ಲವ್‌ ಜಿಹಾದ್‌ : ಮುಸ್ಲಿಂ ಯುವಕನಿಂದ ಲವ್‌, ಸೆಕ್ಸ್‌ ದೋಖಾ!

ದಿನದಿಂದ ದಿನಕ್ಕೆ ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಈಗ ಅಂತಹುದೇ ಮತ್ತೊಂದು ಪ್ರಕರಣ ಅಸ್ಸಾಂ‌ನ ಗುವಾಹಟಿಯಲ್ಲಿ ಬೆಳಕಿಗೆ ಬಂದಿದೆ. ಗುವಾಹಟಿಯ ಚಾಂದ್‌ಮಾರಿ ಪೋಲಿಸರು ಹಮಿದುಲ್ ಇಸ್ಲಾಂ ಎಂಬ ಯುವಕನನ್ನು ಗುವಾಹಟಿಯ ಜಿ.ಎಸ್.ರೋಡ್ ಪ್ರದೇಶದಿಂದ ಹಿಂದೂ ಯುವತಿಯರಿಗೆ ಹಿಂದೂ ಯುವಕನ ಹೆಸರಿನಲ್ಲಿ ವಂಚನೆ ಮಾಡಿ ಅವರನ್ನು ಮೋಸದ ಬಲೆಯಲ್ಲಿ ಕೆಡವಲು ಯತ್ನಿಸುತ್ತಿದ್ದ ಪ್ರಕರಣದ ಮೇಲೆ ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ರಂಗಿಯಾ ಪ್ರದೇಶಕ್ಕೆ ಸೇರಿದ ಯುವಕ ಹಮೀದುಲ್ ಇಸ್ಲಾಂ ಹಿಂದೂ ಯುವತಿಯೋರ್ವವಳಿಗೆ ಹಿಂದೂ ಯುವಕನ ಹೆಸರಿನಲ್ಲಿ ಪ್ರೇಮಪಾಶದಲ್ಲಿ ಬಂಧಿಸಲು ಯತ್ನಿಸಿದ ಪ್ರಕರಣ ನಡೆದಿರುವುದಾಗಿ ಹಿಂದೂ ಯುವತಿಯೋರ್ವಳು ದೂರು ದಾಖಲಿಸಿರುವುದು ಬೆಳಕಿಗೆ ಬಂದಿದೆ‌. ಈ ಯುವತಿಯ ಜೊತೆ ದೈಹಿಕ ಸಂಪರ್ಕ ಹೊಂದಿ ಗರ್ಭಿಣಿಯಾದ ಬಳಿಕ ಪ್ರತಿಬಾರಿಯು ಗರ್ಭಪಾತ ಮಾಡಿಸುವಂತೆ ಒತ್ತಾಯ ಮಾಡುತ್ತಿದ್ದ ಈ ತನಕ ಏನಿಲ್ಲವೆಂದರೂ ಕನಿಷ್ಠ ಐದು ಬಾರಿ ಗರ್ಭಪಾತ ಮಾಡಿಸಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.

ಇನ್ನು ದೂರಿನಲ್ಲಿ ಯುವತಿ, ನಾನು ಲವ್ ಜಿಹಾದ್‌ನ ಬಲಿಪಶುವಾಗಿದ್ದೇನೆ, ಆರಂಭದಲ್ಲಿ ಯುವಕ ಹಿಂದೂ ಯುವಕನಂತೆ ತನಗೆ ಪರಿಚಯಿಸಿಕೊಂಡಿದ್ದ, ಕಾಲಾನಂತರದಲ್ಲಿ ಆತನ ನಿಜ ರೂಪ ತನಗೆ ಅರಿವಾಗಿದ್ದಾಗಿ ಹೇಳಿಕೊಂಡಿದ್ದಾಳೆ.

Love Jihad: Love, Sex Dokha by Muslim Youth!

ಇನ್ನು ಆರೋಪಿ ಹಮಿದುಲ್ ಇಸ್ಲಾಂ ಬರೀ ದೈಹಿಕವಾಗಿ, ಮಾನಸಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಯುವತಿಯನ್ನು ವಂಚಿಸಿದ್ದು ಈ ತನಕ ಅಂದರೆ ಮೂರು ವರ್ಷದ ಸಂಬಂಧದಲ್ಲಿ ಬರೋಬ್ಬರಿ ಹನ್ನೆರಡು ಲಕ್ಷದ ತನಕ ಹಣ ದೇಪಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ. ವರದಿಗಳ ಪ್ರಕಾರ ಯೂಟ್ಯೂಬ್ ನಲ್ಲಿ 6,39,000 ಫಾಲೋವರ್ಸ್ ಹೊಂದಿರುವ ಸನ್ನಿ ಗೋಲ್ಡನ್ ಎಂಬ ಹೆಸರಿನ ಖಾತೆಯ ಮಾಲಿಕ ಈ ಆರೋಪಿಯ ಸಹೋದರ ಎಂದು ತಿಳಿದು ಬಂದಿದೆ. ಇನ್ನು ಅಸ್ಸಾಂನಲ್ಲಿ ಲವ್ ಜಿಹಾದ್‌ನಂತಹ ಪ್ರಕರಣಗಳಲ್ಲಿ ಸಹಿಷ್ಣುತೆ ತೋರುವ ಪ್ರಶ್ನೆಯೇ ಇಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಹೇಳಿಕೆಯೆ ಬೆನ್ನಲ್ಲೇ ಈ ಪ್ರಕರಣದ ತನಿಖೆಯನ್ನು ಪೋಲಿಸರು ಚುರುಕುಗೊಳಿಸಿದ್ದಾರೆ ಎನ್ನಲಾಗಿದೆ.

You might also like
Leave A Reply

Your email address will not be published.