ರಾಮನಿಗಾಗಿ ಹೊಸ ಅಂಚೆ ಚೀಟಿ – ಏನಿದರ ವಿಶೇಷತೆ?

ಅಯೋಧ್ಯೆಯ ರಾಮ ಮಂದಿರದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು ಅಂಚೆ ಚೀಟಿ (Postage Stamps) ಗಳನ್ನು ಬಿಡುಗಡೆ ಮಾಡುವ ಮೂಲಕ, ಈ ಅಂಚೆ ಚೀಟಿಯು ಐತಿಹಾಸಿಕ ಘಟನೆಯ ಸಾಕ್ಷಿಯಾಗಿ ಮತ್ತು ಅದರ ಸುತ್ತಲಿನ ವಿಚಾರಗಳನ್ನು ಭವಿಷ್ಯಕ್ಕೆ ತಿಳಿಸುವ ಸಂಕೇತಗಳಾಗಿ ಉಳಿಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

Postage Stamps)

ದೇಗುಲದ ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ಭಗವಾನ್ ರಾಮನ ಕುರಿತಾದ ಅಂಚೆಚೀಟಿಗಳ ಪುಸ್ತಕದ ಬಿಡುಗಡೆಯ ಬಳಿಕ, ಅಂಚೆ ಚೀಟಿಗಳು ಭವಿಷ್ಯದ ಪೀಳಿಗೆಗೆ ಇತಿಹಾಸ ಮತ್ತು ರಾಮಮಂದಿರದ ಕುರಿತಾದ ಐತಿಹಾಸಿಕ ಕ್ಷಣಗಳನ್ನು ತಲುಪಿಸುವ ಮಾಧ್ಯಮಗಳಾಗಿವೆ. ಈ ಅಂಚೆ ಚೀಟಿಗಳು ಕೇವಲ ಕಾಗದದ ತುಣುಕುಗಳು ಅಥವಾ ಕೇವಲ ಕಲಾಕೃತಿಗಳಲ್ಲ. ಅವು ರಾಮಾಯಣದ ಕುರಿತಾದ ತಮ್ಮದೇ ಆದ ವಿಶಿಷ್ಟ ಗುರುತುಗಳನ್ನು ಹೊಂದಿವೆ ಎಂದರು.

ಅಂಚೆ ಚೀಟಿಯಲ್ಲಿ ಏನೆಲ್ಲ ಇದೆ?

ಅಂಚೆ ಚೀಟಿಯಲ್ಲಿ ರಾಮ್ ಚರಿತ್ ಮಾನಸ್’ನ ಶ್ಲೋಕವಿದೆ. ದೇಶಕ್ಕೆ ಸಕಾರಾತ್ಮಕ ಸಂದೇಶವನ್ನು ನೀಡುವ ಸೂರ್ಯನ ಚಿತ್ರವಿದೆ. ಅಲ್ಲದೇ ಸರಯು ನದಿಯ ಚಿತ್ರಣವೂ ಇದರಲ್ಲಿದೆ. ಇದರೊಂದಿಗೆ ಭಗವಾನ್ ರಾಮನ, ಪಂಚತಂತ್ರದ ತತ್ತ್ವವನ್ನು ಆಲ್ಬಮ್ನಲ್ಲಿ ಚಿಕಣಿ ರೂಪದಲ್ಲಿ ಚಿತ್ರಿಸಲಾಗಿದೆ.

ಬಿಡುಗಡೆಯಾದ ಆರು ಸ್ಮರಣಾರ್ಥ ಅಂಚೆಚೀಟಿಗಳು ಅಯೋಧ್ಯೆಯಲ್ಲಿನ ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಶಬರಿಯನ್ನು ಒಳಗೊಂಡಿವೆ. ಪ್ರತಿಯೊಂದು ಭಗವಾನ್ ರಾಮನಿಗೆ ಸಂಬಂಧಿಸಿದ ವಿಚಾರಗಳಾಗಿವೆ.

postage stamp for Rama

ಅಲ್ಲದೇ 48 ಪುಟಗಳ ಪುಸ್ತಕದಲ್ಲಿ ಅಮೆರಿಕ, ನ್ಯೂಜಿಲೆಂಡ್, ಸಿಂಗಾಪುರ್, ಕೆನಡಾ ಮತ್ತು ಕಾಂಬೋಡಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಹೊರಡಿಸಿದ ಅಂಚೆಚೀಟಿಗಳನ್ನು ಒಳಗೊಂಡಿದೆ. ಇದೆಲ್ಲ ದೇಶಗಳ ನಡುವಿನ ಗಡಿಗಳನ್ನೂ ಮೀರಿ ಸಂಪರ್ಕ ಸಾಧಿಸಲು ಹೆಚ್ಚು ಸಹಕಾರಿಯಾಗಲಿದೆ.

You might also like
Leave A Reply

Your email address will not be published.