ನೀವು ನಿರುದ್ಯೋಗಿಯೇ? ಇಲ್ಲಿದೆ ಹುದ್ದೆಗಳ ಪಟ್ಟಿ

ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ) ಸ್ಪೆಷಲಿಸ್ಟ್ ಗ್ರೇಡ್-3, ವಿಜ್ಞಾನ ಗ್ರೇಡ್-ಬಿ, ಸಹಾಯಕ ಪ್ರಾಣಿ ಶಾಸ್ತ್ರಜ್ಞ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನಿಮಗಿರಬೇಕಾದ ಅರ್ಹತೆಯ ಮಾನದಂಡಗಳು ಏನು? ಯು.ಪಿ.ಎಸ್.ಸಿ ನೋಟಿಫಿಕೇಷನ್ ನಲ್ಲಿ ನೀಡಲಾಗಿರುವ ಮಾಹಿತಿಗಳೇನು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಅರ್ಜಿ ಶುಲ್ಕ:
1. ಇತರರಿಗೆ ಅರ್ಜಿ ಶುಲ್ಕ 25 ರೂಪಾಯಿ
2. ಮಹಿಳೆಯರು, ಎಸ್.ಸಿ, ಎಸ್.ಟಿ ಹಾಗೂ ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಉಚಿತ

ಶುಲ್ಕ ಪಾವತಿಸುವುದು ಹೇಗೆ?
ಎಸ್.ಬಿ.ಐ ಮೂಲಕ ನಗದು ಅಥವಾ ವೀಸಾ, ಮಾಸ್ಟರ್, ರೂಪೇ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಪೇಮೆಂಟ್ ಅಥವಾ ಇಂಟರ್’ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಮುಖ್ಯವಾದ ದಿನಾಂಕ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 01-02-2024 ರಾತ್ರಿ 11.59
ಆನ್’ಲೈನ್ ಮೂಲಕ ಅರ್ಜಿಯ ಪ್ರಿಂಟ್ ಆನ್’ಲೈನ್ನಲ್ಲಿ ಸಲ್ಲಿಸಲು 2-2-2024 ರಾತ್ರಿ 11.59

ವಯಸ್ಸಿನ ಮಿತಿ (01-01-2024ಕ್ಕೆ ಅನ್ವಯವಾಗುವಂತೆ)
1. ಸಹಾಯಕ ಕೈಗಾರಿಕಾ ಸಲಹೆಗಾರ ಹುದ್ದೆಗೆ ಗರಿಷ್ಠ ವಯಸ್ಸು 35 ವರ್ಷ
2. ವಿಜ್ಞಾನಿ (ಬಿ) ಹುದ್ದೆಗೆ ಕಾಯ್ದಿರಿಸದ (URs) ವಿಭಾಗದವರಿಗೆ ಗರಿಷ್ಠ ವಯಸ್ಸಿನ ಮಿತಿ 35
3. ಸಹಾಯಕ ಪ್ರಾಣಿಶಾಸ್ತ್ರಜ್ಞ ಹುದ್ದೆಗೆ ಕಾಯ್ದಿರಿಸದ (URs) ವಿಭಾಗದವರಿಗೆ ಗರಿಷ್ಠ ವಯಸ್ಸಿನ ಮಿತಿ 30
4. ಸಹಾಯಕ ಪ್ರಾಣಿಶಾಸ್ತ್ರಜ್ಞ ಹುದ್ದೆಗೆ ಒಬಿಸಿಯವರಿಗೆ ಗರಿಷ್ಠ ವಯಸ್ಸಿನ ಮಿತಿ 33
5. ಸಹಾಯಕ ಪ್ರಾಣಿಶಾಸ್ತ್ರಜ್ಞ ಹುದ್ದೆಗೆ ಎಸ್ಸಿಯವರಿಗೆ ಗರಿಷ್ಠ ವಯಸ್ಸಿನ ಮಿತಿ 35
6. ಸಹಾಯಕ ವಿಜ್ಞಾನಿ (ಬಿ) ಹುದ್ದೆಗೆ ಕಾಯ್ದಿರಿಸಿದ ವಿಭಾಗದವರಿಗೆ ಗರಿಷ್ಠ ವಯಸ್ಸಿನ ಮಿತಿ 45
7. ಸಹಾಯಕ ವಿಜ್ಞಾನಿ (ಬಿ) ಹುದ್ದೆಗೆ ಒಬಿಸಿಯವರಿಗೆ ವಯಸ್ಸಿನ ಗರಿಷ್ಠ ಮಿತಿ 43
8. ಸಹಾಯಕ ವಿಜ್ಞಾನಿ (ಬಿ) ಹುದ್ದೆಗೆ ಎಸ್ಸಿಯವರಿಗೆ ವಯಸ್ಸಿನ ಗರಿಷ್ಠ ಮಿತಿ 40
9. ವಯೋಮಿತಿ ಸಡಿಲಿಕೆ ಸೇರಿ ಇತರೆ ಮಾಹಿತಿಗಾಗಿ ನೋಟಿಫಿಕೇಷನ್ ವೀಕ್ಷಿಸಿ

ಶೈಕ್ಷಣಿಕ ಅರ್ಹತೆ
1. ಸಹಾಯಕ ಕೈಗಾರಿಕಾ ಸಲಹೆಗಾರ: ಪಿಜಿ/ಪದವಿ
2. ವಿಜ್ಞಾನಿ ಬಿ: ಎಂಎಸ್ಸಿ
3. ಸಹಾಯಕ ಪ್ರಾಣಿಶಾಸ್ತ್ರಜ್ಞ: ಎಂಎಸ್ಎಸಿ
4. ಸ್ಪೆಷಲಿಸ್ಟ್ ಗ್ರೇಡ್ 3: ಎಂಬಿಬಿಎಸ್

ಹುದ್ದೆಗಳ ಮಾಹಿತಿ
1. ಸಹಾಯಕ ಕೈಗಾರಿಕಾ ಸಲಹೆ – 1
2. ವಿಜ್ಞಾನ ಬಿ – 1
3. ಸಹಾಯಕ ಪ್ರಾಣಿಶಾಸ್ತ್ರಜ್ಞ – 7
4. ಸ್ಪೆಷಲಿಸ್ಟ್ ಗ್ರೇಡ್ 3 – 112

ಪ್ರಮುಖ ಲಿಂಕ್ಸ್

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ – https://upsconline.nic.in/ora/VacancyNoticePub.php ಇಲ್ಲಿ ಕ್ಲಿಕ್ ಮಾಡಿ.
ನೋಟಿಫಿಕೇಷನ್ ನೋಡಲು – https://upsc.gov.in/sites/default/files/Advt-No-01-2024-engl-120124.pdf ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಲು https://upsc.gov.in/ ಇಲ್ಲಿ ಕ್ಲಿಕ್ ಮಾಡಿ.

You might also like
Leave A Reply

Your email address will not be published.