ರಾಮಮಂದಿರದ ಕಲಾಸೇವೆಗೆ ರಾಯಚೂರಿನ ಯುವಶಿಲ್ಪಿ ಆಯ್ಕೆ- ಯಾರು ಗೊತ್ತ?

ಇಡೀ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆಯ ರಾಮನ ಪ್ರಾಣಪ್ರತಿಷ್ಠೆಗೆ ಮೂರೇ ದಿನಗಳು ಬಾಕಿ ಇವೆ. ಇನ್ನೂ ರಾಮಮಂದಿರ ನಿರ್ಮಾಣದಲ್ಲಿ ಶಿಲೆಯಿಂದ ಶಿಲ್ಪಿವರೆಗೂ ನಮ್ಮ ರಾಜ್ಯದೊಂದಿಗೆ ಅವಿನಾಭಾವ ಸಂಬಂಧವಿದೆ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರವೇ. ಆದರೆ, ರಾಮಮಂದಿರ ನಿರ್ಮಾಣದಲ್ಲಿ ರಾಯಚೂರಿನ ಯುವ ಶಿಲ್ಪಿಯೊಬ್ಬರು ತಮ್ಮ ಕಲಾ ಸೇವೆ ನೀಡುತ್ತಿರುವ ವಿಚಾರ ಎಷ್ಟು ಜನರಿಗೆ ತಿಳಿದಿದೆ? ಈ ಕುರಿತ ಮಾಹಿತಿ ಇಲ್ಲಿದೆ.

Sculptor Viresh Badiger

ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ಯುವ ಶಿಲ್ಪಿ ವಿರೇಶ್ ಬಡಿಗೇರ್ ಒಂದು ತಿಂಗಳ ಕಾಲ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿ, ಈಗ ರಾಜ್ಯಕ್ಕೆ ಮರಳಿದ್ದಾರೆ. ರಾಮಮಂದಿರದ ಮಂಟಪಗಳಲ್ಲಿ ಕುಸರಿ ಕೆಲಸ ಮಾಡುತ್ತಿದ್ದ ಇವರು, ಮಂದಿರದ ಪಿಲ್ಲರ್ಗಳಿಗೆ ನವಿಲು ಹಾಗೂ ಹಂಸ ಪಕ್ಷಿಗಳ ವಿನ್ಯಾಸ ಮಾಡಿರುವುದು ನಮ್ಮ ರಾಜ್ಯದ ಹೆಮ್ಮೆಯ ಸಂಗತಿ.

ಶಿಲ್ಪಕಲೆಯಲ್ಲಿ ಪದವಿ ಪಡೆದು 10 ವರ್ಷಗಳ ಅನುಭವವಿರುವ ಯುವ ಶಿಲ್ಪಿ ವಿರೇಶ್ ಬಡಿಗೇರ್ ಈ ಬಗ್ಗೆ ಪ್ರತಿಕ್ರಿಯಿಸಿ, ಹಿರಿಯ ಶಿಲ್ಪಿಯೊಬ್ಬರ ಸಹಕಾರದಿಂದ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ನನಗೆ ಅವಕಾಶ ಸಿಕ್ಕಿದೆ. ಅದರಲ್ಲೂ ರಾಜ್ಯದ ಕೆಲವು ಶಿಲ್ಪಿಗಳಲ್ಲಿ ನಾನು ಒಬ್ಬ ಎಂಬುದು ಸಂತಸಕರ. ಈ ಅವಕಾಶ ಸಿಕ್ಕಿದ್ದೇ ದೊಡ್ಡ ಪುಣ್ಯ. ಪುನಃ ಮಾರ್ಚ್ ತಿಂಗಳಲ್ಲಿ ಅಯೋಧ್ಯೆಗೆ ತೆರಳಿ ಇನ್ನಷ್ಟು ಕುಸರಿ ಕೆಲಸಗಳನ್ನ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

ರಾಮಮಂದಿರದ ಕೆಲಸದಲ್ಲಿ ತಮ್ಮ ಗ್ರಾಮದ ಯುವಕ ಪಾಲ್ಗೊಂಡಿದ್ದನ್ನು ಗ್ರಾಮಸ್ಥರು ವಿಶೇಷವಾಗಿ ಸಂಭ್ರಮಿಸಿದ್ದಾರೆ. ರಾಮಭಕ್ತರು ಹಾಗೂ ಗ್ರಾಮಸ್ಥರು ವಿರೇಶ್ ಅವರಿಗೆ ಸನ್ಮಾನಿಸುವ ಮೂಲಕ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಶ್ಲಾಘನೀಯ.

Sculptor Viresh Badiger

You might also like
Leave A Reply

Your email address will not be published.