ಅಲ್ಲಿ ರಾಮನ ಪ್ರತಿಷ್ಠಾಪನೆ, ಇಲ್ಲಿ ಪವಾಡ

ಅತ್ತ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಎರಡೇ ದಿನ ಬಾಕಿ ಉಳಿದಿದ್ದು, ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಇದೇ ಹೊತ್ತಲ್ಲಿ ಧಾರವಾಡದಲ್ಲಿ ಅಚ್ಚರಿಯ ಘಟನೆ ನಡೆದಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮನೆಮಾಡಿದೆ. ಈ ವಿಚಾರ ಕೇಳಿದ್ರೆ ನಿಮ್ ಮೈ-ಮನ ರೋಮಾಂಚನಗೊಳ್ಳುವುದು ಗ್ಯಾರೆಂಟಿ. ಅದೇನಂತಿರ? ಈ ಸ್ಟೋರಿ ಓದಿ..

ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಧಾರವಾಡ ತಾಲೂಕಿನ ಕಲಿಕೇರಿ ಗ್ರಾಮದ ಹೊರಭಾಗದಲ್ಲಿರುವ ಕೆರೆಯ ದಂಡೆಯಲ್ಲಿ ಶ್ರೀರಾಮನ ವಿಗ್ರಹವೊಂದು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ತಂದಿದೆ.

ಗ್ರಾಮಸ್ಥರು ಜೆಸಿಬಿ ಮೂಲಕ ಕಚ್ಚಾ ರಸ್ತೆ ದುರಸ್ತಿ ಮಾಡುತ್ತಿದ್ದಾಗ ದೊಡ್ಡ ಕಲ್ಲು ಪತ್ತೆಯಾಗಿದೆ. ಕಲ್ಲಿನಲ್ಲಿ ಶ್ರೀರಾಮ, ಸೀತೆ, ಲಕ್ಷಣ ಹಾಗೂ ಆಂಜನೇಯನ ರೂಪಗಳಿವೆ.

Ramsita

ಕಲ್ಲಿನ ಮೇಲ್ಭಾಗದಲ್ಲಿ ಶಿವ ಹಾಗೂ ಪಾರ್ವತಿಯ ಕೆತ್ತನೆಯಿದ್ದು, ಕೆಳಭಾಗದಲ್ಲಿ ಶ್ರೀರಾಮನ ಕೆತ್ತನೆಯಿದೆ. ವಿಗ್ರಹ ಪತ್ತೆಯಾಗುತ್ತಲೇ ಆಶ್ಚರ್ಯಕ್ಕೊಳಗಾದ ಗ್ರಾಮಸ್ಥರು ಮೊದಲು ಪೂಜೆ ಸಲ್ಲಿಸಿದ್ದಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದೇ ದಿನ ಕಲಿಕೇರಿ ಗ್ರಾಮದಲ್ಲೂ ಈ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

You might also like
Leave A Reply

Your email address will not be published.