ಚೆನ್ನೈ ತಂಡದ ನಾಯಕತ್ವ ಸ್ಥಾನ ತೊರೆದ ಧೋನಿ – ಇವರೇ ನೂತನ ನಾಯಕ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನವನ್ನು ಎಂ.ಎಸ್ ಧೋನಿ (MS Dhoni) ತೊರೆದಿದ್ದು, ಯುವ ಆಟಗಾರ ಸಾರಥ್ಯ ವಹಿಸಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ʼನ (IPL) 17ನೇ ಸೀಸನ್ (IPL Season 17) ಆರಂಭವಾಗುವ ಮುನ್ನಾದಿನವೇ ಎಂ.ಎಸ್ ಧೋನಿಯವರು ಚೆನೈ ಸೂಪರ್ ಕಿಂಗ್ಸ್ ತಂಡದ ತಮ್ಮ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಐಪಿಎಲ್ʼನ 17ನೇ ಸೀಸನ್ʼನ ಮೊದಲ ಪಂದ್ಯ ನಾಳೆಯೇ ಮಾರ್ಚ್ 22ರಂದು ಚೆನ್ನೈ ಹಾಗೂ ಆರ್ʼಸಿಬಿಯ ನಡುವೆ ಚೆನ್ನೈ ಕ್ರೀಡಾಂಗಣದಲ್ಲಿ ನಡೆಯಲಿದೆ.

ಚೆನ್ನೈ ತಂಡದ ಹೊಸ ನಾಯಕನಾಗಿ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ (Ruturaj Gaikwad) ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಪಿಎಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಎಲ್ಲಾ 10 ತಂಡದ ನಾಯಕರು ಜೊತೆಯಾಗಿ ತೆಗೆಸಿಕೊಂಡಿದ್ದು, ಎಂಎಸ್ ಧೋನಿ ಬದಲಾಗಿ ರುತುರಾಜ್ ಗಾಯಕ್ವಾಡ್ (Ruturaj Gaikwad) ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

Dhoni left the captaincy of the Chennai team ̲- he is the new captain

ಸಿಎಸ್‌ಕೆ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿದ ಎಂಎಸ್ ಧೋನಿ (MS Dhoni) 2022ರ ಆವೃತ್ತಿಯಲ್ಲಿ ಕೂಡ ಸಿಎಸ್‌ಕೆ ನಾಯಕನ ಬದಲಾವಣೆಯ ಪ್ರಯೋಗ ಮಾಡಿತ್ತು. ಧೋನಿ ಬದಲಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra jadeja) ಅವರನ್ನು ನಾಯಕರನ್ನು ಮಾಡಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡದ ಕಾರಣ, ಪಂದ್ಯಾವಳಿಯ ಮಧ್ಯದಲ್ಲೇ ಮತ್ತೆ ಧೋನಿ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿತ್ತು.

2023ರ ಆವೃತ್ತಿಯಲ್ಲಿ ಮತ್ತೆ ತಂಡದ ಸಾರಥ್ಯ ವಹಿಸಿಕೊಂಡಿದ್ದ ಧೋನಿ (MS Dhoni) ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಅಲ್ಲದೇ, 5ನೇ ಬಾರಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷವೇ ಅವರು ನಿವೃತ್ತಿಯಾಗುತ್ತಾರೆ ಎನ್ನಲಾಗುತ್ತಿತ್ತು, ಆದರೆ ಅಭಿಮಾನಿಗಳಿಗಾಗಿ ಈ ವರ್ಷವೂ ಐಪಿಎಲ್ʼನಲ್ಲಿ ಆಡಲು ನಿರ್ಧರಿಸಿದ್ದಾರೆ. ಇದೇ ಅವರ ಕೊನೆಯ ಐಪಿಎಲ್ ಎಂದು ಹೇಳಲಾಗುತ್ತಿದೆ.

You might also like
Leave A Reply

Your email address will not be published.