ಪರಿಶ್ರಮವಿಲ್ಲದೆ ಯಶಸ್ಸು ಅಸಾಧ್ಯ – ರಾಮಲಲಾ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದೇನು?

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮಂದಸ್ಮಿತನಾಗಿ ಕೈಯಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವ ಭಗವಾನ್ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಬೆರಳೆಣಿಕೆಯಷ್ಟು ದಿನ ಬಾಕಿಯಿದೆ. ಬಾಲರಾಮನ ಮೂರ್ತಿ ಹೆಸರಿನ ಹಿಂದೆ ಕೇಳಿಬರುತ್ತಿರುವುದು ನಮ್ಮ ಕರುನಾಡಿನ ಹೆಮ್ಮೆಯ ಪುತ್ರ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಹೆಸರು.

Ramlala Sculptor Arun Yogiraj

ಪರಿಶ್ರಮವಿಲ್ಲದೇ ಯಶಸ್ಸು ಸಾಧ್ಯವಿಲ್ಲ. ಅಂದಹಾಗೆ ಮೂರ್ತಿ ಕೆತ್ತನೆ ವೇಳೆ ಅರುಣ್ ಅನುಭವಿಸಿದ ನೋವಿನ ಸಂಗತಿ ಏನು? ಇಡೀ ದೇಶವೇ ಕೊಂಡಾಡುವ ಸಂದರ್ಭದಲ್ಲಿ ಅರುಣ್ ಅವರ ನೋವು ಅಡಗಿದೆ ಎಂಬುದು ಎಷ್ಟು ಜನರಿಗೆ ತಿಳಿದಿದೆ? ಅರುಣ್ ಯೋಗಿರಾಜ್ ಪತ್ನಿ ವಿಜೇತಾ ಅವರು ಅಚ್ಚರಿಯ ಸಂಗತಿಯೊಂದನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾದರು ಏನು?

ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾದರು ಡೋಂಟ್ ಕೇರ್ ಎಂದ ಅರುಣ್:

ಹೌದು. ಅರುಣ್ ಬಾಲರಾಮನ ಶಿಲ್ಪ ಕೆತ್ತನೆ ಮಾಡುವಾಗ ಒಂದು ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮೂರ್ತಿ ಕೆತ್ತನೆ ಮಾಡುವಾಗ ಒಂದು ಕಲ್ಲಿನ ಚೂರು ಅರುಣ್ ಯೋಗಿರಾಜ್ ಕಣ್ಣಿನ ಗುಡ್ಡೆಗೆ ಬಡಿದಿದ್ದು, ಗಾಯ ಸಹ ಆಗಿತ್ತು. ತಕ್ಷಣ ಅಯೋಧ್ಯೆ ಟ್ರಸ್ಟ್ನವರು ಅವರನ್ನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಿ, ಕಲ್ಲಿನ ಚೂರನ್ನು ಹೊರ ತೆಗೆಸಿದ್ದರು.

ಸುಮಾರು 15 ದಿನಗಳ ಕಾಲ ಒಂದೇಗಣ್ಣಿನಲ್ಲಿ ಶಿಲ್ಪ ಕೆತ್ತನೆ ಮಾಡಿದ ಅರುಣ್:

ಸರಿಸುಮಾರು 15 ದಿನಗಳ ಕಾಲ ಅರುಣ್ ಒಂದು ಕಣ್ಣು ಮುಚ್ಚಿಕೊಂಡೇ ಶಿಲ್ಪ ಕೆತ್ತನೆ ಮಾಡಿದ್ದರು. ಈ ಕುರಿತು ಅರುಣ್ ಅವರ ಮನೆಯವರಿಗಾಗಲಿ, ಕುಟುಂಬಸ್ಥರಿಗಾಗಲಿ ಹೇಳಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದವರು ವಿಷಯ ತಿಳಿಸಿದಾಗ ತುಂಬಾ ಭಯವಾಗಿತ್ತು. ಚಿಕಿತ್ಸೆ ಪಡೆದ ಒಂದೆರಡು ದಿನಗಳಲ್ಲಿ ಅವರೇ ಕರೆ ಮಾಡಿ ವಿಷಯ ತಿಳಿಸಿ, ಆರಾಮಾಗಿದ್ದೇನೆ ಎಂದು ತಿಳಿಸಿದ ನಂತರ ನಮಗೆ ಸಮಾಧಾನವಾಯಿತು. ಅಷ್ಟಾದರೂ ವಿಶ್ರಾಂತಿ ತೆಗೆದುಕೊಳ್ಳದೇ ಶಿಲ್ಪ ಕೆತ್ತನೆ ಮಾಡಿದ್ದರು. ಇದೆಲ್ಲವು ಆ ಭಗವಂತನದ್ದೇ ಕೃಪೆ ಎಂದು ಅವರ ಪತ್ನಿ ಭಾವುಕರಾಗಿದ್ದಾರೆ.

You might also like
Leave A Reply

Your email address will not be published.