ಚುನಾವಣಾ ಸಮಯದಲ್ಲಿ ಭಯೋತ್ಪಾದನಾ ಸಂಚು : ಇಬ್ಬರು ಐಸಿಎಸ್ ಉಗ್ರರ ಬಂಧನ

ಭಾರತದಲ್ಲಿ ಐಸಿಸ್ ಮಾದರಿಯ ಇಬ್ಬರು ಉನ್ನತ ನಾಯಕರನ್ನು ಅಸ್ಸಾಂ ಪೋಲಿಸರು ಧುಬ್ರಿಯಲ್ಲಿ ಬಂಧಿಸಿದ್ದಾರೆ. ಬಂಧಿತರಲ್ಲಿ ಹಾರಿಸ್ ಅಲಿಯಾಸ್ ಹರೀಶ್ ಅಜ್ಮಲ್ ಫಾರೂಖಿ ಮತ್ತು ಅನುರಾಗ್ ಸಿಂಗ್ ಅಲಿಯಾಸ್ ರೆಹಾನ್ ಎಂದು ಗುರುತಿಸಲಾಗಿದೆ.

ಬಂಧಿತ ಹಾರೀಸ್ ಭಾರತದಲ್ಲಿ ಐಸಿಸ್ ಮುಖ್ಯಸ್ಥನಾದರೆ ರೆಹಾನ್ ಅವನ ಆಪ್ತ ಸಹಾಯಕನಾಗಿದ್ದ, ಇವರಿಬ್ಬರೂ ಭಾರತದಲ್ಲಿ ಬಹುವಾಗಿ ಚರ್ಚೆಗೆ ಒಳಪಟ್ಟವರಾಗಿದ್ದು ಐಸಿಸ್ ನೇಮಕಾತಿ, ಫಂಡಿಂಗ್, ಮತ್ತು ಭಯೋತ್ಪಾದಕ ಕೃತ್ಯ ನಿಯೋಜನೆ ಹೀಗೆ ಹಲವಾರು ಪ್ರಕರಣಗಳಲ್ಲಿ ಪೋಲಿಸರಿಗೆ ಹಾಗೂ ಎನ್.ಐ.ಎ‌. ಗೆ ಬೇಕಾದ ಅವರು ಕೆಲಕಾಲ ಬಾಂಗ್ಲಾದೇಶದಲ್ಲಿ ತಲೆಮರೆಸಿಕೊಂಡಿದ್ದರು. ಇತ್ತೀಚೆಗಷ್ಟೇ ಭಾರತ ಪ್ರವೇಶಿಸಿದ ಅವರ ಮೇಲೆ ಭಾರತೀಯ ಪೋಲಿಸರು, NIA ಎಲ್ಲರ ಕಣ್ಣುಗಳೂ ಇದ್ದವು.‌ ಸಾರ್ವತ್ರಿಕ ಚುನಾವಣೆ ಇರುವ ಹಿನ್ನಲೆಯಲ್ಲಿ ಏನಾದರೂ ಅಪಾಯದ ಸಂಚು ನಡೆಸುತ್ತಿದ್ದರೇ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ.

ಗುಪ್ತಚರ ವರದಿಯ ಆಧಾರದ ಮೇಲೆ ಎಸ್.ಟಿ.ಎಫ್. ತಂಡವು ಮಾರ್ಚ್ 19 ರಂದು ಧುಬ್ರಿ ತಲುಪಿತು ಭಯೋತ್ಪಾದಕರು ಅಂತರಾಷ್ಟ್ರೀಯ ಗಡಿ ದಾಟಿದ ಸುಳಿವು ಸಿಗುತ್ತಲೇ ಮಾರ್ಚ್ 20 ರ ಮುಂಜಾನೆ 4ಗಂಟೆಯ ಸುಮಾರಿಗೆ ಧುಬ್ರಿಯ ಧರ್ಮಶಾಲಾ ವ್ಯಾಪ್ತಿಯಿಂದ ಅವರನ್ನು ಬಂಧಿಸಲಾಯಿತು.

Election-time terror plot: Two ICS militants arrested

ಪೋಲಿಸ್ ಹೇಳಿಕೆಯ ಪ್ರಕಾರ,

ದಿನಾಂಕ 20/03/2024 ರ ಬೆಳಿಗ್ಗೆ 4.15 ರ ಸುಮಾರಿಗೆ ಆರೋಪಿಗಳು ಅಂತರಾಷ್ಟ್ರೀಯ ಗಟಿ ದಾಟಿ ದುರ್ಭಿಯ ಧರ್ಮ ಶಾಲ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾರೆ. ಇಬ್ಬರನ್ನೂ ಬಂಧಿಸಿ ಗುವಾಹಟಿಉ ಎಸ್‌.ಟಿ.ಎಫ್‌ ಕಛೇರಿಗೆ ಕರೆತರಲಾಗಿದ್ದು ಇಬ್ಬರ ಗುರುತನ್ನೂ ಪತ್ತೆಹಚ್ಚಲಾಗಿದೆ. ಬಂಧಿತ ಹ್ಯಾರಿಸ್ ಡೆಹ್ರಾಡೂನ್‌ನ ಚಕ್ರತಾ ಮೂಲದವನಾಗಿದ್ದು ರೆಹಾನ್ ಪಾಣಿಪಾತ್ ದಿವಾನಾದ ಮನ್‌ಬೀರ್ ಸಿಂಗ್ ಎಂಬುವವರ ಮಗ. ಈ ಇಬ್ಬರೂ ಭಾರತದ ಐಸಿಸ್ ಘಟಕದ ಮುಖ್ಯಸ್ಥರಾಗಿದ್ದು ಜನರನ್ನು ದಾರಿತಪ್ಪಿಸುವ ಕೆಲಸ ಸಲೀಸಾಗಿ ಮಾಡುತ್ತಿದ್ದರು ಎನ್ನಲಾಗಿದೆ.

ಅವರ ಯೋಜನೆಗಳು ಹಾಗೂ ಭಯೋತ್ಪಾದಕ ಕಾರ್ಯಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರಕಬೇಕಿದ್ದು ಪೋಲಿಸ್ ವಿಚಾರಣೆಯಲ್ಲಿ ತಿಳಿದುಬರಬಹುದು.

You might also like
Leave A Reply

Your email address will not be published.