ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಕಾಡುತ್ತಿದೆ ಆರ್ಥಿಕ ಹಿಂಜರಿತದ ಭೀತಿ

ಈ ಆರ್ಥಿಕ ಹಿಂಜರಿತ ಅನ್ನೋದು ಯಾರ ಮನೆಯ ಬಾಗಿಲನ್ನು ತಟ್ಟಿಲ್ಲ ನೀವೆ ಹೇಳಿ!? ಒಂದಲ್ಲ ಒಂದು ಸಂದರ್ಭದಲ್ಲಿ ಆರ್ಥಿಕ ಹಿಂಜರಿತದಿಂದ ಬಲಳಿರುವ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿದೆ. ಕಳೆದ ವಾರವಷ್ಟೇ ಬ್ರಿಟನ್ ಮತ್ತು ಜಪಾನ್ ನಲ್ಲಿ ಆರ್ಥಿಕ ಸಮಸ್ಯೆ ಕಂಡುಬಂದಿತ್ತು. ಇದೀಗ ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ಜರ್ಮನ್ ಗೂ ಇದೇ ಸಮಸ್ಯೆ ಒಕ್ಕರಿಸಿದೆ ಎಂದರೆ, ಇದಕ್ಕೆ ಕಾರಣವಾದರು ಏನು? ಎಂಬುದರ ಕುರಿತಾದ ವರದಿ ಇಲ್ಲಿದೆ.

2023 ರ ಕೊನೆಯ ತ್ರೈಮಾಸಿಕದಲ್ಲಿ ಶೇ.0.3ರಷ್ಟು ಕುಸಿತ ಕಂಡಿದ್ದ ಜರ್ಮನಿಯ ಜಿಡಿಪಿ, ಜನವರಿ- ಮಾರ್ಚ್ ನಡುವಣ ಮೊದಲ ತ್ರೈಮಾಸಿಕ ಅವಧಿಯಲ್ಲಿ ಮತ್ತೊಮ್ಮೆ ಕುಂಠಿತವಾಗಬಹುದು ಎಂದು ದೇಶದ ಕೇಂದ್ರೀಯ ಬ್ಯಾಂಕ್ ಆಗಿರುವ ಬುಂಡೇಸ್‌ ಬ್ಯಾಂಕ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ.

ಸತತ ಎರಡು ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಕುಂಠಿತವಾದರೆ ಜರ್ಮನಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ದೂಡಲ್ಪಡುತ್ತದೆ. ಗಮನಾರ್ಹ ಎಂದರೆ, ಕಳೆದ ವಾರವಷ್ಟೇ ಜಪಾನ್ ಅನ್ನು ಹಿಂದಿಕ್ಕಿ ಜರ್ಮನಿ ವಿಶ್ವದ 3ನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿತ್ತು.

Developed countries are facing the threat of economic recession

2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ತರುವಾಯ ಜರ್ಮನಿಯಲ್ಲಿ ಹಣದುಬ್ಬರ ಹೆಚ್ಚಾಗಿದೆ. ಇದರ ಜತೆಗೆ ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಇಳಿಮುಖವಾಗಿದೆ. ವಿದೇಶಗಳಿಂದ ಬೇಡಿಕೆ ಕಡಿಮೆಯಾಗಿ, ಗ್ರಾಹಕರ ವೆಚ್ಚ ತಗ್ಗಿ, ದೇಶೀಯ ಹೂಡಿಕೆ ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ರೈಲು ಹಾಗೂ ವಿಮಾನಯಾನ ವಲಯ ಸೇರಿ ದಂತೆ ವಿವಿಧ ನೌಕರರು ಮುಷ್ಕರ ನಡೆಸಿದ್ದು ಕೂಡ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎಂದು ಜರ್ಮನಿಯ ಕೇಂದ್ರೀಯ ಬ್ಯಾಂಕ್ ಹೇಳಿದೆ.

You might also like
Leave A Reply

Your email address will not be published.