500 ರೂಪಾಯಿ ನೋಟಿನಲ್ಲಿ ಗಾಂಧಿಜೀ ಬದಲಿಗೆ ರಾಮ, ರಾಮಮಂದಿರ – ಏನಿದರ ಅಸಲಿಯತ್ತು?

ನಮ್ ಸೋಶಿಯಲ್ ಮೀಡಿಯಾ ಹೇಗಪ್ಪ ಅಂದ್ರೆ, ಒಂದು ವಿಚಾರ ಬರೋದೆ ತಡ ಅದರ ಸತ್ಯಾಸತ್ಯತೆ ಅರಿಯೋದಕ್ಕೂ ಮುನ್ನವೇ ಲಕ್ಷಾಂತರ ಜನರನ್ನ ತಲುಪಿ ಸಖತ್ ವೈರಲ್ ಆಗಿಬಿಡ್ತಾವೆ! ಇದೀಗ ರಾಮನ ಹೆಸರಲ್ಲೂ ವೈರಲ್ ಸುದ್ದಿಗಳು ಎಲ್ಲೆಡೆ ಹರಡುತ್ತಿದ್ದು, ಅದರ ಸತ್ಯಾಸತ್ಯತೆಗಳ ಬಗೆಗೆ ನಾವು ಗಮನಹರಿಸಲೇಬೇಕಿದೆ. ಇವಾಗ ಏನಾಯ್ತು ಅಂತೀರ? ಈ ಸ್ಟೋರಿ ಓದಿ.

500 ರೂಪಾಯಿ ನೋಟಿನಲ್ಲಿ ಕ್ರಿಯಾಶೀಲತೆಯಿಂದ ರಚಿಸಿದ ಸಣ್ಣದೊಂದು ಚಿತ್ರ ಏಕಾಏಕಿ ವೈರಲ್ ಆಗಿಬಿಟ್ಟಿದೆ. ಕ್ರಿಯಾಶೀಲತೆಗೆ ಮಾಡಿದ್ರು, ರಾಮನ ಭಕ್ತರು ಈ ನೋಟನ್ನು ಕೊಂಡಾಡುತ್ತಿದ್ದರೆ, ಗಾಂಧೀಜಿ ಅನುಯಾಯಿಗಳು ವಿರೋದ್ಧ ವ್ಯಕ್ತಪಡಿಸುತ್ತಿದ್ದಾರೆ. ಏನಿದು ಸುದ್ದಿ? ಯಾರ ಅಕೌಂಟ್ ಇಂದ ಪೋಸ್ಟ್ ಆಗಿದ್ದು? ಎಂಬೆಲ್ಲ ಮಾಹಿತಿ ಇಲ್ಲಿದೆ.

500 ರೂಪಾಯಿ ನೋಟು ರಾಮಮಯ:

ರಘುಮೂರ್ತಿ ಅವರ ಖಾತೆಯಿಂದ 500 ರೂಪಾಯಿ ನೋಟಿನಲ್ಲಿ ಗಾಂಧೀಜಿ ಭಾವಚಿತ್ರದ ಬದಲು ರಾಮ ಹಾಗೂ ಹಿಂಬದಿ ಭಾಗದಲ್ಲಿ ಕೆಂಪು ಕೋಟೆಯ ಬದಲು ರಾಮಮಂದಿರದ ಚಿತ್ರವನ್ನು ಕೂರಿಸಲಾಗಿತ್ತು. ಇನ್ನೂ ಗ್ಲಾಸುಗಳ ಬದಲಿಗೆ ರಾಮನ ಬಿಲ್ಲು ಮತ್ತು ಬಾಣದ ಚಿತ್ರಗಳ್ಳುಳ್ಳ ನೋಟನ್ನು ಪೋಸ್ಟ್ ಮಾಡಲಾಗಿತ್ತು.

ಸಾರ್ವಜನಿಕರಿಗೆ ಮುದ ನೀಡಿದ 500ರೂ. ನೋಟು:

500 ರೂಪಾಯಿ ನೋಡಿದ ಜನರು ಫುಲ್ ಖುಷಿಯಾಗಿದ್ದು, ಇದೇ 22ರಂದು ರಾಮಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಮನ ಭಾವಚಿತ್ರವುಳ್ಳ ಹೊಸ ನೋಟು ಬಂದಿದೆ ಅಥವಾ ಬರುತ್ತಿದೆ ಎಂದೇ ಎಲ್ಲರೂ ಭಾವಿಸಿದ್ದರು. ಹೀಗಾಗಿ, ಕೆಲವೇ ಗಂಟೆಗಳ ಅವಧಿಯಲ್ಲಿ ಈ ಪೋಸ್ಟ್‌ ಸಾವಿರಾರು ಜನರನ್ನು ತಲುಪಿತ್ತು. ಆ ಚಿತ್ರ ನೋಡಿದವರ ಕಣ್ಣಿಗೆ ಭಾರೀ ಮುದ ನೀಡುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ.

