ದಕ್ಷಿಣ ಅಮೆರಿಕಾದ ಹಿಮಾಲಯ, ಈ ಆಂಡಿಸ್ ಪರ್ವತಗಳು

ಹೇಗೆ ಹಿಮಾಲಯ ಪರ್ವತ ಶ್ರೇಣಿಗಳು ಭಾರತ, ನೇಪಾಳ ಹಾಗೂ ಟಿಬೆಟ್ ಪ್ರಾಂತ್ಯದ ಬೆನ್ನೆಲುಬಾಗಿದೆಯೋ ಹಾಗೆಯೇ ಆಂಡಿಸ್ ಪರ್ವತಗಳು ದಕ್ಷಿಣ ಅಮೆರಿಕಾದ ಬೆನ್ನೆಲುಬು ಎಂದೆ ಪ್ರಸಿದ್ಧಿ ಹೊಂದಿವೆ. ಆಂಡಿಸ್ ಪರ್ವತಗಳು ಅಪಾರವಾದ ಪರಿಸರ ಹಾಗೂ ಭೌಗೋಳಿಕ ವೈವಿಧ್ಯತೆಯ ಶ್ರೇಣಿಯಾಗಿದ್ದು, ಲಕ್ಷಾಂತರ ವರ್ಷಗಳ ಹಿಂದೆ ಆದ ಪರ್ವತಗಳ ರಚನೆಯಿಂದ ಸ್ಥಳೀಯ ಸಂಸ್ಕೃತಿಗಳ ಮೇಲೆ ಕೂಡ ಪ್ರಭಾವ ಬೀರಿವೆ ಆಂಡಿಸ್ ಪರ್ವತಗಳ ಕೆಲವು ರೋಚಕ ಸಂಗತಿಗಳು ಇಲ್ಲಿವೆ.

ಭೌಗೋಳಿಕವಾಗಿ ನೋಡುವುದಾದರೆ ಆಂಡಿಸ್ ಪರ್ವತಗಳು ಸುಮಾರು 50ರಿಂದ 80 ಮಿಲಿಯನ್ ವರ್ಷಗಳ ಹಿಂದೆ ಟಾನಿಕ್ ಚಟುವಟಿಕೆ ಪರಿಣಾಮವಾಗಿ ರೂಪುಗೊಂಡವು ಎಂದು ಹೇಳಲಾಗುತ್ತದೆ. ನಜ್ಕ ಮತ್ತು ಅಮೆರಿಕಾದ ಟೆಕ್ಟೋನಿಕ್ ಪ್ಲೇಟ್‌ಗಳ ಘರ್ಷಣೆಯಿಂದಾಗಿ ಈ ಪರ್ವತ ಶ್ರೇಣಿಗಳು ರೂಪುಗೊಂಡವು. ಈ ಪರ್ವತ ಶ್ರೇಣಿಯು ಪ್ರಪಂಚದಲ್ಲೇ ಅತಿ ಉದ್ದವಾದ ಭೂಖಂಡದ ಪರ್ವತ ಶ್ರೇಣಿಯಾಗಿದ್ದು, ಉತ್ತರದಿಂದ ದಕ್ಷಿಣಕ್ಕೆ ಸರಿಸುಮಾರು 7,000 ಕಿಲೋಮೀಟರ್ ಅಂದರೆ 4,350 ಮೈಲುಗಳು ವ್ಯಾಪಿಸಿದೆ ಹಾಗೂ ಇದು ಏಳು ದೇಶಗಳನ್ನು ಹಾದು ಹೋಗಿದೆ. ಅವುಗಳೆಂದರೆ ವೆನೆಜುವೇಲ, ಕೊಲಂಬಿಯ, ಇಕ್ವೆಡಾರ್, ಪೆರು, ಬೊಲಿವಿಯ, ಚಿಲಿ ಮತ್ತು ಅರ್ಜೆಂಟೀನಾ.

