ಲೋಕಸಭಾ ಚುನಾವಣೆ – ತುಮಕೂರಿಗೆ ಸೋಮಣ್ಣ ಪಿಕ್ಸ್

ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ‌ ದಿನಗಳು ಉಳಿದಿದೆ. ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ ಅವರ ತುಮಕೂರು ಸ್ಪರ್ಧೆಗೆ ಗ್ರೀನ್‍ ಸಿಗ್ನಲ್ ಸಿಗುತ್ತಿದ್ದಂತೆ ಉಳಿದ ಮಾಜಿ ಸಚಿವರಲ್ಲೂ ನಿರೀಕ್ಷೆಗಳು ಗರಿಗೆದರಿವೆ.

ಲೋಕಸಭೆ ಟಿಕೆಟ್‍ ಗೆ ಬಿಜೆಪಿಯ ಮಾಜಿ ಸಚಿವರಾದ ಸಿ.ಟಿ ರವಿ, ಡಾ.ಕೆ.ಸುಧಾಕರ್ ಹಾಗೂ ಶ್ರೀರಾಮುಲು ಅವರು ಲೋಕಸಭೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಹೈಕಮಾಂಡ್ ಭೇಟಿ ಮಾಡಿ, ಲೋಕಸಭಾ ಟಿಕೆಟ್‍ ಗಾಗಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಟಿ ರವಿಯವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ.ಕೆ.ಸುಧಾಕರ್ ಟಿಕೆಟ್ ಕೇಳಿದರೆ, ಇತ್ತ ಬಳ್ಳಾರಿ ಕ್ಷೇತ್ರದಿಂದ ಶ್ರೀರಾಮುಲು ಟಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

Lok Sabha Elections - Somanna Picks for Tumkur

ಹೈಕಮಾಂಡ್ ನಿರ್ಧಾನವೇನು?

ಹೈಕಮಾಂಡ್ ಸಮೀಪವರ್ತಿ ನಾಯಕರ ಮೂಲಕವೂ ಟಿಕೆಟ್‍ ಗೆ ಲಾಬಿ ನಡೆಸಲಾಗುತ್ತಿದೆ. ಆದರೆ ಮಾಜಿಗಳಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ಸಂದೇಶ ಕೊಟ್ಟಿಲ್ಲ. ಜೊತೆಗೆ ಲೋಕಸಭಾ ಕ್ಷೇತ್ರಗಳ ಸರ್ವೆ ಆಧರಿಸಿ ಗೆಲ್ಲುವವರಿಗೆ ಮಾತ್ರ ಟಿಕೆಟ್ ಕೊಡಲು ನಿರ್ಣಯ ಮಾಡಿದೆ. ಸರ್ವೆಗಳಲ್ಲಿ ಮಾಜಿ ಸಚಿವರ ಪರ ಮತದಾರರು ಒಲವು ತೋರಿದರೆ ಮಾತ್ರ ಟಿಕೆಟ್ ಸಿಗಲಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.

You might also like
Leave A Reply

Your email address will not be published.