ಮುಸ್ಲಿಮರಲ್ಲಿ “ಮರ್ಯಾದಾ ಹತ್ಯೆ” ನಡೆದರೆ ಸುದ್ದಿಯಾಗುವುದೇ ಇಲ್ಲ – ಯಾಕೆ? ಈ ವರದಿ ಓದಿ.

ಭಾರತದಲ್ಲಿ ಅಂತರಧರ್ಮೀಯ ವಿವಾಹಗಳು ಅದರಲ್ಲೂ ಮುಸ್ಲಿಂ ಹುಡುಗ ಹಿಂದೂ ಹುಡುಗಿ ಮದುವೆ ಆಗಿದ್ದಲ್ಲಿ ಮಾನವತೆಯ,‌ ಮಾನವೀಯತೆಯ ಸೋಗು ಧರಿಸಿ ಇದು ಪ್ರೇಮಕ್ಕೆ ಸಿಕ್ಕ ಜಯ ಎಂದು ಪುಂಖಾನುಪುಂಖವಾಗಿ ಪುಂಗುವ ಎಡಪಂಥೀಯರು, ಅದೇ ಮುಸ್ಲಿಂ ಹುಡುಗಿ ಹಿಂದೂ ಹುಡುಗ ಮದುವೆ ಆಗಿದ್ದಲ್ಲಿ ಆಕಾಶವೇ ತಲೆಯ ಮೇಲೆ ಬಿದ್ದವರ ಹಾಗೆ ಆಡುತ್ತಾರೆ. ಅಷ್ಟೇ ಯಾಕೆ ಒಂದು ಹೆಜ್ಜೆ ಮುಂದುವರೆದು ಮರ್ಯಾದಾ ಹತ್ಯೆಗಳು ನಡೆದರೂ ತುಟಿಪಿಟಿಕ್ ಎನ್ನದಿರುವುದು ಮಾತ್ರ ಸೋಜಿಗವೇ ಸರಿ!!