The Himalayas of South America, the Andes Mountains

ಏಷ್ಯಾ ಖಂಡದಿಂದ ಹೊರಗಿರುವ ಪ್ರಪಂಚದ ಅತಿ ಎತ್ತರದ ಶಿಖರವಾದ ಅಕೊನ್ಕಾಗುವಾ ಕೂಡ ಆಂಡಿಸ್ ಪರ್ವತ ಶ್ರೇಣಿಯಲ್ಲೇ ಇದೆ. ಅರ್ಜೆಂಟೈನಾದಲ್ಲಿ ಇರುವ ಅಕೊನ್ಕಾಗುವಾ ಪರ್ವತ ಶಿಖರವು ಸುಮಾರು 6960.8 ಮೀಟರ್ ಅಂದರೆ, 22,837 ಅಡಿ ಎತ್ತರದಲ್ಲಿದೆ. ಇದು ಆಂಡಿಸ್ ಶ್ರೇಣಿಯಲ್ಲಿರುವ ಅತಿ ಎತ್ತರದ ಶಿಖರವು ಹೌದು. ವೈವಿಧ್ಯಮಯ ಜೀವ ಸಂಕುಲಗಳು ಹಾಗೂ ಸಸ್ಯ ರಾಶಿಯನ್ನು ಹೊಂದಿದ ದೃಷ್ಟಿಯಿಂದ ವಿಶ್ವದ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿದ್ದು, ಪ್ರಪಂಚದ ಕೇವಲ ಒಂದು ಶೇಕಡ ಭೂ ಪ್ರದೇಶದಲ್ಲಿ ಎಲ್ಲ ಸಸ್ಯಗಳ ಆರನೇ ಒಂದು ಭಾಗದಷ್ಟು ನೆಲೆಯಾಗಿದೆ ಹಾಗೂ ಹಲವಾರು ವಿಚಿತ್ರ ಜಾತಿಯ ಸಸ್ಯ ಜಾತಿಗಳನ್ನು ಈ ಪರ್ವತ ಶ್ರೇಣಿಗಳು ಒಳಗೊಂಡಿದ್ದು, ಅವು ಈ ಪರ್ವತ ಶ್ರೇಣಿಗಳಲ್ಲಿ ಬಿಟ್ಟು ಬೇರೆ ಎಲ್ಲೂ ಕಾಣ ಸಿಗುವುದಿಲ್ಲ ಎನ್ನಲಾಗುತ್ತದೆ.

