ಚಾರಣ ಕೇವಲ ಹವ್ಯಾಸವಲ್ಲ, ಆರೋಗ್ಯಕ್ಕೂ ಮದ್ದು

ಭಾರತದಂತ ದೇಶದಲ್ಲಿ ವ್ಯಾಯಾಮಗಳು ಹಾಗೂ ದೈಹಿಕ ಕಸರತ್ತುಗಳಿಗೆ ಮೊದಲಿನಿಂದಲೂ ಮಾನ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಟ್ರೆಕ್ಕಿಂಗ್ ಕೂಡ ಅಷ್ಟೇ ಮಹತ್ವ ಪಡೆಯುತ್ತಿದೆ. ಹಾಗಂತ ಪರ್ವತಾರೋಹಣ ಅಥವಾ ಚಾರಣವೇನು ತೀರ ಇತ್ತೀಚೆಗೆ ಶುರುವಾದದ್ದಲ್ಲ. ಮೌಂಟ್ ಎವರೆಸ್ಟ್ ನಂತಹ ಶಿಖರವನ್ನೇ 1952 ರಲ್ಲಿ ಏರಲಾಗಿತ್ತು. ಅಂದಿನಿಂದ ಇಲ್ಲಿಯ ತನಕ ಪರ್ವತಗಳು ಚಿಕ್ಕದಿರಲಿ ಅಥವಾ ದೊಡ್ಡದೇ ಇರಲಿ ಅಲ್ಲಿಗೆ ಹೋಗುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹಾಗೂ ಇತ್ತೀಚೆಗೆ ಜಿಮ್‌ಗೆ ಹೋಗುವುದಕ್ಕಿಂತ ಹೆಚ್ಚಿನ ಜನರು ಟ್ರೆಕ್ಕಿಂಗ್‌ಗಳಿಗೆ ಹೋಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ದಿನದ ಕೇವಲ ಅರ್ಧ ಗಂಟೆ ನಡಿಗೆಯು ದೇಹದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಸಂಶೋಧನೆಗಳೇ ಹೇಳಿವೆ. ಅಲ್ಲದೇ ಟ್ರೆಕ್ಕಿಂಗ್‌ನಿಂದ ಕೇವಲ ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೆ ದಿನದ ಹೆಚ್ಚಿನ ಭಾಗ ಸೂರ್ಯನ ಕೆಳಗೆಯೇ ಕಳೆಯುವುದರಿಂದ ದೇಹದಲ್ಲಿ ವಿಟಮಿನ್ ಡಿ ಕೊರತೆಯಿದ್ದರೆ ಅದನ್ನು ಕೂಡ ಇದು ನಿಭಾಯಿಸಬಲ್ಲದು. ಪ್ರಪಂಚದಲ್ಲಿ ಸುಮಾರು 1 ಬಿಲಿಯನ್ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಹಾಗಾದರೆ ಟ್ರೆಕ್ಕಿಂಗ್ ನಿಂದ ಇರುವ ಇತರ ಪ್ರಯೋಜನಗಳಾದರೂ ಯಾವುವು? ಬನ್ನಿ ತಿಳಿದುಕೊಳ್ಳೋಣ.

1. ಶ್ರೀಮಂತವಾದ ಸಸ್ಯ ಸಂಕುಲ ಮತ್ತು ವನ್ಯಜೀವಿಗಳ ಅನುಭವ.
ಪಕ್ಷಿ ಮತ್ತು ಪ್ರಾಣಿ ಪ್ರೇಮಿಗಳು ಹಾಗೂ ವೈವಿಧ್ಯಮಯ ವನ್ಯಜೀವಿಗಳು ಔಷಧೀಯ ಗುಣ ಹೊಂದಿದ ಸಸ್ಯ ರಾಶಿಗಳನ್ನು ಹಾಗೂ ತೀರ ವಿರಳವಾಗಿ ಕಾಣಸಿಗುವ ಮರಗಳನ್ನು ನೋಡಬಹುದು. ನಗರೀಕರಣದಿಂದಾಗಿ ಹೆಚ್ಚಿನ ಶಹರುಗಳಲ್ಲಿ ಮರಗಳೇ ಇಲ್ಲದಂತಾಗಿದ್ದು, ಟ್ರಕ್ಕಿಂಗ್ ನಿಂದ ವೈವಿಧ್ಯಮಯ ಸಸ್ಯಗಳನ್ನಷ್ಟೇ ಅಲ್ಲದೆ ವನ್ಯಜೀವಿಗಳನ್ನು ತೀರ ಹತ್ತಿರದಿಂದ ಕಾಣಬಹುದು.

