JSW ಗ್ರೂಪ್ ಅಧ್ಯಕ್ಷನ ವಿರುದ್ಧ ದಾಖಲಾಯ್ತು ಅತ್ಯಾಚಾರದ ವರದಿ – ಏನಿದರ ಸತ್ಯಾಸತ್ಯತೆ, ಈ ವರದಿ ಓದಿ.

ಹಗಲು ರಾತ್ರಿಯೆನ್ನದೆ ಹಿಸಿದು ತಿಂದ ನರರಾಕ್ಷಸರು ಆಕೆಯನ್ನು ಜೀವಂತವಾಗಿ ಬಿಡದೆ ಸುಟ್ಟುಹೋದರು. ಇಂತಹ ಕಾಮುಕರಿಗೆ ಲಗಾಮು ಹಾಕಬೇಕೆಂದರೆ, ನೊಂದು ಬೆಂದ ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಗಲ್ಲು ಹಾಕುವ ಗುಲ್ಲು ಎಬ್ಬಿಸಲೆಬೇಕಾಗಿದೆ. ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಅತ್ಯಾಚಾರವು ವ್ಯಾಪಕವಾಗಿ ಹರಡಿರುವ ಕಾಮರೋಗವಾಗಿದೆ.

ಒಂದು ವರದಿ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ವರ್ಷ 30 ಸಾವಿರಕ್ಕೂ ಹೆಚ್ಚು ಅತ್ಯಾಚಾರ ನಡೆಯುತ್ತಲಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೆ, ಪ್ರತಿನಿತ್ಯ 87 ಅತ್ಯಾಚಾರಗಳು ನಡೆಯುತ್ತಿದೆ ಎಂಬ ವರದಿ ಬಂದಿದೆ. ಈ ಅಂಕಿ-ಅಂಶಗಳು ಕಣ್ಣ ಮುಂದೆ ಇದ್ದರು ಅದೆಷ್ಟೋ ಪ್ರಕರಣಗಳಿಗೆ ನ್ಯಾಯ ಸಿಗದೆ ಕೊಳೆತು ಹೋಗುತ್ತಿರುವುದು ಬೇಸರದ ಸಂಗತಿ.

ಈ ನಿಟ್ಟಿನಲ್ಲೆ, ಜೆ.ಎಸ್.ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಜ್ಜನ್ ಜಿಂದಾಲ್ (64 ವರ್ಷ) ವಿರುದ್ಧ ಸಂತ್ರಸ್ಥೆ ನೀಡಿದ ಅತ್ಯಾಚಾರ ಆರೋಪದಡಿ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು, ಇದೀಗ ಜಿಂದಾಲ್ ಈ ಆರೋಪವನ್ನು ಅಲ್ಲಗೆಳದಿದ್ದಾರೆ.

ಅಷ್ಟಕ್ಕೂ ಏನಿದು ಪ್ರಕರಣ?

ಮುಂಬೈನ 30 ವರ್ಷದ ಮಹಿಳೆಯೊಬ್ಬರು, 2022 ಜನವರಿ 24 ರಂದು ಜೆ.ಎಸ್.ಡಬ್ಲ್ಯೂ ಸಮೂಹ ಕೇಂದ್ರ ಕಚೇರಿಗೆ ಹೋಗಿದ್ದಾಗ ಸಜ್ಜನ್ ಜಿಂದಾಲ್ ಅವರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಫೆಬ್ರವರಿ 16 ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನಲ್ಲಿ ಏನಿದೆ?

ಜಿಂದಾಲ್ ಅವರನ್ನು ಮೊದಮೊದಲು ದುಬೈ ಕ್ರಿಡಾಂಗಣದ ವಿಐಪಿ ಬಾಕ್ಸ್ ನಲ್ಲಿ ಭೇಟಿಯಾಗಿದ್ದು, ಪರಸ್ಪರ ಮಾತನಾಡಿ ಮೊಬೈಲ್ ಸಂಖ್ಯೆ ಹಂಚಿಕೊಳ್ಳುವ ಮೂಲಕ ಗೆಳೆತನ ಬೆಳೆಸಿಕೊಂಡೆವು. ನಂತರ ಅವರನ್ನು ಬಾಂದ್ರಾದ ಪಂಚತಾರ ಹೋಟೆಲ್ ಹಾಗೂ ಜಿಂದಾಲ್ ಮ್ಯಾನ್ಶನ್ ಅಲ್ಲಿಯೂ ಭೇಟಿಯಾಗಿದ್ದಲ್ಲದೆ, ಅವರೊಟ್ಟಿಗೆ ಕಾರಿನಲ್ಲೂ ಪ್ರಯಾಣ ಬೆಳೆಸಿದ್ದೆ. ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ ವೆಸಗಿದ ನಂತರ ಸಾಕಷ್ಟು ಭಾರಿ ಕರೆ ಮಾಡಿದರು ಸ್ವೀಕರಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಿಸಿದ್ದರು, ಎಫ್.ಐ.ಆರ್ ದಾಖಲಿಸದ ಪೊಲೀಸರು?

ಫೆಬ್ರವರಿ 16 ರಂದೇ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದು, ಅವರು ತನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರೂ, ಅದರ ಪ್ರತಿಯನ್ನು ನನಗೆ ನೀಡಿರಲಿಲ್ಲ ಹಾಗೂ ಎಫ್.ಐ.ಆರ್ ದಾಖಲಿಸಿಕೊಂಡಿಲ್ಲ ಎಂದು ಸಂತ್ರಸ್ಥೆ ಮಹಿಳೆ ಡಿ.5 ರಂದು ಬಾಂಬೆ ಹೈಕೋರ್ಟ್ ನಲ್ಲಿ ಪೊಲೀಸರ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದರು.

ಇದಾದ ಬಳಿಕ ನ್ಯಾಯಾಲದ ಆದೇಶದಂತೆ ಪೊಲೀಸರು ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದನ್ನು ನಾವು ಮಾಧ್ಯಮಗಳಲ್ಲಿ ನೋಡಬಹುದು.

ಪ್ರಕರಣ ಕುರಿತು ಹೇಳಿಕೆ ನೀಡಿದ ಜಿಂದಾಲ್:

ದೂರು ನೀಡಿರುವ ಮಹಿಳೆಯ ವಿರುದ್ಧ ಪ್ರಕಟಣೆ ಹೊರಡಿಸಿರುವ ಜಿಂದಾಲ್, ನನ್ನ ಮೇಲೆ ಆ ಮಹಿಳೆ ನೀಡಿರುವ ಆರೋಪ ಸುಳ್ಳಾಗಿದ್ದು, ಆಧಾರರಹಿತವಾಗಿದೆ. ನಾನು ತನಿಖೆಗೆ ಸಂಬಂಧಿಸಿದಂತೆ ಯಾವ ಕ್ಷಣದಲ್ಲಾದರೂ ಸಹಕಾರ ನೀಡಲು ಸದಾ ಬದ್ಧನಾಗಿದ್ದೇನೆ. ಅಲ್ಲದೇ ನಾನು ನನ್ನ ಕುಟುಂಬದ ಖಾಸಗಿತನವನ್ನು ಗೌರವಿಸಲು ಬಯಸುವುದರಿಂದ, ಈ ಕುರಿತು ಹೆಚ್ಚಾಗಿ ಮಾತನಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

You might also like
Leave A Reply

Your email address will not be published.