ರಾಮನ ಪಟ್ಟಾಭಿಷೇಕಕ್ಕೆ ಪದ್ಮವ್ಯೂಹದ ಭದ್ರತೆ

ಪ್ರಧಾನಿ ಮೋದಿ ಅವರು ಜನವರಿ 22ರಂದು ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಹಾಜರಾಗಲಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ATS) ಹಾಗೂ ಉತ್ತರ ಪ್ರದೇಶ ಪೊಲೀಸರು ಭಾರಿ ಭದ್ರತೆ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಮಹಾನಿರ್ದೇಶಕ (ಡಿಜಿ) ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

Ramalala

ಹಾಗಾದರೆ ರಾಮಮಂದಿರದಲ್ಲಿ ಭಿಗಿ ಭದ್ರತೆ ಹೇಗಿರಲಿದೆ?

 •  ಶಸ್ತ್ರಸಜ್ಜಿತ ಎಟಿಎಸ್ ಕಮಾಂಡೋಗಳು ಮತ್ತು 10,000ಕ್ಕೂ ಹೆಚ್ಚು ಯುಪಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
 •  ರಾಮಮಂದಿರ ಸುತ್ತಲೂ ಅತ್ಯಾಧುನಿಕ ಸುಮಾರು 10,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೆಲವು ಸಿಸಿಟಿವಿ ಕ್ಯಾಮೆರಾಗಳು AI-ಚಾಲಿತವಾಗಿವೆ.
 •  ಉದ್ಘಾಟನೆ ದಿನ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯವರು ಕಾರ್ಯನಿರ್ವಹಿಸಲಿದ್ದಾರೆ.
 • ಆ್ಯಂಟಿ ಡ್ರೋನ್ ಟೆಕ್ನಾಲಜಿ (Anti Drone Technology) ಬಳಸಲಾಗುವುದು. ಇದರಿಂದ ರೇಡಿಯೋ ಫ್ರೀಕ್ವೆನ್ಸಿ ಸೇರಿ ಹಲವು ತಂತ್ರಜ್ಞಾನದ ಮೂಲಕ ಅಪಾಯಕಾರಿ ಎನಿಸುವ ಡೋನ್ಗಳನ್ನು ಈ ಮೂಲಕ ಹೊಡೆದುರುಳಿಸಲಾಗುತ್ತದೆ
 • ಸೊಷಿಯಲ್ ಮೀಡಿಯಾ ಮೇಲೆ ಹೆಚ್ಚಿನ ಗಮನ ಹರಿಸಲು ವಿಶೇಷ ಪ್ರಯತ್ನ
 • ಅನುಮಾನಾಸ್ಪದ ವಾಹನಗಳ ಟೈರ್ ಕಿಲ್ಲಿಂಗ್ ತಂತ್ರಜ್ಞಾನ, ಟ್ರಾಫಿಕ್ ನಿಯಂತ್ರಣದ ಜತೆಗೆ ವಾಹನಗಳ ಮೇಲೆ ನಿಗಾ ಇರಿಸುವುದು ಸೇರಿ ಎಲ್ಲದರ ಮೇಲೆ ಹದ್ದಿನ ಕಣ್ಣೀಡಲು ನಿರ್ಧಾರ
 •  ಸುಗಮ ಸಂಚಾರಕ್ಕಾಗಿ ಎಲ್ಲಾ ಪ್ರಮುಖ ರಸ್ತೆಗಳನ್ನು ಹಸಿರು ಕಾರಿಡಾರ್ಗಳಾಗಿ ಪರಿವರ್ತನೆ. ರಸ್ತೆಗಳನ್ನು ಕೆಂಪು ವಲಯ, ಹಳದಿ ವಲಯವನ್ನಾಗಿ ಮಾಡಲಾಗಿದ್ದು, ಪ್ರತಿ ರಸ್ತೆಗೂ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ.
 • ಸರಯೂ ನದಿಯ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪವರ್ ಬೋಟ್ಗಳು, ಎನ್ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ತಂಡಗಳು ಮತ್ತು ಸ್ಥಳೀಯ ಬೋಟ್’ಮೆನ್ಗಳ ಸಹಾಯದಿಂದ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
 •  ಅಂತಾರಾಷ್ಟ್ರೀಯ ಮತ್ತು ಅಂತರರಾಜ್ಯ ಗಡಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಹೆಚ್ಚುವರಿ ಜನರಿಗೆ ಸೂಚನೆ ನೀಡಲು, ಎಲ್ಲವನ್ನೂ ನಿಯಂತ್ರಣದಲ್ಲಿಡಲು ಅತ್ಯಾಧುನಿಕ, ಎಐ ಡೋನ್’ಗಳನ್ನು ಬಳಸಲಾಗುತ್ತಿದೆ.
 •  ಮಂದಿರ ಉದ್ಘಾಟನೆಯ ದಿನ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಭದ್ರತಾ ಸಿಬ್ಬಂದಿಗಳು ಕಾಲಕಾಲಕ್ಕೆ ಸೂಕ್ಷ್ಮ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ.
 • ಅಷ್ಟೇ ಅಲ್ಲದೇ, ಅಯೋಧ್ಯೆ ರೈಲು ನಿಲ್ದಾಣದಲ್ಲಿ ಭದ್ರತೆಗಾಗಿ 150 ಸಿಐಎಸ್ಎಫ್ ಕಮಾಂಡೋಗಳನ್ನು ನಿಯೋಜಿಸಲಾಗುವುದು.
You might also like
Leave A Reply

Your email address will not be published.