ಗೃಹ ಜ್ಯೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ – ನಿಮಗೂ ಈ ನಿಯಮ ಅನ್ವಯಿಸುತ್ತಾ?

ಇಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಗೃಹಜ್ಯೋತಿ ಯೋಜನೆಯಲ್ಲಿ (Gruha Jyoti Scheme) ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಗೃಹಜ್ಯೋತಿ ಫಲಾನುಭವಿಗಳ (Gruha Jyoti Beneficiaries) ವಾರ್ಷಿಕ ವಿದ್ಯುತ್‌ ಬಳಕೆಯ ಸರಾಸರಿ 200 ಯೂನಿಟ್‌ ಒಳಗಡೆ ಇದ್ದಲ್ಲಿ ಅಂತಹವರಿಗೆ ಶೇ.10 ರಷ್ಟು ಹೆಚ್ಚಿನ ವಿದ್ಯುತ್‌ ಬಳಕೆಗೆ ಅನುಮತಿ ನೀಡಿತ್ತು. ಇದೀಗ, ಈ ನಿಯಮಕ್ಕೆ ಸಚಿವ ಸಂಪುಟದ ಮೂಲಕ ಬದಲಾವಣೆ ತರಲಾಗಿದೆ.

Grihajyoti Yojana

ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು (Gruha Jyoti Beneficiaries) ಶೇ.10 ರಷ್ಟು ಹೆಚ್ಚಿನ ವಿದ್ಯುತ್‌ ಬಳಕೆಯ ಬದಲಾಗಿ 10 ಯೂನಿಟ್‌ ವಿದ್ಯುತ್‌ ಹೆಚ್ಚಿನ ಬಳಕೆಗೆ ಸಚಿವ ಸಂಪುಟ ಅವಕಾಶ ನೀಡಿದೆ ಎಂದು ಸಚಿವ ಹೆಚ್.ಕೆ ಪಾಟೀಲ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Chiva HK Patil

ಏನಿದು ಗೃಹಜ್ಯೋತಿ ಯೋಜನೆ?
ಕಾಂಗ್ರೆಸ್‌ ಪಕ್ಷವು ಚುನಾವಣಾ ಪೂರ್ವ ನೀಡಿದ್ದ ಭರವಸೆಯಂತೆ ಅಧಿಕಾರಕ್ಕೇರಿದ ಬಳಿಕ ಜುಲೈ 1 ರಿಂದ ʼಗೃಹ ಜ್ಯೋತಿ ಯೋಜನೆʼಯನ್ನು (Gruha Jyoti Scheme) ಜಾರಿಗೆ ತಂದಿದೆ. ಈ ಯೋಜನೆಯಡಿ ರಾಜ್ಯದ ಗೃಹ ಫಲಾನುಭವಿಗಳು 200 ಯೂನಿಟ್‌ʼಗಳ ವರೆಗೆ ಉಚಿತ ವಿದ್ಯುತ್‌ ಪಡೆಯಬಹುದಾಗಿದೆ. ಈಲ್ಲಿ ಪ್ರಮುಖ ನಿಯಮ ವಿಧಿಸಿದ್ದ ರಾಜ್ಯ ಸರ್ಕಾರ ಎಲ್ಲರಿಗೂ ಏಕಾಏಕಿ 200 ಯೂನಿಟ್‌ʼಗಳ ವರೆಗೆ ವಿದ್ಯುತ್‌ ಬಳಕೆಗೆ ಅವಕಾಶ ನೀಡದೇ, ಕಳೆದ ವರ್ಷದಲ್ಲಿ ಉಪಯೋಗಿಸಿ ಒಟ್ಟು ವಿದ್ಯುತ್‌ʼನ ಸರಾಸರಿಗೆ ಮಾಸಿಕವಾಗಿ ಶೇ. 10 ರಷ್ಟು ಮಾತ್ರ ಹೆಚ್ಚು ವಿದ್ಯುತ್‌ ಬಳಕೆಗೆ ಅವಕಾಶ ನೀಡಿತ್ತು.

ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು :
ಗೃಹಜ್ಯೋತಿ ಯೋಜನೆಗೆ (Gruha Jyoti Scheme) 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರ 13 ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಮೀಸಲಿಟ್ಟಿತ್ತು. ಈ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1.62 ಕೋಟಿ ಗೃಹ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದು 1.50 ಕೋಟಿ ಗೃಹ ಬಳಕೆದಾರ ಕುಟುಂಬಗಳಿಗೆ (Gruha Jyoti Beneficiaries) ಯೋಜನೆಯ ಲಾಭ ತಲುಪಿದೆ.

 

You might also like
Leave A Reply

Your email address will not be published.