ರಾಮ ಮೂರ್ತಿ ಪ್ರತಿಷ್ಠಾಪನೆಯಂದು ಅರ್ಧ ದಿನ ರಜೆ – ಕೇಂದ್ರ ಸರ್ಕಾರದ ಆದೇಶ

ದೇಶದ ಹಿಂದೂಗಳ ಶತಮಾನಗಳ ಕಾಯುವಿಕೆ ಜ.22 ರಂದು ಅಂತ್ಯವಾಗಲಿದೆ. ಜ.22 ಕ್ಕೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದ್ದು, ಈ ನಿಮಿತ್ತ ಇಡೀ ದೇಶಕ್ಕೆ ಅರ್ಧ ದಿನದ ರಜೆ ನೀಡಿ ಕೇಂದ್ರ ಸರ್ಕಾರ ಆದೇಶ ನೀಡಿದೆ.

Installation of Ramlala Murthy

ಕೇಂದ್ರ ಸರ್ಕಾರ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಕೈಗಾರಿಕಗಳಿಗೆ ಜ.22 ರಂದು ಅರ್ಧ ದಿನ ಮದ್ಯಾಹ್ನ 2.30 ರ ವರೆಗೆ ರಜೆ ನೀಡಲಾಗಿದೆ.

ಜ.22 ರಂದು ಕರ್ನಾಟಕದ ಮೈಸೂರಿನ ಶಿಲ್ಪಿಯಾದ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ಬಾಲರಾಮನ ವಿಗ್ರಹವನ್ನು ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ದೇಶದಾದ್ಯಂತ ಎಲ್ಲಾ ಕಡೆಯೂ ನೇರಪ್ರಸಾರ ಮಾಡುವ ವ್ಯವಸ್ಥೆಯನ್ನೂ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಮಾಡಿದೆ. ಈಗಾಗಲೇ ಜ.14 ರಿಂದ ರಾಮಲಲಾ ದೇವರ ಪ್ರಾಣ ಪ್ರತಿಷ್ಠಾಪನಾ ಕಾರ್ಯದ ವಿಧಿ ವಿಧಾನಗಳು ಆರಂಭವಾಗಿವೆ.

Arun Yogiraj

You might also like
Leave A Reply

Your email address will not be published.