10 ನಿಮಿಷದಲ್ಲೇ ರುಚಿಯಾದ ಪನೀರ್‌ ಪಕೋಡ ಮಾಡಿ – ಸಂಗಾತಿಯ ಜೊತೆ ಸವಿಯಿರಿ!

ಒಂದೆಡೆ ಕ್ರಿಕೆಟ್ ಮತ್ತೊಂದೆಡೆ ಎಲೆಕ್ಷನ್! ಇವೆರೆಡರ ನಿರೀಕ್ಷೆಯಲ್ಲಿ ಮುಂದೇನಾಗುತ್ತೊ ಎಂದು ಯೋಚಿಸ್ತಿದ್ದಿರಾ? ಈ ಯೋಚನೆಯೊಟ್ಟಿಗೆ ಹಾಗೆ ಚಹಾದೊಂದಿಗೆ ಬಿಸಿಬಿಸಿಯಾಗಿ ತಿನ್ನಲು ಏನಾದರೂ ಸಿಕ್ಕರೆ ಅದರಲ್ಲಿ ಸಿಗುವ ಸಮಾಧಾನವೇ ಬೇರೆ ಅಲ್ವಾ?

ಅದರಲ್ಲೂ ಬಜ್ಜಿ, ಪಕೋಡ ಮುಂತಾದ ತಿನಿಸುಗಳು ಮನಸ್ಸಿಗೆ ಅದೆಷ್ಟು ಮುದ ಕೊಡೊತ್ತೊ ಏನೋ ಗೊತ್ತಿಲ್ಲ; ಬಟ್ ನಿಮ್ ಬಾಯಿಗಂತು ರುಚಿಕೊಡೊದ್ರಲ್ಲಿ ಮಿಸ್ಸೆ ಇಲ್ಲ. ಇನ್ಯಾಕೆ ತಡ ಬನ್ನಿ ಬಿಸಿ ಬಿಸಿ ಪನ್ನೀರ್ ಪಕ್ಕೊಡ ಮಾಡದು ಹೇಳ್ಕೊಡ್ತಿವಿ, ಫಟ್ ಅಂತ ಮಾಡ್ಕೊಂಡು ಇದೇ ವೆಬ್ಸೈಟ್ ಅಲ್ಲಿ ಕ್ರಿಕೆಟ್ ಮತ್ತೆ ರಾಜಕೀಯ ಕುರಿತು ಅಪ್ಡೆಟ್ ಹಾಕ್ತಿರೋ ಸುದ್ದಿನ ಮಿಸ್ ಮಾಡ್ದೆ ಓದಿ..

ಇವತ್ತಿನ ನಮ್ಮ ರೆಸಿಪಿಯಲ್ಲಿ ಕೇವಲ 10 ನಿಮಿಷದಲ್ಲಿ ತಯಾರಿಸಬಹುದಾದ ಪನೀರ್ ಪಕೋಡನ ಹೇಗೆ ಮಾಡೋದು ಅನ್ನೊದನ್ನ ತಿಳಿಸ್ತಿದ್ದಿವಿ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:

1) ಪನೀರ್ ಕ್ಯೂಬ್ಸ್ – 500 ಗ್ರಾಂ
2) ಕಡ್ಲೆ ಹಿಟ್ಟು – 1 ಕಪ್
3) ಅಚ್ಚಖಾರದ ಪುಡಿ – 1 ಚಮಚ
4) ಅರಶಿಣ – 1 ಚಮಚ
5) ಉಪ್ಪು – ರುಚಿಗೆ ತಕ್ಕಷ್ಟು
6) ಜೀರಿಗೆ ಪುಡಿ – ಅರ್ಧ ಚಮಚ
7) ಅಡುಗೆ ಸೋಡಾ – 1 ಚಮಚ
8) ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
9) ಚಾಟ್ ಮಸಾಲ – ಸ್ವಲ್ಪ

ಮಾಡುವ ವಿಧಾನ:

ಮೊದಲಿಗೆ ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರು, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಉಪ್ಪು, ಅರಿಶಿಣ ಮತ್ತು ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡ್ಕೊಳಿ. (ಮಿಶ್ರಣ ದಪ್ಪ ಇರ್ಬೇಕು, ತೆಳುವಾಗಿರಬಾರದು)

ಈಗ ಪನೀರ್ ಕ್ಯೂಬ್ಸ್ ಅನ್ನು ಈ ಮಿಶ್ರಣದಲ್ಲಿ ಚೆನ್ನಾಗಿ ಅದ್ದಿ. ಪನೀರ್ ಗೆ ಈ ಮಿಶ್ರಣ ಚೆನ್ನಾಗಿ ಹೊಂದಿಕೊಳ್ಳುವಂತೆ ಕೋಟಿಂಗ್ ಮಾಡ್ಕೊಳಿ.

ಇದಿಷ್ಟು ಆದ್ಮೇಲೆ ಒಂದು ಬಾಣಾಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿಗಿಟ್ಟು, ಕಾದ ಬಳಿಕ ಅದಕ್ಕೆ ಕಡ್ಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿದ ಪನೀರ್ ಕ್ಯೂಬ್ಸ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡ್ಕೊಳ್ಳಿ. ಅದೇ ರೀತಿ ಎಲ್ಲಾ ಪನೀರ್ ಕ್ಯೂಬ್ಸ್’ಗಳನ್ನು ಕಾಯಿಸಿಕೊಳ್ಳಿ. ನಂತರ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಚಾಟ್ ಮಸಾಲ ಪುಡಿಯನ್ನು ಹಾಕಿ ಕೆಚಪ್ ಅಥವಾ ಗ್ರೀನ್ ಚಟ್ನಿಯೊಂದಿಗೆ ಬಿಸಿಬಿಸಿಯಾಗಿ ಸೇವಿಸಿ.

You might also like
Leave A Reply

Your email address will not be published.