ರಾಮ ಭಕ್ತರ ಕ್ಷಮೆ ಕೋರಿದ ಲೇಡಿ ಸೂಪರ್ ಸ್ಟಾರ್ – ಯಾಕೆ? ಈ ವರದಿ ಓದಿ

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ತೆರೆಕಂಡಿದ್ದರ ಬೆನ್ನಲ್ಲೇ ಚಿತ್ರದಲ್ಲಿನ ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ ಎಂಬ ಡೈಲಾಗ್ ಸೇರಿದಂತೆ ಹಲವು ದೃಶ್ಯಗಳು ವಿವಾದ ಸೃಷ್ಟಿ ಮಾಡಿತ್ತು. ಇದೀಗ ಈ ಕಾಂಟ್ರವರ್ಸಿ ಬಗ್ಗೆ ನಯನತಾರಾ ಮೌನ ಮುರಿದಿದ್ದಾರೆ. ಹಾಗಾದರೆ, ನಟಿ ಹೇಳಿದ್ದಾದರು ಏನು? ಮತ್ತೆ ಕಾಂಟ್ರವರ್ಸಿ ಆಯ್ತ ಅವರ ಪ್ರತಿಕ್ರಿಯೆ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಿಸ್ ಮಾಡ್ದೆ ಓದಿ.

ನಯನತಾರಾ ನಟಿಸಿದ ಸಿನಿಮಾದಲ್ಲಿ ವಿವಾದ ಸೃಷ್ಟಿಸಿದ ಡೈಲಾಗ್ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅವರು ಹೇಳಿದ್ದಾದರು ಏನು?

ಜೈ ಶ್ರೀರಾಮ್ (Jai Shreeram) ಎಂದು ಹೇಳುವ ಮೂಲಕ ಪತ್ರ ಬರೆದಿದ್ದಾರೆ.
ನಾನು ಭಾರವಾದ ಹೃದಯದಿಂದ ಮತ್ತು ಸತ್ಯದ ಆಧಾರದ ಮೇಲೆ ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಇತ್ತೀಚಿಗೆ ನಾನು ನಟಿಸಿದ ‘ಅನ್ನಪೂರ್ಣಿ’ ಸಿನಿಮಾದಿಂದ ಆದ ವಿವಾದದ ಕುರಿತು ನನ್ನ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ ಎಂದು ನಟಿ ರಿಯಾಕ್ಟ್ ಮಾಡಿದ್ದಾರೆ.

ಸಿನಿಮಾ ಮಾಡುವುದು ಎಂದರೆ ಕೇವಲ ಆರ್ಥಿಕ ಲಾಭಕ್ಕೆ ಮಾತ್ರವಲ್ಲ ಸಮಾಜಕ್ಕೆ ಒಂದು ಸಂದೇಶ ತಿಳಿಸುವ ಉದ್ದೇಶವು ಇರುತ್ತದೆ. ‘ಅನ್ನಪೂರ್ಣಿ’ ಸಿನಿಮಾನ ಮುಗ್ಧ ಮನಸ್ಸಿನಿಂದ ಮಾಡಲಾಗಿದೆ. ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆಯೋ ಅದನ್ನೇ ತೋರಿಸುವುದೇ ಈ ಸಿನಿಮಾದ ಉದ್ದೇಶವಾಗಿದೆ.

ಪಾಸಿಟಿವ್ ಸಂದೇಶ ತಲುಪಿಸುವ ನಮ್ಮ ಪ್ರಾಮಾಣಿಕ ಪ್ರಯತ್ನದಲ್ಲಿ ಗೊತ್ತಿಲ್ಲದೆ ನಾವು ನಿಮ್ಮ ಭಾವನೆಗಳನ್ನು ನೋಯಿಸಿದ್ದೇವೆ. ಸೆನ್ಸಾರ್ ಆದ ನಮ್ಮ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ ಒಟಿಟಿಯಲ್ಲಿ ಬಿಡುಗಡೆ ಆಯಿತು. ಅದನ್ನು ಒಟಿಟಿಯಿಂದ ತೆಗೆದು ಹಾಕುತ್ತಾರೆ ಎಂದು ನಾವು ಅಂದುಕೊಂಡಿರಲಿಲ್ಲ. ಯಾರ ಭಾವನೆ ಅಥವಾ ನಂಬಿಕೆಗೆ ಧಕ್ಕೆ ತರುವುದು ನನ್ನ ತಂಡದ ಉದ್ದೇಶ ಆಗಿರಲಿಲ್ಲ.

ನಾನು ದೇವರಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿರುವ ಮತ್ತು ದೇಶಾದ್ಯಂತ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ವ್ಯಕ್ತಿ. ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿದ ಎಲ್ಲ ಜನರಲ್ಲಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ನಯನತಾರಾ ಕೋರಿದ್ದಾರೆ.

‘ಅನ್ನಪೂರ್ಣಿ’ ಸಿನಿಮಾ ಮಾಡಿದ್ದರ ಹಿಂದಿನ ಉದ್ದೇಶವು ಜನರನ್ನು ಮೇಲಕ್ಕೆತ್ತುವುದಾಗಿದೆಯೇ ವಿನಃ ಅವರನ್ನು ನೋಯಿಸುವುದಲ್ಲ. ಕಳೆದ ಎರಡು ದಶಕಗಳಿಂದ ಚಲನಚಿತ್ರೋದ್ಯಮದಲ್ಲಿ ಇರುವ ನಾನು, ಪರಸ್ಪರ ಕಲಿಯುವುದು ಮತ್ತು ಪಾಸಿಟಿವಿಯನ್ನು ಹೆಚ್ಚಿಸುವ ಉದ್ದೇಶದಿಂದ ಸಿನಿಮಾ ಮಾಡುತ್ತಿದ್ದೇನೆ ಎಂದು ನಯನತಾರಾ ಪತ್ರ ಪೂರ್ಣಗೊಳಿಸಿದ್ದಾರೆ.

ಜವಾನ್‌ ಸಕ್ಸಸ್‌ ಅಲೆಯಲ್ಲಿ ತೇಲುತ್ತಿದ್ದ ನಯನತಾರಾಗೆ ಅನ್ನಪೂರ್ಣಿ ಕಾಂಟ್ರವರ್ಸಿ ದೊಡ್ಡ ಮಟ್ಟದಲ್ಲಿ ಸೆನ್ಸೇಷನ್‌ ಕ್ರಿಯೆಟ್‌ ಮಾಡಿದೆ. ಈಗ ಈ ಕಾಂಟ್ರವರ್ಸಿಗೆ ರಿಯಾಕ್ಟ್‌ ಮಾಡುವ ಮೂಲಕ ನಯನತಾರಾ ಬಹಿರಂಗ ಪತ್ರ ಬರೆದು ಕ್ಷಮೆ ಕೇಳಿದ್ದಾರೆ.

You might also like
Leave A Reply

Your email address will not be published.