ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೇ ಸೇತುವೆ ಲೋಕಾರ್ಪಣೆ ಮಾಡಿದ ಮೋದಿ

ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ 1,486 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆಗೆ ಮೋದಿ ಚಾಲನೆ ನೀಡಿದರು.

ಭವ್ಯವಾದ ಹಿಮಾಲಯ ಬೆಟ್ಟಗಳ ನಡುವೆ ಇರುವ ಅತ್ಯಾಧುನಿಕ ಇಂಜಿನಿಯರಿಂಗ್‌ ಅಚ್ಚರಿ ಎನಿಸಿಕೊಂಡಿರುವ ಇದು ಚೆನಾಬ್‌ ನದಿಯಿಂದ ಬರೋಬ್ಬರಿ 359 ಮೀಟರ್‌ ಎತ್ತರದಲ್ಲಿದೆ. ಐಫೆಲ್ ಟವರ್‌ ಗಿಂತ‌ 35 ಮೀಟರ್ ಎತ್ತರವಾಗಿ ನಿಂತಿರುವ ಚೆನಾಬ್ ಸೇತುವೆಯು ಚೆನಾಬ್ ನದಿಯ ಮೇಲೆ ನಿರ್ಮಿಸಲಾದ ಕಮಾನು-ಆಕಾರದ ಉಕ್ಕಿನ ರಚನೆಯು ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶದ ವಿಭಾಗಗಳನ್ನು ಸಂಪರ್ಕಿಸುತ್ತದೆ.

ಚೆನಾಬ್ ಸೇತುವೆಯ ನಿರ್ಮಾಣವು ಉಧಮ್‌ ಪುರ, ಶ್ರೀನಗರ, ಬಾರಾಮುಲ್ಲಾ ರೈಲು ಮಾರ್ಗ (USBRL) ಯೋಜನೆಯ ಭಾಗವಾಗಿ 2002 ರಲ್ಲಿ ಪ್ರಾರಂಭವಾಯಿತು ಮತ್ತು ಆಗಸ್ಟ್ 2022 ರಲ್ಲಿ ಪೂರ್ಣಗೊಂಡಿತು.

ಭಾರತೀಯ ರೈಲ್ವೆಯ ವೀಡಿಯೊ ಪ್ರಕಾರ, ಹೊಸದಾಗಿ ಉದ್ಘಾಟನೆಗೊಂಡ ರೈಲು ಮಾರ್ಗವು ಈ ಆಯಕಟ್ಟಿನ ಮಹತ್ವದ ಪ್ರದೇಶದಲ್ಲಿ ನೆಲೆಸಿರುವ ಸಶಸ್ತ್ರ ಪಡೆಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೆ ಕೊಡುಗೆ ನೀಡುತ್ತದೆ. ಹಾಗೂ ಉಧಂಪುರ್, ಶ್ರೀನಗರ, ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯು ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ, ವಂದೇ ಭಾರತ್ ಮೆಟ್ರೋ ರೈಲು ಜಮ್ಮು ಮತ್ತು ಶ್ರೀನಗರ ನಡುವೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ.

ಚೆನಾಬ್ ಸೇತುವೆಯನ್ನು ಗಂಟೆಗೆ 266 ಕಿಲೋಮೀಟರ್‌ ವೇಗದಲ್ಲಿ ಬೀಸುವ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ತೀವ್ರತೆಯ ವಲಯದ ಭೂಕಂಪನ ಸಹಿಸಿಕೊಳ್ಳುತ್ತದೆ. ಅದಕ್ಕಿಂತ ಹೆಚ್ಚಾಗಿ, ಇದು 120 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಚೆನಾಬ್‌ನ ಎರಡೂ ದಡಗಳಾದ ಕೌರಿ ಎಂಡ್‌ ಮತ್ತು ಬಕ್ಕಲ್‌ ಎಂಡ್‌ನಲ್ಲಿ ಬೃಹತ್‌ ಕೇಬಲ್‌ ಕ್ರೇನ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಸೇತುವೆಯ ಸುಂದರ ನೋಟವನ್ನು ಇದು ನೀಡಿದೆ.

