ಪ್ರಾಣ ತೆಗೆದ ಪವರ್

ಬೆಳ್ಳಂಬೆಳಗ್ಗೆ ವಿದ್ಯುತ್ ಶಾಕ್ ಗೆ (Electrocution) ಬಾಲಕನೊಬ್ಬ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಮಂಚೇನಹಳ್ಳಿಯಲ್ಲಿ (Manchenahalli) ನಡೆದಿದೆ.

ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಈ ದುರ್ಘಟನೆ ನಡೆದಿದ್ದು, ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ ನಾಗೇಂದ್ರ (8 ವರ್ಷ) ಕರೆಂಟ್ ಶಾಕ್ನಿಂದ ಮೃತಪಟ್ಟಿದ್ದಾನೆ. ರಸ್ತೆ ದಾಟಲು ಹೋದ ಸಂದರ್ಭ ಟ್ರಾನ್ಸ್ಫಾರ್ಮರ್ (Transformer) ಗ್ರೌಂಡಿಂಗ್ ವೈರ್ನಿಂದ ವಿದ್ಯುತ್ ಶಾಕ್ ತಗುಲಿ ಬಾಲಕ ಕೊನೆಯುಸಿರೆಳೆದಿದ್ದಾನೆ.

Chikkaballapura

ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್ಫಾರ್ಮರ್ ಬದಿಯಲ್ಲಿ ಹೋಗುವಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಾಬಳ್ಳಾಪುರ- ಗೌರಿಬಿದನೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜೊತೆಗೆ ಟ್ರಾನ್ಸ್ ಫಾರ್ಮರ್ ಬಳಿ ಚರಂಡಿ ದುರಸ್ಥಿ ಕಾರ್ಯ ಕೂಡ ನಡೆಯುತ್ತಿದೆ. ಬಾಲಕ ಚರಂಡಿ ಆಚೆಯಿರುವ ಗೈ ವೈರ್ ಅನ್ನು ಎಳೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

You might also like
Leave A Reply

Your email address will not be published.