ವದಂತಿ ಕುರಿತು ರಘುಮೂರ್ತಿ ಅವರ ಸ್ಪಷ್ಟನೆ:

ಆದರೆ, ಇದು ಕೇವಲ ವದಂತಿ (Fake) ಹಾಗೂ ಸತ್ಯಕ್ಕೆ ದೂರವಾದ ಸಂಗತಿ ಎನ್ನುವುದು ಕೆಲವೇ ಸಮಯದಲ್ಲಿ ತಿಳಿದುಬಂತು.

ತಮ್ಮ ಕ್ರಿಯಾಶೀಲತೆಯನ್ನು (Creativity) ಯಾರೋ ತಪ್ಪಾಗಿ ಬಳಸಿಕೊಂಡಿದ್ದಾರೆ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ಕ್ರಿಯಾಶೀಲ ಕೃತಿಯನ್ನು ಯಾರೋ ಮಿಸ್‌ ಯೂಸ್ ಮಾಡಿದ್ದಾರೆ. ಟ್ವಿಟರ್‌ ನಲ್ಲಿ ಅದನ್ನು ಪ್ರಕಟಿಸಿ ತಪ್ಪು ಮಾಹಿತಿ ಹಂಚಿದ್ದಾರೆ ಎಂದು ರಘುಮೂರ್ತಿ ಅವರು ಹೇಳಿದ್ದಾರೆ.

“ಇಂತಹ ವದಂತಿಗಳಿಗೆ ನನ್ನ ಬೆಂಬಲವಿಲ್ಲ. ಇದು ಕ್ರಿಯಾಶೀಲತೆಯಿಂದ ರಚಿಸಿದ ಕೃತಿಯಾಗಿದೆ. ನನ್ನ ಕೆಲಸವನ್ನು ಇಟ್ಟುಕೊಂಡು ಈ ಪೋಸ್ಟ್‌ ಮಾಡಲಾಗಿದೆ. ಕ್ರಿಯಾಶೀಲ ಕಾರ್ಯವು ಯಾವುದೇ ರೀತಿಯಲ್ಲಿ ತಪ್ಪು ನಿರೂಪಣೆಗೆ ಒಳಗಾಗುವುದು ನನಗೆ ಇಷ್ಟವಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೋರ್ವ ಸೋಷಿಯಲ್‌ ಮೀಡಿಯಾ ಎಕ್ಸ್‌ ಬಳಕೆದಾರರಾಗಿರುವ ದಿವ್ಯಾ ಕಾಮತ್‌ ಎನ್ನುವವರು ಸಹ ವೈರಲ್‌ ಆಗಿರುವ ಈ ಮಾಹಿತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಇದು ಸ್ನೇಹಿತರಾದ ರಘುಮೂರ್ತಿ ಎನ್ನುವವರು ಎಡಿಟ್‌ ಮಾಡಿರುವ ಚಿತ್ರ. ಇದು ಕೇವಲ ಕ್ರಿಯಾಶೀಲತೆ ಬಿಂಬಿಸುವ ಚಿತ್ರವಾಗಿದ್ದು, ಇದನ್ನು ನೋಟಿನಂತೆ ತೋರಿಸುವ ಇರಾದೆಯಿಲ್ಲ. ನೋಟಿನಂತೆ ತೋರಿಸುವ ಉದ್ದೇಶವಿಲ್ಲ, ದಯವಿಟ್ಟು ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಿʼ ಎಂದು ಮನವಿ ಮಾಡಿದ್ದಾರೆ.

ಕಾಮೆಂಟ್‌ ಗಳು:

ಇದಕ್ಕೂ ಮುನ್ನ, ಈ ಸುದ್ದಿ ಹಲವರಲ್ಲಿ ಸೆನ್ಸೇಷನ್‌ (Sensation) ಮೂಡಿಸಿತ್ತು. ರಾಮನ ಭಾವಚಿತ್ರದ ನೋಟು ಬರಲಿದೆ ಎನ್ನುವ ಸುದ್ದಿಯಿಂದ ಹಲವರು ರೋಮಾಂಚನಕ್ಕೆ ಒಳಗಾಗಿದ್ದರು.

ಇದಕ್ಕೆ ಹಲವು ಕಾಮೆಂಟ್‌ ಕೂಡ ಬಂದಿದ್ದು, “ಇದು ನಿಜವಾಗಿಯೂ ಆಗಬೇಕಾದ ಕಾರ್ಯವಾಗಿತ್ತುʼ ಎಂದು ಹೇಳಿದ್ದರು.

ರಘುಮೂರ್ತಿಯವರು ತಮ್ಮ ಖಾತೆಯಲ್ಲಿ “ರಾಮಭಕ್ತ ಗಾಂಧೀಜಿಯವರು ಕೂಡ ಇದನ್ನೇ ಬಯಸುತ್ತಿದ್ದರು, ಜೈ ಶ್ರೀರಾಮ್‌ʼ ಎಂಬ ಕ್ಯಾಪ್ಷನ್‌ (Caption) ಜತೆಗೆ ನೋಟಿನ ಚಿತ್ರವನ್ನು ಪೋಸ್ಟ್‌ ಮಾಡಿರುವುದು ಗೊಂದಲಕ್ಕೆ ಕಾರಣವಾಗಿತ್ತು.

You might also like
Leave A Reply

Your email address will not be published.