2. ಹೃದಯ ಮತ್ತು ಶ್ವಾಸಕೋಶಗಳಿಗೆ ಪ್ರೋತ್ಸಾಹ.
ಟ್ರಕ್ಕಿಂಗ್ ನಿಂದಾಗಿ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ಶುದ್ಧ ಗಾಳಿಯನ್ನು ಪಡೆಯಬಹುದಾಗಿದೆ. ಹೆಚ್ಚು ಹೆಚ್ಚು ಶುದ್ಧ ಗಾಳಿಯನ್ನು ಉಸಿರಾಟದೊಂದಿಗೆ ಸೇವನೆ ಮಾಡುವುದರಿಂದ ಶ್ವಾಸಕೋಶಗಳು ಹೆಚ್ಚು ಸಮರ್ಥವಾಗುತ್ತದೆ ಹಾಗೂ ರಕ್ತದ ಹರಿವು ಹೆಚ್ಚೆಚ್ಚಾಗುತ್ತದೆ. ಶ್ವಾಸಕೋಶಗಳು ಆರೋಗ್ಯಕರವಾಗಿರುತ್ತವೆ. ಅಷ್ಟೇ ಅಲ್ಲದೆ ದೀರ್ಘಕಾಲದ ತನಕ ಬ್ಯಾಗ್‌ಪ್ಯಾಕ್ ನೊಂದಿಗೆ ನಡಿಗೆ ಮಾಡುವುದರಿಂದಾಗಿ ಹೃದಯ ರಕ್ತನಾಳದ ತಾಲೀಮಿಗೂ ಕಾರಣವಾಗುತ್ತದೆ ಹಾಗೂ ಕೊಲೆಸ್ಟ್ರಾಲ್ & ರಕ್ತದೊತ್ತಡವನ್ನು ಕೂಡ ಟ್ರಕ್ಕಿಂಗ್ ನಿಂದ ಕಂಟ್ರೋಲ್ ಮಾಡಬಹುದು.

Trekking is not just a hobby, it is also a medicine for health

3. ದೇಹದ ತೂಕ ಇಳಿಸುವಿಕೆ
ಟ್ರಕ್ಕಿಂಗ್ ನಲ್ಲಿ ದಿನದ ಆರು ಏಳು ಗಂಟೆಗಳ ಕಾಲ ಚಿಕ್ಕ ಬ್ಯಾಗ್ ನೊಂದಿಗೆ ನಡಿಗೆ ಮಾಡುವುದರಿಂದಾಗಿ ಇದು ದೇಹದ ಇಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಇದರಿಂದಾಗಿ ದೈಹಿಕವಾಗಿ ಫಿಟ್ನೆಸ್ ಕಾಯ್ದುಕೊಂಡು ದೇಹದ ತೂಕವನ್ನು ಸಹಜವಾಗಿಯೇ ಕಡಿಮೆ ಮಾಡಿಕೊಳ್ಳಬಹುದು.

4. ಶಿಸ್ತು ಮತ್ತು ಕಠಿಣ ಪರಿಶ್ರಮ
ಟ್ರೆಕ್ಕಿಂಗ್‌ನಿಂದ ಸಮಿಟ್ ವರೆಗೆ ತಲುಪಲು ಪ್ರತಿಯೊಂದು ಹೆಜ್ಜೆ ಇಡುವಾಗಲೂ ಕೂಡ ಪರ್ವತಾರೋಹಿಯ ತಾಳ್ಮೆ ಮತ್ತು ದೃಢತೆಯನ್ನು ಪರೀಕ್ಷೆ ಮಾಡಲಾಗುತ್ತದೆ. ಸಮಿಟ್‌ ತನಕ ತಲುಪಲು ಚಾರಣಿಗರು ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಹಾಗೂ ಪರ್ವತಗಳಲ್ಲಿ ಯಾವ ಘಟನೆ, ಯಾವಾಗ ಬೇಕಾದರೂ ಸಂಭವಿಸಬಹುದಾದ್ದರಿಂದ ಶಿಸ್ತು ಅಲ್ಲಿ ಅನಿವಾರ್ಯ. ಹಾಗೂ ಟೀಮ್ ವರ್ಕ್ ಕೂಡ ಅಷ್ಟೇ ಮುಖ್ಯ ಒಬ್ಬರಿಗೊಬ್ಬರು ಸಹಾಯದೊಂದಿಗೆ ಗುರಿ ಮುಟ್ಟುವಲ್ಲಿ ಇದು ಯಶಸ್ಸು ತಂದುಕೊಡುತ್ತದೆ.

