ಹಿಂದೂ ಮಹಿಳೆ ಅಮೆರಿಕಾದ ಅಧ್ಯಕ್ಷರಾಗುತ್ತಾರಾ? – ಇಲ್ಲಿದೆ ವರದಿ

ಇಡೀ ವಿಶ್ವದ ಚಿತ್ತ ಈಗ ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿಯಾಗಿರುವ ಅಮೆರಿಕದತ್ತ ನೆಟ್ಟಿದೆ. ಇದಕ್ಕೆ ಕಾರಣ ಈಗ ಅಲ್ಲಿ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆ. ಅದರಲ್ಲೂ ಈ ಬಾರಿ ಕಣಕ್ಕಿಳಿಯುತ್ತಿರುವ ಹಿಂದೂ ಮಹಿಳೆ! ಉಪಾಧ್ಯಕ್ಷೆಯಾಗ್ತಾರ? ಅಥವಾ ಅಧ್ಯಕ್ಷರಾಗ್ತಾರ ಕಾದು ನೋಡಬೇಕಿದೆ. ಏನಿದು ಸ್ಟೋರಿ?

ಹೌದು! ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಇದೀಗ ಸ್ಪರ್ಧೆ ನಡೆಯುತ್ತಿದ್ದು, ಸದ್ಯ ಪ್ರಮುಖ ಪಕ್ಷಗಳಾದ ರಿಪಬ್ಲಿಕನ್‌ ಮತ್ತು ಡೆಮಾಕ್ರೆಟಿಕ್‌ ಪಕ್ಷಗಳಲ್ಲಿ ಸೂಕ್ತ ಅಭ್ಯರ್ಥಿಗಾಗಿ ಪ್ರಾಥಮಿಕ ಮತದಾನ (Primary Voting) ನಡೆಯುತ್ತಿದೆ.

ಎಲ್ಲರಿಗೂ ಗೊತ್ತಿರೋ ಹಾಗೆ ಡೆಮಾಕ್ರೆಟಿಕ್‌ ಪಕ್ಷದಲ್ಲಿ ಈಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಇದ್ದು, ರಿಪಬ್ಲಿಕನ್‌ ಪಕ್ಷದಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಟ್ರಂಪ್‌ ನಿಂತಿದ್ದಾರೆ. ಇಲ್ಲಿ ಜೋ ಬೈಡಾನ್ ಓಡುವ ಕುದುರೆಯಂತೆ ಇದ್ದರು, ಟ್ರಂಪ್ ನ ಜನಪ್ರಿಯತೆಗೆ ರಿಪಬ್ಲಿಕನ್‌ ಅಭ್ಯರ್ಥಿ ನಿಕ್ಕಿ ಹ್ಯಾಲೆಗೆ ಇತ್ತೀಚಿನ ಪ್ರೈಮರೀಸ್‌ ವೋಟಿಂಗ್‌ನಲ್ಲಿ ಭಾರಿ ಹಿನ್ನಡೆಯಾಗಿ ಮುಖಭಂಗ ಆಗಿರೋ ವಿಚಾರ ಎಲ್ಲರಿಗೂ ತಿಳಿದೆ ಇದೆ.

ಹೆಚ್ಚುತ್ತಿದೆಯೇ ಟ್ರಂಪ್ ನ ಪಾಪ್ಯೂಲರಿಟಿ!

ಪ್ರಸ್ತುತತೆಯಲ್ಲಿ ರಿಪಬ್ಲಿಕನ್‌ ನಲ್ಲಿ ಟ್ರಂಪ್‌ ಗೆ ಟಕ್ಕರ್‌ ಕೊಡೋ ಕ್ಯಾಂಡಿಡೇಟ್ಸ್‌ ಇಲ್ದೇ ಇರೋದ್ರಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಟ್ರಂಪ್‌ ಮತ್ತು ಬೈಡನ್‌ ಮುಖಾಮುಖಿ ಆಗೋದು ಪಕ್ಕ. ಯಾಕಂದ್ರೆ, ಇತ್ತೀಚಿನ ದಿನಗಳಲ್ಲಿ ಟ್ರಂಪ್‌ ಪಾಪ್ಯುಲಾರಿಟಿ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ. ಇಲ್ಲಿವರೆಗೂ ನಡೆದ ಪ್ರೈಮರೀಸ್‌ ವೋಟಿಂಗ್‌ ಗಮನಿಸಿದ್ರೆ, ಬೈಡನ್‌ ರಿಂದ ಟ್ರಂಪ್‌ ಗೆ ಜನಬೆಂಬಲ ಕೊಂಚ ಜಾಸ್ತಿನೇ ಇದೆ.

ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷೆಯಾಗಿ ಹಿಂ

Will a Hindu woman become the President of America? - Here is the report

ದೂ ಮಹಿಳೆ ಕಣಕ್ಕೆ – ಯಾರದು?