ಇದಕ್ಕೆ ಸಾಕ್ಷಿ ಎಂಬಂತೆ ಕೇರಳ ಮತ್ತು ಉತ್ತರಪ್ರದೇಶದಲ್ಲಿ ನಡೆದ ಎರಡು ಹೇಯ ಕೃತ್ಯಗಳು ತಡವಾಗಿ ಬೆಳಕಿಗೆ ಬಂದಿದ್ದು, ಎಡಪಂಥೀಯರ ಆಶಾಕಿರಣಗಳಾದ ರಾಣಾ, ಸ್ವರ, ಅರ್ಫಾನಂತ ಬುದ್ದಿಇಲ್ಲದ‌ ಬುದ್ದಿಜೀವಿಗಳು ತಮ್ಮ ಬಾಯಿಗಳಿಗೆ ಬೀಗ ಜಡಿದು ಕೂತಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಕೇರಳದ 43 ವರ್ಷದ ಇಂಜಿನಿಯರ್ ಅಬೀಸ್ ಮೊಹಮ್ಮದ್ ಎಂಬಾತನ ಮಗಳು ಫಾತಿಮಾ ಅನ್ಯಧರ್ಮೀಯ ಯುವಕನನ್ನು ಪ್ರೇಮಿಸುತ್ತಿರುವ ವಿಷಯ ತಿಳಿದು ಕುಪಿತನಾಗಿ ಮಗಳಿಗೆ ಹಲವುಬಾರಿ ವಾರ್ನಿಂಗ್ ನೀಡುತ್ತಾನೆ. ಹಾಗಿದ್ದು ಆಕೆ ಪ್ರಿಯಕರನ ಜೊತೆ ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸದ ಕಾರಣ ಕಬ್ಬಿಣದ ರಾಡೊಂದರಿಂದ ಫೋನ್ ಅನ್ನು ಒಡೆದು ಹಾಕುತ್ತಾನೆ. ಹಾಗಿದ್ದೂ ಕೂಡಾ ಯುವತಿ ಬೇರೊಂದು ಪೋನ್‌ನ ಮುಖಾಂತರ ತನ್ನ ಪ್ರಿಯಕರನ ಜೊತೆ ಸಂಪರ್ಕದಲ್ಲಿರುವುದನ್ನು ಅರಿತು ಮಗಳೆಂಬ ಮಮತೆ, ಮನುಷ್ಯತ್ವವನ್ನೇ ಮರೆತು ಒತ್ತಾಯಪೂರ್ವಕವಾಗಿ ‘herbicide’ ಅನ್ನು ಕುಡಿಸುತ್ತಾನೆ. ಮನೆಯ ಕೆಲಸದವಳು ಮತ್ತು ತಾಯಿಯ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ಯುವತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ತಂದೆ ಎನ್ನುವ ಮೃಗದ ಮೇಲೆ sections 342 (wrongful confinement), 324 (hurting using a dangerous weapon), 326-A (causing grievous injury) and 307 (murder attempt) of the IPC and section 75 of the Juvenile Justice Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಉತ್ತರಾಖಂಡದ ರೂರ್ಖಿ ಮುಜಾಫರ ನಗರದ ಯುವತಿ ದೆಹಲಿಯ ಸಂಬಂಧಿಕರ ಮನೆಯಲ್ಲಿ ವಾಸವಿರುತ್ತಾರೆ. ಆಕೆಯನ್ನು‌ ಮನೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಆಕೆಯ ಸಹೋದರ ಸೂಫಿಯಾನ್ ಮತ್ತು ಸೋದರ ಸಂಬಂಧಿ ಮಹತಬ್ ಮುರಾದ್‌ನಗರದ ಗಂಗಾ ಕಿನಾರೆಗೆ ಕರೆದೊಯ್ದು, ಟವೆಲ್ ಒಂದರಲ್ಲಿ ಉಸಿರುಕಟ್ಟಿಸುವ ಮೂಲಕ ನಿರ್ದಯವಾಗಿ ಕೊಲ್ಲುತ್ತಾರೆ. ಅಷ್ಟೇ ಅಲ್ಲದೇ ಶವವನ್ನು ಗಂಗಾನದಿಗೆ ಎಸೆಯುತ್ತಾರೆ. ಯುವಕರ ಮೇಲೆ ಅನುಮಾನಗೊಂಡ ಸ್ಥಳೀಯರು ವಿಚಾರಿಸಲಾಗಿ, ಯುವತಿಯ ಸಹೋದರ ಆಕೆಯು ಗಾಜಿಯಾಬಾದ್‌ ಮೂಲದ ಅನ್ಯಧರ್ಮೀಯ ಯುವಕನನ್ನು ಪ್ರೇಮಿಸುತ್ತಿದ್ದುದಾಗಿಯೂ ಅದಕ್ಕೆ ಕುಟುಂಬದ ಒಪ್ಪಿಗೆ ಇಲ್ಲದಾಗ್ಯೂ ಆಕೆ ಮುಂದೆವರೆಸಿದರ ಪರಿಣಾಮ ಆಕೆಯನ್ನು ಸಾಯಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾನೆ. ಸಂಬಂಧಿಸಿದ ಕಾಯ್ದೆಗಳ ಅಡಿಯಲ್ಲಿ ಆರೋಪಿಗಳನ್ನು ಬಂದಿಸಲಾಗಿದೆಯಾದರೂ ಭಾರತದ ಮಹಾ ಮಾನವತಾವಾದಿಗಳ ಹಾಗೆ ಪೋಸು ಕೊಡುವ ಎಡಪಂಥೀಯರು ಉಸಿರೆತ್ತದೆ ಇರುವುದು ಮಾತ್ರ ಅವರ ಡಬಲ್ ಸ್ಟ್ಯಾಂಡರ್ಡ್‌ಗೆ ಸಾಕ್ಷಿಯಾಗಿದೆ.

You might also like
Leave A Reply

Your email address will not be published.