RCB ವನಿತೆಯರಿಗೆ ಸಂದ ಹಣವೆಷ್ಟು ಗೊತ್ತೇ? ಶ್ರೇಯಾಂಕ ಪಟೇಲ್‌ʼಗೆ ಒಲಿಯಿತು 10 ಲಕ್ಷ!

ಮಹಿಳಾ ಪ್ರೀಮಿಯರ್ ಲೀಗ್’ನ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ 8 ವಿಕೆಟ್’ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ, 16 ವರ್ಷಗಳ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡುವ ಜೊತೆಗೆ ಕೋಟಿ ಕೋಟಿ ಬಹುಮಾನವನ್ನು ಬಾಚಿಕೊಂಡಿದೆ. ಹಾಗಾದರೆ ಆರ್’ಸಿಬಿ ದೋಚಿದ ಬಹುಮಾನದ ಮೊತ್ತ ಎಷ್ಟು ಗೊತ್ತ?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಫೈನಲ್ ಹಣಾಹಣಿಯಲ್ಲಿ 8 ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಆದ ಆರ್’ಸಿಬಿ ಮಹಿಳಾ ತಂಡಕ್ಕೆ 6 ಕೋಟಿ ರೂ. ಗಳ ನಗದು ಬಹುಮಾನ ನೀಡಲಾಗಿದೆ. ರನ್ನರ್ ಅಪ್ ಪ್ರಶಸ್ತಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 3 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿದೆ..

ಬಹುಮಾನದ ವಿವರ:
1. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಚಾಂಪಿಯನ್): 6 ಕೋಟಿ ರೂ.
2. ಡೆಲ್ಲಿ ಕ್ಯಾಪಿಟಲ್ಸ್ (ರನ್ನರ್ ಅಪ್): 3 ಕೋಟಿ ರೂ.
3. ಶಫಾಲಿ ವರ್ಮಾ (ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್): 1 ಲಕ್ಷ ರೂ.
4. ಶಫಾಲಿ ವರ್ಮಾ (ಸಿಕ್ಸರ್ ಆಫ್ ದಿ ಮ್ಯಾಚ್): 1 ಲಕ್ಷ ರೂ.
5. ಶಫಾಲಿ ವರ್ಮಾ ( ಸಿಕ್ಸರ್ ಆಫ್ ದಿ ಸೀಸನ್): 5 ಲಕ್ಷ ರೂ.
6. ಶ್ರೇಯಾಂಕಾ ಪಾಟೀಲ್ (ಉದಯೋನ್ಮುಖ ಆಟಗಾರ್ತಿ): 5 ಲಕ್ಷ ರೂ.
7. ಎಲಿಸ್ ಪೆರ್ರಿ (ಆರಂಜ್ ಕ್ಯಾಪ್): 5 ಲಕ್ಷ ರೂ.
8. ಶ್ರೇಯಾಂಕಾ ಪಾಟೀಲ್ (ಪರ್ಪಲ್ ಕ್ಯಾಪ್): 5 ಲಕ್ಷ ರೂ.
9. ದೀಪ್ತಿ ಶರ್ಮಾ (ಅತ್ಯಂತ ಮೌಲ್ಯಯುತ ಆಟಗಾರ್ತಿ): 5 ಲಕ್ಷ ರೂ.

You might also like
Leave A Reply

Your email address will not be published.