ಎಚ್ಚರ…ರಾಮಮಂದಿರ ಪ್ರಸಾದ ಸ್ವೀಕರಿಸುವ ಮುನ್ನ ಎಚ್ಚರ – ನಕಲಿ ಪ್ರಸಾದ

ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಇನ್ನೂ ಪೂರ್ಣಗೊಂಡಿಲ್ಲ. ಈ ವೇಳೆ “ಶ್ರೀರಾಮಮಂದಿರ ಅಯೋಧ್ಯೆ ಪ್ರಸಾದ” ಎಂಬ ಹೆಸರಿನಲ್ಲಿ ಸ್ವೀಟ್ಸ್‌ ಮಾರಾಟ ಮಾಡುವ ಮೂಲಕ ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ. ಸಾರ್ವಜನಿಕರೇ ಎಚ್ಚರವಹಿಸಿ. ಪ್ರಸಾದದ ಹೆಸರಿನಲ್ಲಿ ಮೋಸ ಹೋಗದಿರಿ!

‘ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ’ ಹೆಸರಿನಲ್ಲಿ ಸ್ವೀಟ್ಸ್‌ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಯೊಂದರ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ದೂರು ನೀಡಿತ್ತು.

Ayodhya fake prasada

ಈ ಸಂಬಂಧ ಸಂಸ್ಥೆಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಇಂತಹ ಕ್ರಮಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತವೆ. ಗ್ರಾಹಕರ ಖರೀದಿ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಎಚ್ಚರಿಸಿದೆ.

ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಗೆ ಸಿಸಿಪಿಎ ನೋಟಿಸ್‌ ನೀಡಿದ್ದು, 7 ದಿನಗಳ ಒಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಇಲ್ಲದಿದ್ದರೆ, ಗ್ರಾಹಕ ಸಂರಕ್ಷಣಾ ಕಾಯ್ದೆ,- 2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.

You might also like
Leave A Reply

Your email address will not be published.