ್ಯೆಯಲ್ಲಿ ನಿಂತಿದ್ದಾರೆ. ಈ ಸ್ಮರಣೀಯ ಘಳಿಗೆಯು ಯೋಗಿರಾಜ್ ಅವರ ಕುಶಲತೆ ಮತ್ತು ಶ್ರೀರಾಮನ ಭಕ್ತಿಗೆ ಸಾಕ್ಷಿಯಾಗಿದೆ.

ಈ ವೇಳೆ ಅರುಣ್ ಅವರು ಅಯೋಧ್ಯೆ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಂಡು, ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ಅನಿಸುತ್ತದೆ. ಈ ದಿನ ನನ್ನ ಬದುಕಿನಲ್ಲಿ ಸ್ಮರಣೀಯ ದಿನವಾಗಿದೆ ಎಂದು ಭಾವುಕರಾದರು.

You might also like
Leave A Reply

Your email address will not be published.