ತರಬೇತಿ ವೇಳೆ ಪತನಗೊಂಡ ಭಾರತೀಯ ನೌಕಾಪಡೆಯ ಸ್ವಯಂಚಾಲಿತ ವಿಮಾನ – ಆದ ಹಾನಿಯೆಷ್ಟು?

ವಾಯುಸೇನೆ, ನೌಕಾಸೇನೆಯ ವಿಮಾನ ಪತನ ಎಂದಾಗ ಬಹಳ ಆತಂಕಗೊಳ್ಳುವ ಪರಿಸ್ಥಿತಿ ಪ್ರಸ್ತುತ ದಿನಗಳಲಿ ಸೃಷ್ಟಿಯಾಗಿದೆ. ತಾಂತ್ರಿಕ ಕಾರಣಗಳಲ್ಲದೇ ಇದ್ದರೂ ಕೂಡ, ವೈಮಾನಿಕ ನೆಲೆಗಳಲ್ಲಿ ಹಾಗೂ ವಾತಾವರಣದ ವೈಪರೀತ್ಯಗಳಿಂದ ಅಪಘಾತಗಳು ಸಂಭವಿಸಿರುವ ದುರ್ಘಟನೆಗಳು ಕಣ್ಣ ಮುಂದಿರುವಂತೆಯೇ, ಇದೀಗ ಭಾರತೀಯ ನೌಕಾಪಡೆಯ ವಿಮಾನವೊಂದು ಪತನಗೊಂಡಿದೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಮಾರ್ಚ್ 18, ಸೋಮವಾರ, ತರಬೇತಿ ಹಾರಾಟದ ವೇಳೆ, ಕೊಚ್ಚಿಯಲ್ಲಿ ಭಾರತೀಯ ನೌಕಾಪಡೆಯ ಸ್ವಯಂಚಾಲಿತ ಏರ್ ಕ್ರಾಫ್ಟ್ ಒಂದು ಪತನಗೊಂಡಿದೆ. ಐ.ಎನ್.ಎಸ್ ಗರುಡ ಬೇಸ್ ನಲ್ಲಿ ಈ ವಿಮಾನ ಪತನಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ನೌಕಾಪಡೆ ಹೇಳಿದೆ.

ಸಂಜೆ ಐದು ಗಂಟೆಯ ವೇಳೆಗೆ ಐ.ಎನ್.ಎಸ್ ಗರುಡ ಬೇಸ್ ನ ಕೊಚ್ಚಿ ಭಾಗದಲ್ಲಿ ರನ್ ವೇ ಗಿಂತ ಸರಿಸುಮಾರ್ ಒಂದು ಮೈಲಿ ದೂರದಲ್ಲಿ ತರಬೇತಿ ಹಾರಾಟದಲ್ಲಿರುವಾಗಲೇ ಪತನಗೊಂಡಿದೆ. ವಿಮಾನದ ಪತನದ ಕುರಿತು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ನೌಕಾಪಡೆ, ಯಾವುದೇ ವಸ್ತುಗಳಿಗೆ ಅಥವಾ ಪ್ರಾಣಹಾನಿ ಸಂಭವಿಸಿಲ್ಲದಿರುವುದಾಗಿ ವರದಿ ಮಾಡಿದ್ದು, ಸ್ವಯಂಚಾಲಿತ ರಿಮೋಟ್ ಕಂಟ್ರೋಲ್ ಹೊಂದಿರುವ ಈ ವಿಮಾನದ ಪತನವು ಯಾವುದೇ ಭದ್ರತಾ ಕಾರ್ಯಚರಣೆಯಲ್ಲಿ ನಿಯೋಜಿತವಾಗಿಲ್ಲವೆಂದು ನೌಕಾಪಡೆ ಸ್ಪಷ್ಟಪಡಿಸಿದೆ.

ಮೊನ್ನೆಯಷ್ಟೇ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ತರಬೇತಿ ವೇಳೆ ತೇಜಸ್ ಏರ್ ಕ್ರಾಫ್ಟ್ ಪತನಗೊಂಡು, ಅದೃಷ್ಟವಶಾತ್ ಪೈಲಟ್’ಗಳು ಅಪಾಯದಿಂದ ಪಾರಾಗಿರುವ ಘಟನೆಯ ನಂತರ ತರಬೇತಿ ಹಾರಾಟದ ವೇಳೆ ಅತ್ಯಂತ ಹೆಚ್ಚಿನ ಸುರಕ್ಷತೆಯನ್ನು ಕೈಗೊಳ್ಳುವಂತೆ ಈಗಾಗಲೇ ಸೇನಾ ವಲಯಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ.

You might also like
Leave A Reply

Your email address will not be published.