ರಾಷ್ಟ್ರಕವಿಗೆ ಅವಮಾನ – ಕೈ ಮುಗಿದು ಒಳಗೆ ಬಾ ಬದಲು, ಧೈರ್ಯವಾಗಿ ಪ್ರಶ್ನಿಸು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದಲೂ ಸದಾ ಒಂದಿಲ್ಲೊಂದು ವಿವಾದದಲ್ಲಿ ಸುದ್ದಿ ಆಗುತ್ತಲೇ ಇದೆ‌. ಈಗ ಅಂತಹುದೇ ಮತ್ತೊಂದು ವಿವಾದಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿರುವ ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬ ಆಚರಣೆ ಮಾಡಬಾರದೆಂದು ಆದೇಶ ಹೊರಡಿಸಿ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ, ಈಗ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿನ ಕುವೆಂಪುರವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದು ಹಾಕಲಾದ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ಘೋಷವಾಕ್ಯವನ್ನು ಸದ್ದಿಲ್ಲದೆ ಬದಲಾಯಿಸಿದ್ದು ಕುವೆಂಪು ಅಭಿಮಾನಿಗಳ ಹಾಗೂ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

Disgrace to national poet - Kuvempu's sentence changed by social welfare department

ವಸತಿ ಶಾಲಾ ಕಾಲೇಜುಗಳ ಪ್ರವೇಶ ದ್ವಾರದಲ್ಲಿ ಈಗಾಗಲೇ ಇದ್ದ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎನ್ನುವ ಘೋಷ ವಾಕ್ಯವನ್ನು ತೆಗೆದು ಈಗ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಲಾಗಿದೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಈ ಕ್ರಮ ವ್ಯಾಪಕ ಚರ್ಚೆಗೆ ಒಳಗಾಗಿದೆ. ಅಷ್ಟೇ ಅಲ್ಲದೆ ಶಿಕ್ಷಕರ ವಲಯದಲ್ಲೇ ಈ ಹೊಸ ಘೋಷವಾಕ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ವಸತಿ ಶಾಲೆಗಳ ಶಿಕ್ಷಕರ ಟೆಲಿಗ್ರಾಂ ಗ್ರೂಪ್ ಒಂದರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಕ್ಯಾಪ್ಟನ್ ಮಣಿವಣ್ಣನ್ ಅವರು ಎಲ್ಲಾ 833 ಶಾಲೆಗಳಲ್ಲಿ ಈ ಘೋಷವಾಕ್ಯವನ್ನು ಬದಲಾಯಿಸುವಂತೆ ಮೌಖಿಕ ಆದೇಶ ನೀಡಿದ್ದು, ಈ ವಿಷಯ ಸಚಿವರಿಗೆ ತಿಳಿದಿದೆಯೋ ಇಲ್ಲವೋ ಎಂಬುದರ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

Disgrace to national poet - Kuvempu's sentence changed by social welfare department

ಇನ್ನು ಈ ಘೋಷವಾಕ್ಯ ಬದಲಾವಣೆಗೆ ಸರ್ಕಾರದಿಂದ ಈತನಕ ಯಾವುದೇ ಅಧಿಕೃತ ಆದೇಶವಿಲ್ಲ ಅಥವಾ ಆದೇಶ ನೀಡಿದರೆ ಇನ್ನೊಂದು ವಿವಾದಕ್ಕೆ ಕಾರಣವಾಗಬಹುದು ಎಂದು ಮೌಖಿಕವಾಗಿ ಸೂಚನೆ ನೀಡಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ಘೋಷವಾಕ್ಯ ಬದಲಾವಣೆಗೆ ಒಂದು ತಿಂಗಳ ಹಿಂದೆಯೇ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೂ ಮೌಖಿಕ ಸಂದೇಶ ರವಾನೆ ಮಾಡಲಾಗಿತ್ತು. ಇಂದು ತಿಳಿದು ಬಂದ ವಿಚಾರವೆಂದರೆ ಈ ಸಂಪೂರ್ಣ ವಿಷಯದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಹದೇವಪ್ಪ ಅವರ ಗಮನಕ್ಕೆ ಅಧಿಕಾರಿಗಳು ಇಂದು ತಂದಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಬಹುತೇಕ ಶಾಲೆಗಳು ಘೋಷವಾಕ್ಯವನ್ನು ಬದಲಾವಣೆ ಮಾಡಿದ್ದು, ಇನ್ನು ಕೆಲವೆಡೆ ಸರ್ಕಾರಿ ಆದೇಶ ಬರದ ಕಾರಣ ಘೋಷವಾಕ್ಯ ಬದಲಾವಣೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

ಇನ್ನು ಈ ವಿಚಾರವಾಗಿ ಕುವೆಂಪುರವರ ಅಭಿಮಾನಿಗಳು ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಕನ್ನಡಪರ ಹೋರಾಟಗಾರರು ಮತ್ತು ಕಾಂಗ್ರೆಸ್ ಬೆಂಬಲಿಗರು ಕುವೆಂಪುರವರ ಸಾಲನ್ನು ಸ್ಲೇವರಿ ಫ್ರೇಸ್ ಎಂದು ಕರೆದದ್ದಲ್ಲದೇ, ತಿರುಚಿದ್ದರ ಕುರಿತು ಸೊಲ್ಲನ್ನೆತ್ತದಿರುವುದು ಕನ್ನಡ ಪರ ಸಂಘಟನೆಗಳ ಇಬ್ಬಗೆಯ ನಿಲುವುಗಳಿಗೆ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

You might also like
Leave A Reply

Your email address will not be published.