5. ದೀರ್ಘಾವಧಿಯ ಜೀವನ

ಹೃದಯಸ್ತಂಭನ ಮತ್ತು ಹೃದಯಘಾತ ಹಾಗೂ ಸ್ಟ್ರೋಕ್ ನಿಂದ ಅಪಾಯವನ್ನು 30% ಗಿಂತ ಕಡಿಮೆ ಮಾಡಲು ನಿಧಾನಗತಿಯಲ್ಲಿ ಎಂಟು ಕಿಲೋಮೀಟರ್ ಪಾದಯಾತ್ರೆ ಮಾಡಿದರೆ ಸಾಕಾಗುತ್ತದೆ ಎಂಬುದನ್ನು ವರದಿಗಳು ಬಹಿರಂಗಪಡಿಸಿವೆ. ಎಂಟು ಕಿಲೋ ಮೀಟರ್ ಎಂದರೆ ಸುಮಾರು 10,000 ಹೆಜ್ಜೆಗಳು ಅಷ್ಟೇ ಅಲ್ಲದೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಕೂಡ ಟ್ರಕ್ಕಿಂಗ್ ಒಂದು ಔಷಧವಾಗಿದೆ.

Trekking is not just a hobby, it is also a medicine for health

7. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು.
ನಗರದಲ್ಲಿರುವ ಗದ್ದಲಗಳಿಂದ ದೂರವಾಗಿ ಪ್ರಶಾಂತತೆಯೊಂದಿಗೆ ರಮಣೀಯ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ರಾತ್ರಿ ನಕ್ಷತ್ರಗಳ ಹಿಂಡು ತಾಜಾ ಗಾಳಿಯ ಉಸಿರಾಟ ಇವೆಲ್ಲವೂ ಕೂಡ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತವೆ. ಆಧುನಿಕ ಭಾಷೆಯಲ್ಲಿ ಡಿಪ್ರೆಶನ್ ಎಂದು ಕರೆಯಲ್ಪಡುವ ಮಾನಸಿಕ ಖಿನ್ನತೆಯ ಒಂದು ಕಾಯಿಲೆಯಿಂದ ಹೊರಬರಲು ತುಂಬಾ ಸಹಕಾರಿಯಾಗಿದೆ. ಹೆಚ್ಚಿನ ಸಮಯವನ್ನು ನಾವು ಪ್ರಕೃತಿಯೊಂದಿಗೆ ಕಳೆಯುವುದರಿಂದಾಗಿ ಮನಸ್ಸಿನ ಒತ್ತಡ ಮಾತ್ರವಲ್ಲದೆ ರಕ್ತ ಒತ್ತಡ ಕೂಡ ಕಡಿಮೆಯಾಗಿ ಉತ್ತಮವಾಗಿ ನಿದ್ರೆ ಹಾಗೂ ಉತ್ತಮ ಆರೋಗ್ಯ ನಮ್ಮದಾಗಲಿದೆ.

ಹಾಗಾದರೆ, ಇನ್ಯಾಕೆ ತಡ? ನಿಮ್ಮ ದೈಹಿಕ ಆರೋಗ್ಯದ ಜೊತೆಜೊತೆಗೆ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಇಂದೇ ನಿಮ್ಮಿಷ್ಟದ ಪರ್ವತಗಳಿಗೆ ಸ್ನೇಹಿತರೊಡಗೂಡಿ ಹೊರಟುಬಿಡಿ. ಹೊರಡುವಾಗ ಪರ್ವತದಲ್ಲಿ ಪಾಲಿಸಬೇಕಾದ ಶಿಸ್ತುಗಳನ್ನು ಮರೆಯದಿರಿ.

You might also like
Leave A Reply

Your email address will not be published.