ರಾಮಲಲಾ ಮೂರ್ತಿಯ ವಿಶೇಷತೆಗಳು ಏನೇನು?

ದೇಶ-ವಿದೇಶದೆಲ್ಲೆಡೆ ಶ್ರೀರಾಮನ ಭಕ್ತರು ಆತನ ದರ್ಶನಕ್ಕಾಗಿ ಕಾತುರದಿಂದ ಕಾಯುತ್ತ ಕೂತಿದ್ದರು. ಈ ಬೆನ್ನಲ್ಲೇ ಪೂರ್ಣರೂಪದ ಬಾಲರಾಮನದ ದರ್ಶನವಾಗಿದೆ. ಬಾಲರಾಮನ ಸಂಪೂರ್ಣ ವಿಗ್ರಹವನ್ನು ತೋರಿಸುವ ಫೋಟೋ ಹಂಚಿಕೊಳ್ಳಲಾಗಿದ್ದು, ಇದೀಗ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Rama lala murti

ಬಾಲರಾಮನ ವಿಗ್ರಹದ ಫೋಟೋ ಹೊರಬೀಳುತ್ತಿದ್ದಂತೆಯೇ ರಾಮಭಕ್ತರು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು “ಜೈ ಶ್ರೀ ರಾಮ್” ಎಂದು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ.

ಬಾಲರಾಮನ ವಿಗ್ರಹದ ವಿಶೇಷತ ಏನು?

• 51 ಇಂಚು ಎತ್ತರವಿರುವ ಮಂದಸ್ಮಿತ ಮುಖ ಹೊಂದಿರುವ ರಾಮನ ಮೂರ್ತಿಯು ಬಲಗೈಯಲ್ಲಿ ಬಾಣ, ಎಡಗೈಯಲ್ಲಿ ಬಿಲ್ಲು ಹಿಡಿದಿರುವ ಭಂಗಿಯಲ್ಲಿದೆ.
• ಬಾಲರಾಮನ ಹಣೆಯ ಮೇಲೆ ತಿಲಕವಿದೆ.
• ಬಾಲರಾಮನ ಮೂರ್ತಿಯ ಮೇಲ್ಬಾಗ ಸೂರ್ಯ ವಂಶದ ಶ್ರೀರಾಮಚಂದ್ರನನ್ನು ಬಿಂಬಿಸುವಂತಹ ಸೂರ್ಯದೇವರ ಕೆತ್ತನೆ ಮಾಡಲಾಗಿದೆ.
• ಬಾಲ ರಾಮನ ಮೂರ್ತಿಯಲ್ಲಿ ಆ ಚಂದ್ರನನ್ನೆ ನಾಚಿಸುವಷ್ಟು ಕಾಂತಿ ಅದ್ಭುತ ಕಳೆಯಲ್ಲಿದೆ.
• ಬಾಲರಾಮನ ಕಿರೀಟದ ಮೇಲೆ ನರಸಿಂಹ ದೇವರ ಕೆತ್ತನೆ ಇದೆ.
• ದಶವತಾರ ಬಿಂಬಿಸುವ ಮತ್ಸ್ಯ, ಕೂರ್ಮ, ವರಾಹ, ವಾಮನ, ಕೃಷ್ಣ, ಕಲ್ಕಿ, ಬುದ್ಧ, ಪರಶುರಾಮ, ಬ್ರಹ್ಮ, ಓಂ, ಆದಿಶೇಷ, ಚಕ್ರ ಹಾಗೂ ಈಶ್ವರ ಬಲಭಾಗದಲ್ಲಿದ್ದಾನೆ.
• ಬಾಲರಾಮನ ಎಡಗಡೆ ಹಾಗೂ ಮೇಲ್ಗಡೆ ಶಂಕ, ಗಧೆ, ಸ್ವಸ್ತಿಕ್, ವಿಷ್ಣು, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕ್ಲಕಿ, ಹಾಗೂ ನೆತ್ತಿನ ಮೇಲೆ ಸೂರ್ಯನಿದ್ದಾನೆ.

Ayodhya rama lala

You might also like
Leave A Reply

Your email address will not be published.