ರಾಮಮಂದಿರ ಉದ್ಘಾಟನೆ – ರೈಲ್ವೇ ಇಲಾಖೆಯಿಂದ ಗುಡ್ ನ್ಯೂಸ್

ರಾಮ ಮಂದಿರ ಉದ್ಘಾಟನೆ ನಿಮಿತ್ತ ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಯೋಧ್ಯೆಯತ್ತ ಪ್ರವಾಸ ಕೈಗೊಂಡಿರುವ ರಾಮ ಭಕ್ತರಿಗೆ ಭಾರತೀಯ ರೈಲ್ವೇ ಇಲಾಖೆ ಗುಡ್ ನ್ಯೂಸ್ ನೀಡಿದೆ. ಏನದು ಅಂತೀರ? ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಜನವರಿ 22ರಂದು ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಾಣಪ್ರತಿಷ್ಠೆ ಬಳಿಕ ಅಯೋಧ್ಯೆಗೆ ಭಾರತೀಯ ರೈಲ್ವೇ ವಿಶೇಷ ಆಸ್ಥಾ ರೈಲು ಸೇವೆ ಆರಂಭಿಸಿದೆ. ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲಾಗಿದ್ದು, ಪ್ರತಿನಿತ್ಯ ಅಯೋಧ್ಯೆಗೆ 66 ರೈಲುಗಳ ಸಂಚಾರ ಸೇವೆ ಪ್ರಾರಂಭಿಸಿದೆ.

ಪ್ರತಿ ರೈಲು 22 ಬೋಗಿಗಳನ್ನು ಹೊಂದಿದೆ. 66 ರೈಲುಗಳನ್ನು ಹೊರತುಪಡಿಸಿ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆ ಹಾಗೂ ವಿವಿಧ ನಗರ ಪಟ್ಟಣಗಳಿಂದಲೂ ಆಯೋಧ್ಯೆಗೆ ರೈಲು ಸಂಪರ್ಕ ಕಲ್ಪಿಸಲು ಭಾರತೀಯ ರೈಲ್ವೇ ಇಲಾಖೆ ನಿರ್ಧರಿಸಿರುವುದು ಸ್ವಾಗತಾರ್ಹ. ಅಲ್ಲದೇ ದೆಹಲಿ, ಮುಂಬೈ, ಚೆನ್ನೈ, ಸಬರಮತಿ, ಡೆಹ್ರಡೂನ್ ಸೇರಿದಂತೆ ದೇಶದ ವಿವಿಧ ನಗರಳಿಂದ ಆಯೋಧ್ಯೆಗೆ ರೈಲು ಸೇವೆ ಇರಲಿದೆ.

ಆಯೋಧ್ಯೆಗೆ ಸಂಚರಿಸುವ ಆಸ್ಥಾ ವಿಶೇಷ ರೈಲಿನಲ್ಲಿ ಸಸ್ಯಾಹಾರಿ ಆಹಾರ ಮಾತ್ರ ಇರಲಿದೆ. ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಆಸ್ಥಾ ವಿಶೇಷ ರೈಲು ಆಯೋಧ್ಯೆಗೆ ಸಂಚಾರ ಮಾಡಲಿದೆ.

Railway Department

ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಸೇವೆ ಲಭ್ಯ:

ಇತ್ತ ಬೆಂಗಳೂರಿನಿಂದ ಆಯೋಧ್ಯೆಗೆ ನೇರ ವಿಮಾನ ಸೇವೆಯೂ ಆರಂಭಗೊಂಡಿದೆ. ಏರ್ ಇಂಡಿಯಾ ಆಯೋಧ್ಯೆಗೆ ನೇರ ವಿಮಾನ ಸೇವೆ ನೀಡುತ್ತಿದೆ. ಏರ್‌ ಇಂಡಿಯಾ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗಿರುವ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮಕ್ಕೆ ಸೇವೆ ಒದಗಿಸಲಿದೆ. ಇದರ ಜೊತೆಗೆ ಅಯೋಧ್ಯೆಯಿಂದ ಕೊಲ್ಕತಾಗೂ ವಿಮಾನ ಸೇವೆ ಪ್ರಾರಂಭವಾಗಿದೆ. ಇದಕ್ಕೂ ಮೊದಲು ಅಯೋಧ್ಯೆಯಿಂದ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭವಾಗಿತ್ತು.

Air India direct flight service to Ayodhya

You might also like
Leave A Reply

Your email address will not be published.