ಐಪಿಎಲ್‌ಗೂ ಮೊದಲು ಉಜ್ಜೈನಿಯ ಮಹಾಕಾಲೇಶ್ವರ ಮಂದಿರಕ್ಕೆ ಭೇಟಿನೀಡಿದ ಕೆ.ಎಲ್.ರಾಹುಲ್

ಐಪಿಎಲ್ ತಂಡಗಳ ಪೈಕಿ ಸಧ್ಯಕ್ಕೆ ಲಖ್ನೌ ಸೂಪರ್ ಜೈಂಟ್ಸ್ (LSG) ತಂಡವನ್ನು ಮುನ್ನಡೆಸುತ್ತಿರುವ ಕರ್ನಾಟಕದ ಹುಡುಗ ಕೆ.ಎಲ್‌.ರಾಹುಲ್ LSG ತಂಡದ ಜೊತೆ ಅಭ್ಯಾಸಕ್ಕಾಗಿ ಸೇರುವ ಮುನ್ನ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜೈನಿಯ ಶ್ರೀ ಮಹಾಕಾಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಾಹುಲ್ ಕೊನೆಯ ಬಾರಿ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಪರವಾಗಿ ಕಾಣಿಸಿಕೊಂಡಿದ್ದರು. ನಂತರ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬರಬೇಕಾಯಿತು. ಈಗ ಎರಡು ತಿಂಗಳ ವಿರಾಮದ ಬಳಿಕ ಮತ್ತೆ ಕಣಕ್ಕಿಳಿಯುತ್ತಿದ್ದಾರೆ ಸ್ಕಿಪ್ಪರ್ ಕೆ‌ಎಲ್!

ಈವರೆಗೆ ಐಪಿಎಲ್‌ನ 118 ಪಂದ್ಯಗಳಲ್ಲಿ 4163 ರನ್ ಗಳಿಸಿರುವ ರಾಹುಲ್ ಗುಡ್ ಸ್ಕೋರರ್ ಎನಿಸಿಕೊಂಡಿದ್ದಾರೆ. ನಾಲ್ಕು ಸೀಸನ್‌ನಲ್ಲಿ 600ಕ್ಕೂ ಹೆಚ್ಚು ರನ್ ಕಲೆ ಹಾಕಿದ್ದಾರೆ. ಐಪಿಎಲ್ ‌ನಲ್ಲಿ ವಿರಾಟ್ ಕೋಹ್ಲಿಯ ನಂತರ ಅತೀ ಹೆಚ್ಚು ಶತಕಗಳನ್ನು ಕಲೆಹಾಕಿದ ಎರಡನೇ ಭಾರತೀಯ ಆಟಗಾರ ಕೆಎಲ್ ಎಂಬುದು ಹೆಮ್ಮೆಯ ವಿಷಯ. ಒಟ್ಟಾರೆ ಐಪಿಎಲ್ ಪಂದ್ಯಗಳಲ್ಲಿ 33 ಅರ್ಧ ಶತಕಗಳು ಕೆ.ಎಲ್. ರಾಹುಲ್ ಹೆಸರಿನಲ್ಲಿವೆ‌.

You might also like
Leave A Reply

Your email address will not be published.