ಶ್ರೀರಾಮನ ಮಂಡಲ ಪೂಜೆಗೆ ಕನ್ನಡಿಗ ಅರ್ಚಕರ ನೇಮಕ

ಅಯೋಧ್ಯೆ ರಾಮಮಂದಿರದ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ಜರುಗುತ್ತಿವೆ. ಪ್ರತಿಷ್ಠಾಪನೆ ಬಳಿಕ 48 ದಿನಗಳ ಕಾಲ ವೀರಶೈವಾಗಮನ ಪದ್ಧತಿಯಲ್ಲಿ ಮಂಡಲೋತ್ಸವ ನಡೆಯಲಿದೆ. ಮಂಡಲೋತ್ಸವ ಪೂಜೆಗೆ ರಾಜ್ಯದ ಹಲವು ವೈದಿಕ ಪಂಡಿತರು ಆಯ್ಕೆಯಾಗಿದ್ದು, ಅದರಲ್ಲಿ ರಾಯಚೂರಿನಿಂದ ಇಬ್ಬರು ಯುವ ಅರ್ಚಕರು ಆಯ್ಕೆಯಾಗಿರುವುದು ಕರ್ನಾಟಕಕ್ಕೆ ಮತ್ತೊಂದು ಗರಿ ತಂದಿದೆ.

Appointment of Kannadiga priests for Mandal Pooja of Sri Rama

ಕೊಪ್ಪಳದ ಕಾರಟಗಿಯಲ್ಲಿ ಅರ್ಚಕರಾಗಿರುವ ಲಿಂಗಸುಗೂರು ತಾಲೂಕಿನ ಗುರಗುಂಟದ ವೇದಮೂರ್ತಿ ಆದಯ್ಯ ಸ್ವಾಮಿ ಸಾಲಿಮಠ ಹಾಗೂ ಮಸ್ಕಿ ತಾಲೂಕಿನ ಹಸಮಕಲ್ನ ವೇದಮೂರ್ತಿ ಶ್ರೀಧರ ಸ್ವಾಮಿ ಹಿರೇಮಠ ಅವರು, ಮಂಡಲೋತ್ಸವ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಮಹಾಪೂಜೆಗೆ ಆಯ್ಕೆಯಾಗಿರುವುದಕ್ಕೆ ವೈದಿಕ ಪಂಡಿತರು ಸಂತಸ ವ್ಯಕ್ತಪಡಿಸಿದ್ದಾರೆ.

ಆನ್ ಲೈನ್ ಮೂಲಕ ವೈದಿಕ ಸೇವೆಗಾಗಿ ರಾಮ ಜನ್ಮಭೂಮಿ ಟ್ರಸ್ಟ್ ಋಗ್ವೇದ, ವೇದಾಧ್ಯಯನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರಿಗಾಗಿ ಅರ್ಜಿ ಕರೆದಿತ್ತು. ಸಂದರ್ಶನದಲ್ಲಿ ಆಯ್ಕೆಯಾಗಿರುವ ಜಿಲ್ಲೆಯ ವೈದಿಕ ಪಂಡಿತರು ಶ್ರೀರಾಮನ ಸಿಂಹಾಸನಾರೋಹಣಕ್ಕಾಗಿ ಯಾಗದ ವಿಧಿಗಳನ್ನು ನಡೆಸುವ ಹಾಗೂ ಮಂಡಲ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ.

You might also like
Leave A Reply

Your email address will not be published.