ಆಂಡಿಸ್ ಪರ್ವತ ಶ್ರೇಣಿಗಳ ಹವಾಮಾನವು ಪದೇ ಪದೇ ವ್ಯತ್ಯಾಸ ಗೊಳ್ಳುತ್ತಲೇ ಇರುತ್ತದೆ. ಹಾಗೂ ಇಲ್ಲಿನ ಹವಾಮಾನವು ಅಟಕಾಮ ಮರುಭೂಮಿಯಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಅವಲಂಬಿಸಿರುತ್ತದೆ. ಇದು ಭೂಮಿಯ ಮೇಲಿನ ಅತ್ಯಂತ ಒಣ ಜಾಗದಲ್ಲಿ ಒಂದು. ಒಂದು ವೇಳೆ ಮೋಡವಾಗಿ ಮಳೆಯಾದರೆ ಅತ್ಯಂತ ಮಳೆ ಬೀಳುವ ಜಾಗದಲ್ಲಿ ಒಂದಾಗಿರಲಿದೆ. ಹೀಗೆ ವಿಪರೀತ ಮಳೆ ಅಥವಾ ತೀರ ಒಣ ಹವೆಯನ್ನು ಉಂಟುಮಾಡುವ ಜಾಗ ಇದಾಗಿದೆ. ಇನ್ನು ಆಂಡಿಸ್ ಪರ್ವತ ಶ್ರೇಣಿಯ ಹತ್ತಿರದ ಸಂಸ್ಕೃತಿಗಳನ್ನು ನೋಡುವುದಾದರೆ ಅಮೆರಿಕಾದ ಪೂರ್ವ ಕೊಲಂಬಿಯ ನಾಗರಿಕತೆಗಳಲ್ಲಿ ಒಂದಾದ ಇಂಕಾ ಸಾಮ್ರಾಜ್ಯವನ್ನು ಇಲ್ಲಿ ಕಾಣಬಹುದಾಗಿದೆ. ಇಂಕಾಗಳು ಐತಿಹಾಸಿಕ ಅಭಯಾರಣ್ಯವನ್ನು ನಿರ್ಮಿಸಿದರು ಹಾಗೂ ವಿಶ್ವದ ಅತಿ ದೊಡ್ಡ ಹಾರುವ ಪಕ್ಷಿಗಳಲ್ಲಿ ಒಂದಾದ ಆಂಡಿಯನ್ ಕಾಂಡೋರ್ ಅನ್ನು ಕೂಡ ಇಲ್ಲಿಯೇ ಕಾಣಬಹುದಾಗಿದೆ. ಈ ಆಂಡಿಯನ್ ಕಾಂಡೊರ್ ಪಕ್ಷಿಗಳು ಇಲ್ಲಿನ ಸಾಂಸ್ಕೃತಿಕ ಮತ್ತು ಸಾಂಕೇತಿಕ ಮೌಲ್ಯವನ್ನು ಹೊಂದಿದೆ. ಆಂಡಿಸ್ ಪರ್ವತಗಳು ಸಕ್ರಿಯವಾಗಿ ಹಲವಾರು ಜ್ವಾಲಾಮುಖಿಗಳನ್ನು ಹೊಂದಿದ್ದು, ಒಟ್ಟಾರೆಯಾಗಿ ನೋಡುವುದಾದರೆ ಆಂಡಿಸ್ ಪರ್ವತ ಶ್ರೇಣಿಗಳನ್ನು ಜ್ವಾಲಾಮುಖಿಗಳ ಪಟ್ಟಿ ಎಂದು ಕರೆಯಲಾಗುತ್ತದೆ. ಇನ್ನು ಇಕ್ವೆಡಾರ್‌ನಲ್ಲಿರುವ ಫೋಟೋಪಾಕ್ಸಿ ವಿಶ್ವದ ಅತಿ ಹೆಚ್ಚು ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ.

The Himalayas of South America, the Andes Mountains

ಆಂಡಿಸ್ ಪರ್ವತ ಶ್ರೇಣಿಗಳು ವ್ಯಾಪಿಸಿರುವ ಏಳು ದೇಶಗಳ ಆಹಾರ ಪದ್ಧತಿಯ ಮೇಲೆ ಈ ಪರ್ವತ ಶ್ರೇಣಿಗಳು ಅತಿ ಹೆಚ್ಚು ಪ್ರಭಾವ ಬೀರಿದೆ ಎಂದರೆ ಖಂಡಿತ ತಪ್ಪಾಗಲಾರದು. ಆಲೂಗಡ್ಡೆ, ಕ್ವಿನೊವ ಮತ್ತು ಮೆಕ್ಕೆಜೋಳಗಳಂತಹ ಆಹಾರಗಳು ಆಂಡಿಸ್ ಪರ್ವತಗಳಿಂದಲೇ ಹುಟ್ಟಿಕೊಂಡಿವೆ ಎಂದು ಹೇಳಲಾಗುತ್ತದೆ ಹಾಗೂ ಇವುಗಳು ದಕ್ಷಿಣ ಅಮೆರಿಕಾದ ಸಾಂಸ್ಕೃತಿಕ ಆಹಾರಗಳಲ್ಲಿ ಪ್ರಧಾನವು ಆಗಿವೆ. ಇಂದು ಈ ಆಂಡಿಸ್ ಪರ್ವತಗಳು ಕ್ವಿಟೋ, ಇಕ್ವೆಡಾರ್ ಸೇರಿದಂತೆ ಅನೇಕ ಪ್ರಮುಖ ನಗರಗಳಿಗೆ ನೆಲೆಯಾಗಿದೆ ಲಾ ಪಾಜ್, ಬೊಲಿವಿಯಾ ಮತ್ತು ಸ್ಯಾಂಟಿಯಾಗೋ, ಚಿಲಿ ಈ ನಗರಗಳು ಆಧುನಿಕತೆಗೆ ಒಗ್ಗಿಕೊಳ್ಳುತ್ತಲೇ ತಮ್ಮ ಶ್ರೀಮಂತ, ಐತಿಹಾಸಿಕ ಪರಂಪರೆಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತವೆ.

