ಇಬ್ಬರು ಹಿಂದೂ ಮಕ್ಕಳ ಕತ್ತು ಸೀಳಿ ಕೊಂದ ಮುಸ್ಲಿಂನನ್ನು ಎನ್’ಕೌಂಟರ್ ಮಾಡಿದ ಯೋಗಿ ಪೊಲೀಸರು

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ದೇಶವೇ ಬೆಚ್ಚಿಬೀಳುವಂತ ಬರ್ಬರ ಕೃತ್ಯ ನಡೆದಿದ್ದು, ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಬ್ಬರು ಅಪ್ರಾಪ್ತ ಹಿಂದೂ ಬಾಲಕರನ್ನು ಸಾಜಿದ್ ಎಂಬ ಮುಸ್ಲಿಂ ವ್ಯಕ್ತಿ ಕತ್ತು ಸೀಳಿ ಕೊಲೆ ಮಾಡಿದ್ದು ಮೂರನೇ ಮಗುವನ್ನೂ ಸಾಯಿಸಲು ಯತ್ನಿಸಿದ್ದು, ಮಗು ಅಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಜಿದ್‌ನ ಈ ಕೃತ್ಯಕ್ಕೆ ಆತನ‌ ಸಹೋದರ ಜಾವೇದ್ ಸಾತ್ ನೀಡಿದ್ದು ಈಗ ಆತನಿಗಾಗಿ ಶೋಧ ನಡೆಯುತ್ತಿದೆ.

ಹತ್ಯೆಯ ನಂತರ ಅದರ ರಕ್ತವನ್ನು ಕುಡಿಸಿದ್ದಾರೆ ಎಂದು ಆರೋಪ ಮಾಡಿರುವ ಕಟುಂಬಸ್ಥರು, ಹಿಂದೂ ಸಂಘಟನೆಗಳು ಹಾಗೂ ಇತರರು ಪೋಲಿಸ್ ಠಾಣೆಗೆ ಬಂದು ಪ್ರತಿಭಟನೆ ನಡೆಸಿದ್ದು, ಮುಖ್ಯ ಆರೋಪಿ ಸಾಜಿದ್‌ನನ್ನು ಈಗಾಗಲೇ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ. ಆರೋಪಿಗಳಾದ ಸಾಜಿದ್ ಮತ್ತು ಜಾವೇದ್ ಈ ಕುಟುಂಬದ ಮನೆಯ ಎದುರೇ ಸಲೂನ್‌ ನಡೆಸುತ್ತಿದ್ದರು ಎನ್ನಲಾಗಿದೆ.

 

View this post on Instagram

 

A post shared by Richa Rajpoot (@doctorrichabjp)

ಘಟನೆ ನಡೆದ ಸಂಧರ್ಭದಲ್ಲಿ ದಂಪತಿಗಳು ಮನೆಯಲ್ಲಿರಲಿಲ್ಲ, ಮೃತ ಮಕ್ಕಳ ತಂದೆ ವಿನೋದ್ ಗಾಜಿಪುರದಲ್ಲಿ ನೀರಿನ ಟ್ಯಾಂಕ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರೆ, ವಿನೋದ್ ಪತ್ನಿ ಹತ್ತಿರದ ಬ್ಯೂಟಿಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದುದಾಗಿ ವರದಿಯಾಗಿದೆ. ಮಂಗಳವಾರ ಸಂಜೆ ಅಂದರೆ ನಿನ್ನೆ ಸಂಜೆ ಸರಿಸುಮಾರು 6 ಗಂಟೆಗೆ ದಂಪತಿಗಳ ಮನೆಗೆ ಪ್ರವೇಶಿಸಿದ ಆರೋಪಿಗಳು ಮಕ್ಕಳಿಗೆ ಏನಾದರೂ ತಿನ್ನಿಸುವ ಆರೋಪದ ಮೇಲೆ ಮನೆಯೊಳಗೆ ಕರೆದುಕೊಂಡು ಹೋಗಿ ಸೀದಾ ಕತ್ತುಸೀಳಿದ್ದಾರೆ.‌ ಘಟನೆಯಲ್ಲಿ14 ವರ್ಷದ ಆಯುಷ್ ಮತ್ತು 6 ವರ್ಷದ ಹನಿ ಮೃತಪಟ್ಟಿದ್ದು ಇನ್ನೊಂದು ಮಗು ಹೇಗೋ ತಪ್ಪಿಸಿಕೊಂಡಿದೆ. ಮಕ್ಕಳ ಕಿರುಚಾಟ ಕೇಳಿ ಜನರ ಗುಂಪು ಜಮಾಯಿಸ ತೊಡಗಿದಾಗ ಜನರನ್ನು ನೋಡಿ ಘಟನಾಸ್ಥಳದಿಂದ ಜಾವೇದ್ ಕಾಲ್ಕಿತ್ತಿದ್ದಾನೆ.

ಇಬ್ಬರು ಆರೋಪಿಗಳಲ್ಲಿ ಓರ್ವ ಸಾಜಿದ್ ಪೋಲಿಸರಿಗೆ ಸಿಕ್ಕಿದ್ದು, ಪೊಲೀಸರ ಮೇಲೆಯೇ ದಾಳಿ ಮಾಡಲು ಯತ್ನಿಸಿದರ ಪರಿಣಾಮ ಆತನನ್ನು ಎನ್ ಕೌಂಟರ್ ‌ಮಾಡಿ ಕೊಲ್ಲಲಾಗಿದೆ. ಸಾಥ್ ನೀಡಿದ ಜಾವೇದ್‌ಗಾಗಿ ಶೋಧಕಾರ್ಯ ಮುಂದುವರೆದಿದೆ.‌ ಘಟನೆಯಿಂದ ಆಕ್ರೋಶಭರಿತರಾದ ಸ್ಥಳೀಯರು ಸಾಜಿದ್‌ಗೆ ಸೇರಿದ ಸಲೂನ್ ಅನ್ನು ಸಂಪೂರ್ಣವಾಗಿ ಧ್ವಂಸ ಗೊಳಿಸಿರುವುದಾಗಿ ವರದಿಯಾಗಿದೆ.

You might also like
Leave A Reply

Your email address will not be published.