RCB ಅಭಿಮಾನಿಗಳಿಗೆ ಶುಭಸುದ್ದಿ ನೀಡಿದ ಬಿಎಂಟಿಸಿ – ಏನದು?

ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಇಂದು ನಡೆಯಲಿರುವ ಆರ್’ಸಿಬಿ ಅನ್’ಬಾಕ್ಸ್‌ ಕಾರ್ಯಕ್ರಮ (RCB Unbox Event) ಮತ್ತು ಮೂರು ಐಪಿಎಲ್‌ (IPL) ಪಂದ್ಯಗಳನ್ನು ವೀಕ್ಷಿಸುವ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಎಂಟಿಸಿ ಕಡೆಯಿಂದ ಸಿಹಿ ಸುದ್ದಿ!

ಹೌದು! ಇಂದು (ಮಂಗಳವಾರ) ಆರ್’ಸಿಬಿ ಅನ್’ಬಾಕ್ಸ್‌ ಕಾರ್ಯಕ್ರಮ ನಡೆಯಲಿದ್ದು, ಮಾರ್ಚ್‌ 25, 29 ಮತ್ತು ಏಪ್ರಿಲ್‌ 2ರಂದು ಐಪಿಎಲ್ ಕ್ರಿಕೆಟ್‌ ಪಂದ್ಯವೂ ನಡೆಯಲಿದೆ. ಈ ನಿಟ್ಟಿನಲ್ಲಿ ಕ್ರಿಕೆಟ್ ವೀಕ್ಷಣೆಗಾಗಿ ಬರುತ್ತಿರುವ ಅಭಿಮಾನಿಗಳಿಗೆ ಸಂಚಾರದಲ್ಲಿ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಈ ಎಲ್ಲಾ ದಿನ ಸಂಜೆ ಮತ್ತು ರಾತ್ರಿ ಹೆಚ್ಚುವರಿ ಬಿಎಂಟಿಸಿ ಬಸ್ಸುಗಳನ್ನು ಇಳಿಸುವುದಾಗಿ ತಿಳಿಸಿದೆ.

ಯಾವ ಯಾವ ನಗರಗಳಿಗೆ ಬಸ್ ಸೌಲಭ್ಯ?

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್‌ ಸಿಟಿಗೆ, ಎಂಟಿಸಿಟಿ–ನಾಯಂಡಹಳ್ಳಿ ಮೂಲಕ ಕೆಂಗೇರಿ ಕೆಎಚ್‌ಬಿ ಕ್ವಾರ್ಟರ್ಸ್‌ಗೆ, ಎಚ್‌ಎಎಲ್ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ, ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್‌ ನಿಲ್ದಾಣಕ್ಕೆ ಮಾಗಡಿ ರಸ್ತೆ ಮೂಲಕ ಜನಪ್ರಿಯ ಟೌನ್‌ಶಿಪ್‌ಗೆ, ನಾಗವಾರ–ಟ್ಯಾನರಿ ರಸ್ತೆ ಮೂಲಕ ಆರ್‌.ಕೆ. ಹೆಗಡೆ ನಗರಕ್ಕೆ, ಹೆಣ್ಣೂರು ರಸ್ತೆ ಮೂಲಕ ಬಾಗಲೂರಿಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಹಾಗೂ ಸರ್ಜಾಪುರ, ಬನ್ನೇರುಘಟ್ಟ ಮೃಗಾಲಯ, ನೆಲಮಂಗಲ, ಯಲಹಂಕ 5ನೇ ಹಂತ, ಹೊಸಕೋಟೆಗಳಿಗೂ ಹೆಚ್ಚುವರಿ ಬಸ್‌ ವ್ಯವಸ್ಥೆ ಇರಲಿದೆ.

You might also like
Leave A Reply

Your email address will not be published.