ಅಬ್ಬಬ್ಬಾ ಇಷ್ಟು ದೊಡ್ಡ ಲಡ್ಡು! – ಅಯೋಧ್ಯೆಗೆ ತಲುಪಿದ ಬೃಹತ್ ಲಡ್ಡು

ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಆಗಮನಕ್ಕೆ ಈಗಾಗಲೇ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಆತನ ಪ್ರಾಣ ಪ್ರತಿಷ್ಠೆಗಾಗಿ ದೇಶ-ವಿದೇಶಗಳಿಂದ ಉಡುಗೊರೆ, ಪ್ರಸಾದದ ಮಹಾಪೂರವೇ ಹರಿದುಬರುತ್ತಿದೆ. ಇದೀಗ ಭಕ್ತರೊಬ್ಬರು ತಯಾರಿಸಿದ್ದ 1265 ಕೆಜಿ ತೂಕದ ಪ್ರಸಾದದ ಲಡ್ಡು ಅಯೋಧ್ಯೆ ತಲುಪಿದ್ದು, ಭಕ್ತರ ಬಾಯಿ ಚಪ್ಪರಿಸುತ್ತಿದೆ.

Huge laddu reached Ayodhya

ಹೈದರಾಬಾದ್ ನ ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್‌ ಅವರು ಲಡ್ಡನ್ನು ತಯಾರಿಸಿದ್ದು, ಈ ಬೃಹತ್ ಪ್ರಮಾಣದ ಲಡ್ಡು ಪ್ರಸಾದವನ್ನು ರೆಫ್ರಿಜರೇಟೆಡ್ ಬಾಕ್ಸ್‌ನಲ್ಲಿ ತೆಗೆದುಕೊಂಡು ಹೈದರಾಬಾದ್‌ನಿಂದ ರಸ್ತೆ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಅಯೋಧ್ಯೆಗೆ ಕೊಂಡೊಯ್ಯಲಾಯಿತು. ಒಟ್ಟು ಐದು ವಾಹನಗಳಲ್ಲಿ 18 ಮಂದಿ ಮೆರವಣಿಗೆಯೊಂದಿಗೆ ಸಾಗಿದ್ದರು. ಉದ್ಘಾಟನೆಯ ದಿನವಾದ ಜನವರಿ 22 ರಂದು ಭಕ್ತರಿಗೆ ಲಡ್ಡು ಪ್ರಸಾದ ವಿತರಿಸಲಾಗುವುದು.

ಈ ಕುರಿತು ಮಾತನಾಡಿದ ಶ್ರೀರಾಮ ಕ್ಯಾಟರಿಂಗ್ ಸರ್ವಿಸಸ್ ಮಾಲೀಕ ಎನ್.ನಾಗಭೂಷಣ ರೆಡ್ಡಿ, ದೇವರು ನನ್ನ ವ್ಯಾಪಾರ ಮತ್ತು ನನ್ನ ಕುಟುಂಬವನ್ನು ಆಶೀರ್ವದಿಸಿದ್ದಾನೆ. ನಾನು ಬದುಕಿರುವವರೆಗೆ ಪ್ರತಿದಿನ ರಾಮಮಂದಿರಕ್ಕಾಗಿ 1 ಕೆಜಿ ಲಡ್ಡು ತಯಾರಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೇನೆ. ಅಯೋಧ್ಯೆಗೆ ಆಹಾರ ಪ್ರಮಾಣ ಪತ್ರವನ್ನೂ ತಂದಿದ್ದೇನೆ. ಈ ಲಡ್ಡುಗಳು ಒಂದು ತಿಂಗಳು ಬಾಳಿಕೆ ಬರುತ್ತವೆ. 25 ಮಂದಿ 3 ದಿನಗಳವರೆಗೆ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

 

You might also like
Leave A Reply

Your email address will not be published.