ಇನ್ನು ಮನುಷ್ಯನ ಅತಿ ಆಸೆಗೆ ಒಳಗಾದ ಭೂ ಪ್ರದೇಶಗಳಲ್ಲಿ ಆಂಡಿಸ್ ಪರ್ವತಗಳೇನು ಹೊರತಲ್ಲ. ಇಷ್ಟೆಲ್ಲಾ ನೈಸರ್ಗಿಕ ಸೌಂದರ್ಯ ಮತ್ತು ವೈವಿಧ್ಯತೆಯ ಹೊರತಾಗಿಯು ಆಂಡಿಸ್ ಪರ್ವತಗಳು ಅರಣ್ಯನಾಶ, ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಅನೇಕ ನೈಸರ್ಗಿಕ ಬೆದರಿಕೆಗಳನ್ನು ಎದುರಿಸುತ್ತಿದೆ. ಪರ್ವತ ಶ್ರೇಣಿಗಳು ಯಾವುದೇ ಇರಲಿ ಅದು ಹಿಮಾಲಯವಾದರೂ ಸರಿ ಆಂಡಿಸ್ ಪರ್ವತ ಶ್ರೇಣಿಗಳಾದರೂ ಸರಿ ನಾವು ಹೇಗೆ ಪರಿಸರವನ್ನು ನೋಡಿಕೊಳ್ಳುತ್ತವೆಯೋ ಅದೇ ರೀತಿ ಪರಿಸರವು ನಮ್ಮನ್ನು ನೋಡಿಕೊಳ್ಳುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಜಾಗತಿಕ ಹವಾಮಾನ ಬದಲಾವಣೆಯು ಹಿಮಾಲಯ ಪರ್ವತ ಶ್ರೇಣಿಗಳ ಮೇಲೆ ಹೇಗೆ ಪರಿಣಾಮವಾಗಿದೆ ಎನ್ನುವುದಕ್ಕೆ ಹಿಮಾಲಯವು ಕರಗುತ್ತಿದೆ ಎಂಬ ಅಧ್ಯಯನಗಳು ಈಗಾಗಲೇ ಬಹಿರಂಗಗೊಂಡಿವೆ. ಅಷ್ಟೇ ಯಾಕೆ, ಇದೇ ಸಾಲಿನಲ್ಲಿ ಉತ್ತರಾಖಂಡ, ಹಿಮಾಚಲ ಕಾಶ್ಮೀರಗಳು ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಮೊದಲಿನಿಂದಲೇ ಹಿಮಾಮೃತವಾಗಬೇಕಿದ್ದ ಜಾಗಗಳಾಗಿದ್ದವು. ಆದರೆ ಜನವರಿ ಕೊನೆಯವರೆಗೂ ಹಿಮ ಬೀಳದೆ ಇದ್ದದ್ದು ಯಾವುದರ ಸಂಕೇತವಾಗಿದೆ ಹಾಗೂ ನಾವು ಹೇಗೆ ಪರ್ವತ ಶ್ರೇಣಿಗಳನ್ನು ನೋಡಿಕೊಳ್ಳಬೇಕು ಎಂಬುದಕ್ಕೆ ಅತಿ ದೊಡ್ಡ ಪಾಠವಾಗಿದೆ.

The Himalayas of South America, the Andes Mountains

You might also like
Leave A Reply

Your email address will not be published.