ಇದರ ನಡುವೆ ರಿಪಬ್ಲಿಕನ್‌ ಪಾರ್ಟಿಯ ಉಪಾಧ್ಯಕ್ಷರಾಗಿ ಹಿಂದೂ ಮಹಿಳೆ, ಮಾಜಿ ಅಮೆರಿಕ ಸಂಸದೆ ತುಳಸಿ ಗಬ್ಬಾರ್ಡ್‌ ಹೆಸರು ಕೇಳಬರುತ್ತಿದೆ. ಈ ಕುರಿತು ಟ್ರಂಪ್‌ ಮತ್ತು ತುಳಸಿ ಗಬ್ಬಾರ್ಡ್‌ ನಡುವೆ ಮಾತುಕತೆಯು ನಡೆದಿದೆ. ಟ್ರಂಪ್‌ ಅಧ್ಯಕ್ಷೀಯ ರೇಸ್‌ನಲ್ಲಿ ತುಳಸಿ ಗಬ್ಬಾರ್ಡ್‌ ಉಪಾಧ್ಯಕ್ಷೀಯ ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆಗಳಿವೆ ಎಂದು ಅಮೆರಿಕದ ಪತ್ರಿಕೆ ದಿ ವಾಷಿಂಗ್‌ ಟನ್‌ ಪೋಸ್ಟ್‌ ವರದಿ ಮಾಡಿತ್ತು. ಕಮಲಾ ಹ್ಯಾರಿಸ್‌ ನಂತರ ಹಿಂದೂ ಮಹಿಳೆ ಒಬ್ಬರು ಅಮೆರಿಕದಲ್ಲಿ ಉಪಾಧ್ಯಕ್ಷರಾಗೋ ಅವಕಾಶ ಹೆಚ್ಚಾಗಿದೆ ಎಂದೆ ಹೇಳಬಹುದು.

ಅಷ್ಟಕ್ಕೂ ಯಾರಿದೂ ತುಳುಸಿ ಗಬ್ಬಾರ್ಡ್?

ತುಳಸಿ ಗಬ್ಬಾರ್ಡ್‌ ಅವ್ರು ಹುಟ್ಟಿದ್ದು ಬೆಳದಿದ್ದು ಅಮೆರಿಕ. ಮೂಲ ಭಾರತೀಯ ಆಗದಿದ್ರು, ಅವರ ತಾಯಿಯಿಂದ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರೆ. 2013 ಮತ್ತು 2021ರ ಅವಧಿಯಲ್ಲಿ ಅಮೆರಿಕಾದ ಡೆಮಾಕ್ರೆಟಿಕ್‌ ಪಕ್ಷದ ಸಂಸದೆಯಾಗಿ ಕಾರ್ಯ ನಿರ್ವಹಿಸಿದ್ದರು. 2022ರಲ್ಲಿ ಡೆಮಾಕ್ರೆಟಿಕ್‌ ಪಕ್ಷ ತೊರೆದು ರಿಪಬ್ಲಿಕನ್‌ ಪಕ್ಷವನ್ನು ಸೇರಿದ್ದರು. ಇದೀಗ ಅಮೆರಿಕದ ಉಪಾಧ್ಯಕ್ಷೀಯ ಅಭ್ಯರ್ಥಿಯಾಗೋ ವಿಚಾರವಾಗಿ ಟ್ರಂಪ್‌ ಜೊತೆ ಮಾತುಕತೆ ನಡೆಸಿರೋದಾಗಿ ಸ್ವತಃ ತುಳಸಿ ಅವರೇ ಅಮೆರಿಕದ ನ್ಯೂಸ್‌ ಚಾನೆಲ್‌ ಒಂದರಲ್ಲಿ ಹೇಳಿಕೊಂಡಿದ್ದಾರೆ.

Will a Hindu woman become the President of America? - Here is the report

ಟ್ರಂಪ್‌ ಮತ್ತು ಬೈಡನ್‌ ರ ವಯಸ್ಸು – ಉಪಾಧ್ಯಕ್ಷರಾಗಿ ಗೆದ್ದವರಿಗೆ ಲಾಟ್ರಿ ಒಡೆಯುತ್ತ?

ಅಮೆರಿಕದಲ್ಲಿರುವ ಎರಡೂ ಪಕ್ಷದಲ್ಲಿ ಮುಂಚೂಣಿಯಲ್ಲಿರೋ ಅಭ್ಯರ್ಥಿಗಳಾದ ಟ್ರಂಪ್‌ ಮತ್ತು ಬೈಡನ್‌ ರ ವಯಸ್ಸನ್ನು ನೋಡುವುದಾದರೆ, ಅಧ್ಯಕ್ಷ ಬೈಡನ್‌ ಗೆ 81 ವರ್ಷವಾದರೆ, ಟ್ರಂಪ್‌ ಗೆ 77 ವರ್ಷವಾಗಿದೆ. ಈಗಾಗಲೇ ಅಮೆರಿಕದಲ್ಲಿ ಬೈಡನ್‌ ಅವರಿಗೆ ವಯಸ್ಸಾಗಿದೆ, ಅವರು ಅರಳು ಮರಳು ಎಂಬ ಮಾತುಗಳು ಅವಾಗವಾಗ ಕೇಳಿಬರುತ್ತಿದೆ. ಅಂದರೆ ಅಮೆರಿಕ ಅಧ್ಯಕ್ಷರ ವಯಸ್ಸೆ ಉಪಾಧ್ಯಕ್ಷರಿಗೆ ವರವಾಗೋ ಸಾಧ್ಯತೆ ಕೂಡ ಇದೆ.

