ನೆಹರೂ ಕಾಲದ ಕಾನೂನಿಗೆ ಮುಕ್ತಿ : ನ್ಯಾಯ ಪ್ರಕ್ರಿಯೆಯಲ್ಲಿ ಹೊಸ ಭರವಸೆ ಮೂಡಿಸಿದ ಅಮಿತ್ ಶಾ

ಬ್ರಿಟಿಷರ ವಸಾಹತು ಕಾಲದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಮಸೂದೆಗಳನ್ನು ಇಂದು ಲೋಕಸಭೆ ಅಂಗೀಕರಿಸಿದೆ.

1860 ರ ಭಾರತೀಯ ದಂಡ ಸಂಹಿತೆ (IPC), 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಹಾಗೂ 1872 ರ ಭಾರತೀಯ ಸಾಕ್ಷ್ಯ ಸಂಹಿತೆ ಕಾಯ್ದೆಗಳ ಬದಲಾಗಿ ಭಾರತೀಯ ನ್ಯಾಯ (ಎರಡನೇ) ಸಂಹಿತಾ, 2023, ಭಾರತೀಯ ನಾಗರಿಕ ಸುರಕ್ಷಾ (ಎರಡನೇ) ಸಂಹಿತಾ, 2023 ಮತ್ತು ಭಾರತೀಯ ಸಾಕ್ಷಿ (ಎರಡನೇ) ಮಸೂದೆ, 2023 ರ ಮಸೂದೆಗಳನ್ನು ಅಂಗೀಕರಿಸಲಾಗಿದೆ.

ಐಪಿಸಿ, ಸಿಆರ್ʼಪಿಸಿ ಹಾಗೂ ಎವಿಡೆನ್ಸ್ ಆಕ್ಟ್ʼಗಳ ಬದಲಾಗಿ ಭಾರತೀಯ ನ್ಯಾಯ (ದ್ವಿತೀಯ) ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ 2023 ಮತ್ತು ಭಾರತೀಯ ಸಾಕ್ಷಿ (ದ್ವಿತೀಯ) ಮಸೂದೆ 2023 ಗಳನ್ನು ಜಾರಿಗೆ ತರಲಾಗಿದೆ.

ಲೋಕಸಭೆ ಅಧಿವೇಶನದ ವೇಳೆ ನಡೆದಿದ್ದ ಭದ್ರತಾ ವೈಫಲ್ಯಕ್ಕೆ ಕಾರಣರಾದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ವಜಾ ಮಾಡುವಂತೆ ಪಟ್ಟು ಹಿಡಿದು ಸಭಾಪತಿ ಸ್ಥಾನಕ್ಕೆ ಕಳಂಕ ತಂದಿದ್ದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷಗಳ 143 ಸದಸ್ಯರನ್ನು ಕಳೆದ ಎರಡು ದಿನಗಳಲ್ಲಿ ಅಮಾನತುಗೊಳಿಸಲಾಗಿದೆ.

ಇಂದಿನ ಅಧಿವೇಶನದಲ್ಲಿ ಇನ್ನಿಬ್ಬರು ಸಂಸದರನ್ನು ಅಮಾನತುಗೊಳಿಸುವುದರೊಂದಿಗೆ ಲೋಕಸಭೆಯಲ್ಲಿ ಅಮಾನತುಗೊಂಡವರ ಸಂಖ್ಯೆ 97ಕ್ಕೆ ತಲುಪಿದೆ. ಇವರ ಅನುಪಸ್ಥಿತಿಯ ನಡುವೆಯೇ ಲೋಕಸಭೆಯಲ್ಲಿ ನೂತನ ಮಸೂದೆಗಳು ಅಂಗೀಕಾರವಾಗಿವೆ.

You might also like
Leave A Reply

Your email address will not be published.