ಮತ್ತೆ ವಕ್ಕರಿಸಿದ ಕೋವಿಡ್ – ಬೆಂಗಳೂರಲ್ಲಿ ಮೊದಲ ಬಲಿ

“ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ” ಅನ್ನೋ ಹಾಗೆ ಕೊರೋನ ವೈರಸ್ ನ ರೂಪಾಂತರಿ ಜೆಎನ್1 ವೈರಸ್ ದೇಶದಲ್ಲಿ ಪತ್ತೆಯಾದ ಬಳಿಕ ಬೆಂಗಳೂರಿನಲ್ಲಿ ಮೊದಲ ಬಲಿಯಾಗಿದೆ.

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಚಾಮರಾಜಪೇಟೆಯ 64 ವರ್ಷದ ವೃದ್ಧ ಸಾವನ್ನಪ್ಪಿದ್ದು, ಡಿಸೆಂಬರ್ 15 ರಂದು ಶಿವಾನಂದ ಸರ್ಕಲ್ ಬಳಿಯ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಟೆಸ್ಟ್ ಅಲ್ಲಿ ಪಾಸಿಟಿವ್ ಕಂಡುಬಂದಿತ್ತು.

ಮೃತವ್ಯಕ್ತಿ ಒಟ್ಟು 10 ಜನರ ಜೊತೆ ಸಂಪರ್ಕಿತನಾಗಿದ್ದು, 4 ಮಂದಿ ಪ್ರೈಮರಿ ಕಾಂಟಾಕ್ಟ್ ಹಾಗೂ 6 ಮಂದಿ ಸೆಕೆಂಡರಿ ಕಾಂಟಾಕ್ಟ್ ಅಲ್ಲಿದ್ದರು. ಈ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನು ಒಂದು ವಾರದವರೆಗೆ ಹೋಮ್ ಐಸೋಲೇಷನ್ ಮಾಡಿದ್ದು, ಅವರ ಅಕ್ಕಪಕ್ಕದ ಮನೆಯವರನ್ನು ಕೂಡ ಪರೀಕ್ಷೆ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗೆ ಶ್ವಾಸಕೋಶದ ಸಮಸ್ಯೆ, ಕ್ಷಯ ರೋಗ, ಶ್ವಾಸನಾಳದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇನ್ನೂ ಈ ವ್ಯಕ್ತಿಯ ಸ್ಯಾಂಪಲ್ಸ್ ಪಡೆದಿದ್ದು, ಜೀನೋಮ ಸೀಕ್ವೆನ್ಸಿಂಗ್ ಕಳಿಸಲಾಗಿದೆ. ಈ ವಾರದಲ್ಲಿ ರೀಪೋರ್ಟ್ ಬರಲಿದೆ ಎಂದು ಮಾಹಿತಿ ಒದಗಿಸಿದ್ದಾರೆ.

ದೇಶದಲ್ಲಿ ಒಟ್ಟು 20 ರೂಪಾಂತರಿ ಕೇಸ್ ಗಳು ಪತ್ತೆ

ಗೋವಾದಲ್ಲಿ 18, ಕೇರಳದಲ್ಲಿ 1 ಹಾಗೂ ಮಹಾರಾಷ್ಟ್ರದಲ್ಲಿ 1 ಕೇಸ್ ಪತ್ತೆಯಾಗಿದ್ದು, ಒಟ್ಟಾರೆಯಾಗಿ ದೇಶದಲ್ಲಿ 20 ಕೋವಿಡ್ ರೂಪಾಂತರ ತಳಿ Jn1 ಕೇಸ್‌ಗಳು ಪತ್ತೆಯಾಗಿದೆ.

ಈ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮವಾಗಿ ನಮ್ಮ ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಪ್ರಕ್ರಿಯೆ ಆರಂಭವಾಗಿದೆ. ಡಿ.19 (ಮಂಗಳವಾರ) ರಂದು 772 ಜನರಿಗೆ ಟೆಸ್ಟ್ ಮಾಡಿದ್ದು, ನಾಳೆಯಿಂದ ಅಂದರೆ ಡಿ.21ರಿಂದ 5 ಸಾವಿರ ಕೋವಿಡ್ ಟೆಸ್ಟ್ ನಡೆಸಲಿದ್ದೇವೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

You might also like
Leave A Reply

Your email address will not be published.