ಯಾಕೆಂದರೆ, ಅಮೆರಿಕ ಸಂವಿಧಾನದ 25ನೇ ತಿದ್ದುಪಡಿ ಪ್ರಕಾರ, ಅಮೆರಿಕದ ಅಧ್ಯಕ್ಷರು ತಮ್ಮ ಅವಧಿಯಲ್ಲಿ ಮೃತಪಟ್ಟರೆ, ರಾಜಿನಾಮೆ ಮಾಡಿದ್ರೆ ಅಥವಾ ಅವ್ರನ್ನ ಉಚ್ಚಾಟನೆ ಮಾಡಿದರೆ ಉಪಾಧ್ಯಕ್ಷರೇ ಅಧ್ಯಕ್ಷರಾಗುತ್ತಾರೆ.

ಬೈಡನ್‌ರಿ ಗೆ ವಯಸ್ಸಾಗಿದ್ದು, ನೆನಪಿನ ಶಕ್ತಿ ಕುಗ್ಗುತ್ತಿದೆ. ಆದರು ಸಹ ಬೈಡಾನ್ ಮತ್ತೊಮ್ಮೆ ಅಧ್ಯಕ್ಷನಾಗಬೇಕು ಎಂದು ಪಣಕ್ಕಿಳಿದ್ದಿದ್ದಾರೆ. ಇನ್ನೂ ಟ್ರಂಪ್‌ ಗೂ ವಯಸ್ಸಗಿದ್ದು ಅವರು ಸಹ ಅಧ್ಯಕ್ಷಿಯ ಸ್ಥಾನದಿಂದ ಹೊರಬರುವ ಯಾವ ಲಕ್ಷಣಗಳು ಇಲ್ಲ.

ಒಂದು ವೇಳೆ ಉಪಾಧ್ಯಕ್ಷೆಯಾಗಿ ತುಳುಸಿ ಆಯ್ಕೆಯಾದ್ರೆ ಅಧ್ಯಕ್ಷಿಯ ಸ್ಥಾನ‌ಸಿಕ್ಕಹಾಗೆಯೇ ಎಂದು ಹೀಗಾಗಲೇ ವಿಶ್ಲೆಷಣೆಗಳು ನಡೆಯುತ್ತಲಿದೆ. ಟ್ರಂಪ್ ಮತ್ತು ಬೈಡನ್‌ ಅವರ ವಯಸ್ಸಿನಿಂದಾಗಿ ಈ ಹಿಂದೂ ಮಹಿಳಾ ಉಪಾಧ್ಯಕ್ಷರು ಅಮೆರಿಕಾದ ಅಧ್ಯಕ್ಷರಾಗೋ ಅವಕಾಶ ತುಂಬಾ ಇದೆ ಎಂದು ಹೇಳಬಹುದು.

ಈ ಹಿಂದು‌ ಮಹಿಳೆಯರು ಅಧ್ಯಕ್ಷರಾದ್ರೆ history create ಆಗದಂತು ಪಕ್ಕ!

ಹೌದು! ಅವರಿಬ್ಬರು ಹಿಂದೂ ತತ್ವ ಪಾಲಿಸೋರು ಅಥವಾ ಹಿಂದೂ ಧರ್ಮದವರು ಅನ್ನೋದ್ಕಿಂತ, ಲಿಬರ್ಟಿ, ಸ್ವಾತಂತ್ರ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಮೆರಿಕಾದಲ್ಲಿ ಇಲ್ಲಿಯವರೆಗೂ ಒಬ್ಬರೇ ಒಬ್ಬರು ಮಹಿಳೆ ಇದುವರೆಗೂ ಅಧ್ಯಕ್ಷರಾಗಿರುವುದು ಇತಿಹಾಸದಲ್ಲೇ ಇಲ್ಲ. ಮಹಿಳೆಯರಲ್ಲಿ ಆ ಸಾಮರ್ಥ್ಯವೇ ಇಲ್ಲ ಎಂಬ ಟೀಕೆಗಳು ಸಹ ಕೇಳಿಬಂದಿವೆ. ಇದೀಗ ಈ ಎರಡು ಪಕ್ಷದಲ್ಲಿರೋ ಇಬ್ಬರು ಮಹಿಳೆಯರು ಅಧ್ಯಕ್ಷರಾದ್ರೆ ಇತಿಹಾಸ ನಿರ್ಮಾಣವಾಗೋದ್ರಲ್ಲಿ ನೋ ಡೌಟ್! ಅದಾಗ್ಯೂ ನಮ್ಮ ಹಿಂದೂ ಮಹಿಳೆಯರು ಎಂಬ ಹೆಗ್ಗಳಿಕೆ ನಮ್ಮಲ್ಲಿರುತ್ತದೆ.

You might also like
Leave A Reply

Your email address will not be published.