ಬೆಳ್ಳಂಬೆಳಿಗ್ಗೆ ಕೈಕೊಟ್ಟ ಮೆಟ್ರೋ – ಪ್ರಯಾಣಿಕರ ಪರದಾಟ

ರಾಜಧಾನಿ ಬೆಂಗಳೂರಲ್ಲಿ ಬಿಎಂಟಿಸಿಯಷ್ಟೇ ಮೆಟ್ರೋ ರೈಲು ಕೂಡ ಜನರ ಜೀವನಾಡಿಯಾಗಿದೆ. ಟ್ರಾಫಿಕ್‌ ಕಿರಿಕಿರಿಗೆ ಬಹುತೇಕ ದೂರ ಪ್ರಯಾಣ ಮಾಡುವ ಮಂದಿ ಮೆಟ್ರೋ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ನಮ್ಮ ಮೆಟ್ರೋ ನೆರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಕೆಲಸಕ್ಕೆ ತೆರಳುವ ಪ್ರಯಾಣಿಕರು ಇದೀಗ ಪರದಾಟ ಅನುಭವಿಸುತ್ತಿದ್ದಾರೆ.

ಗರುಡಚಾರ್ ಪಾಳ್ಯ, ಬೈಯಪ್ಪನಹಳ್ಳಿ ಮಾರ್ಗ ಮಧ್ಯೆ ಸಮಸ್ಯೆ ಎದುರಾಗಿದೆ. ಸಿಗ್ನಲಿಂಗ್ ಸಮಸ್ಯೆಯಿಂದ ಮೆಟ್ರೋ ಓಡಾಟ ವಿಳಂಬವಾಗುತ್ತಿದ್ದು, ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಮೆಟ್ರೋ ನಿಲ್ದಾಣದೊಳಗೆ ಪ್ರಯಾಣಿಕರು ಭದ್ರತಾ ವಿಭಾಗದ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ.

ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿ ಇಂದ ಗರುಡಾಚಾರ್ಪಾಳ್ಯ ನಡುವೆ ನಿಧಾನಗತಿಯಲ್ಲಿ ಮೆಟ್ರೋ ರೈಲುಗಳು ಓಡಾಟ ನಡೆಸುತ್ತವೆ. ಪ್ರತಿ ಅರ್ಧ ತಾಸಿಗೊಮ್ಮೆ ಮೆಟ್ರೋ ಓಡಾಟ ನಡೆಸುತ್ತಿದ್ದು, ಇದರಿಂದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಎಂಟ್ರಿ ಡೋರ್ ಕ್ಲೋಸ್ ಮಾಡಲಾಗಿದೆ. ಒಳಗಿಂದ ಬರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ.

Early morning metro problem - passenger stampede

ಈ ನಿಟ್ಟಿನಲ್ಲಿ ಎಂಟ್ರೆನ್ಸ್ ಬಳಿ ಪ್ರಯಾಣಿಕರು ಕಾದು ಕುಳಿತಿದ್ದಾರೆ. ಕ್ರೌಡ್ ಕ್ಲಿಯರ್ ಮಾಡಿದ ಬಳಿಕ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.‌ ಇತ್ತ ಕೆಲವು ಪ್ರಯಾಣಿಕರು ಆಟೋ, ಕ್ಯಾಬ್‌ ಬುಕ್‌ ಮಾಡಿಕೊಂಡು ತೆರಳುತ್ತಿದ್ದಾರೆ.

You might also like
Leave A Reply

Your email address will not be published.