ಫೆಬ್ರವರಿ 20 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಬನಿಹಾಲ್-ಸಂಗಲ್ದನ್ ರೈಲ್ವೆ ಮಾರ್ಗವನ್ನು ಉದ್ಘಾಟಿಸಿದರು ಮತ್ತು ಬಾರಾಮುಲ್ಲಾ ನಿಲ್ದಾಣದಿಂದ ಕಾಶ್ಮೀರ ಕಣಿವೆಯಲ್ಲಿ ಮೊದಲ ವಿದ್ಯುತ್ ರೈಲಿಗೆ ಚಾಲನೆ ನೀಡಿದರು. 15,863 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ರೈಲು ಮಾರ್ಗವು ಪ್ರಾದೇಶಿಕ ಸಾರಿಗೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. 48 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಈ ರೈಲುಮಾರ್ಗವು ರಾಂಬನ್ ಜಿಲ್ಲೆಯ ಬನಿಹಾಲ್‌ ನಿಂದ ದೋಡಾ ಜಿಲ್ಲೆಯ ಸಂಗಲ್ದಾನ್‌ ಗೆ ಸಂಪರ್ಕ ಕಲ್ಪಿಸುತ್ತದೆ.

Modi inaugurated world's highest Chenab Railway Bridge

ಚೆನಾಬ್ ಸೇತುವೆ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ

ಚೆನಾಬ್ ಸೇತುವೆಯು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ. ಇದು ಚೆನಾಬ್ ನದಿಯ ಮೇಲೆ ಸುಮಾರು 359 ಮೀಟರ್ (1,178 ಅಡಿ) ಎತ್ತರದಲ್ಲಿದೆ. 1.3 ಕಿಮೀ ಉದ್ದವಿದೆ.

ಇದು ಕತ್ರಾದಿಂದ ಬನಿಹಾಲ್‌ವರೆಗಿನ 111-ಕಿಮೀ ವ್ಯಾಪ್ತಿಯಲ್ಲಿ ನಿರ್ಣಾಯಕ ಸಂಪರ್ಕವನ್ನು ರೂಪಿಸುತ್ತದೆ. ಹಾಗೂ 21,653 ಕೋಟಿ ರೂಪಾಯಿಯ ಉಧಮ್‌ ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ ಯೋಜನೆಯ ಭಾಗವಾಗಿದೆ.

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ (USBRL) ಯೋಜನೆಯ ಭಾಗವಾಗಿ 2002 ರಲ್ಲಿ ಚೆನಾಬ್ ಸೇತುವೆಯ ನಿರ್ಮಾಣ ಪ್ರಾರಂಭವಾಯಿತು. ಕಮಾನು 2021 ರಲ್ಲಿ ಪೂರ್ಣಗೊಂಡರೆ, ಸೇತುವೆಯ ಒಟ್ಟಾರೆ ನಿರ್ಮಾಣವು ಆಗಸ್ಟ್ 2022 ರಲ್ಲಿ ಪೂರ್ಣಗೊಂಡಿತು.

ಸೇತುವೆ ಆಧುನಿಕ ಎಂಜಿನಿಯರಿಂಗ್ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಗಂಟೆಗೆ 266 ಕಿಮೀ ವೇಗದ ಗಾಳಿಯ ವೇಗ, ಭೂಕಂಪಗಳು ಮತ್ತು ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಸೇತುವೆಯು ಕಮಾನಿನ ಆಕಾರದ ವಿನ್ಯಾಸವನ್ನು ಹೊಂದಿದೆ, ಇದು ವಾಸ್ತುಶಿಲ್ಪದ ಅದ್ಭುತವಾಗಿದೆ. ಕಮಾನು ಉಕ್ಕಿನಿಂದ ಮಾಡಲ್ಪಟ್ಟಿದೆ ಮತ್ತು ಸೇತುವೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ಕಮಾನು ಸೇತುವೆಯು 17 ಸ್ಪ್ಯಾನ್‌ಗಳನ್ನು ಹೊಂದಿದೆ ಮತ್ತು ಮುಖ್ಯ ಕಮಾನು ವ್ಯಾಪ್ತಿಯ ರೇಖೀಯ ಉದ್ದವು 460 ಮೀಟರ್ ಮತ್ತು ಇದು ವಕ್ರರೇಖೆಯಾಗಿದೆ. ಸೇತುವೆಯ ಜೀವಿತಾವಧಿಯು 120 ವರ್ಷಗಳು ಮತ್ತು ಸೇತುವೆಯು ಮೇಲೆ ರೈಲು 100 ಕಿಲೋಮೀಟರ್‌ ವೇಗದಲ್ಲಿ ಸಾಗಬಹುದು.

You might also like
Leave A Reply

Your email address will not be published.