ಸ್ವರ್ವೇದ್ ಮಹಾಮಂದಿರ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುಮಾರು 20 ಸಾವಿರ ಕೋಟಿ ರೂಪಾಯಿಗಳ 37 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದರೊಂದಿಗೆ, ವಾರಣಾಸಿಯ ಉಮರಹಾದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ವರ್ವೇದ್ ಮಹಾಮಂದಿರದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದರು.

ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು, ದೋಹ್ರಿಘಾಟ್-ಮೌ MEMU ರೈಲು ಮತ್ತು ಲಾಂಗ್ ಹಾಲ್ ಗೂಡ್ಸ್ ರೈಲು ಸೇರಿದಂತೆ ಸರಕು ಸಾಗಣೆ ಕಾರಿಡಾರಿಗೂ ಚಾಲನೆ ನೀಡಿದ್ದಾರೆ.

ದೇಶದ ಎರಡು ಪ್ರಮುಖ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಬನಾರಸ್ ಮತ್ತು ಕನ್ಯಾಕುಮಾರಿ (ಕಾಶಿ ತಮಿಳು ಸಂಗಮಮ್ ವೀಕ್ಲಿ ಎಕ್ಸ್ಪ್ರೆಸ್) ನಡುವೆ ಹೊಸ ರೈಲಿಗೆ ಚಾಲನೆ ನೀಡಲು ಸಜ್ಜಾಗಿದ್ದಾರೆ. ಇದರೊಂದಿಗೆ ವಿಕಸಿತ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಸುಮಾರು 19,150 ಕೋಟಿ ರೂ. ಯೋಜನೆಗಳು ಸೇರಿದಂತೆ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ, ಪ್ರವಾಸಿ ತಾಣಗಳ ಬಗ್ಗೆ ವೆಬ್ಸೈಟ್ ಮಾಹಿತಿ ಮತ್ತು ಏಕೀಕೃತ ಪ್ರವಾಸಿ ಪಾಸ್ ವ್ಯವಸ್ಥೆಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನೂ ಇತರ ರೈಲ್ವೆ ಯೋಜನೆಗಳಿಗೆ ಚಾಲನೆ ಕೂಡ ನೀಡಲಿದ್ದಾರೆ.

ಇದರೊಂದಿಗೆ ನಮ್ಮ ಪ್ರಧಾನಮಂತ್ರಿಯವರು ದೇಶದ ಅಭಿವೃದ್ದಿಗಾಗಿ, ಸಾರ್ವಜನಿಕರ ಹಿತರಕ್ಷಣೆಗಾಗಿ ಪ್ರಾರಂಭಿಸುವ ಯೋಜನೆಗಳು ಯಾವುವು?

6,500 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.

ಸುಮಾರು 10 ಸಾವಿರದ 900 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಪಂಡಿತ್ ದೀನದಯಾಳ್ ಉಪಾಧ್ಯಾಯ ನಗರ-ಹೊಸ ಭೌಪುರ್ ಮೀಸಲಾದ ಸರಕು ಸಾಗಣೆ ಕಾರಿಡಾರ್ ಯೋಜನೆ, ಬಲ್ಲಿಯಾ-ಘಾಜಿಪುರ ಸಿಟಿ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆ; ಇಂದಾರ-ದೋಹ್ರಿಘಾಟ್ ರೈಲು ಮಾರ್ಗದ ಗೇಜ್ ಪರಿವರ್ತನೆ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ.

ನವೀಕರಿಸಲಾಗದ ಇಂಧನ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ, ಚಿತ್ರಕೂಟ ಜಿಲ್ಲೆಯಲ್ಲಿ ಸುಮಾರು 4000 ಕೋಟಿ ರೂ. ವೆಚ್ಚದಲ್ಲಿ 800 MW ಸೌರ ಪಾರ್ಕ್ ಹಾಗೂ ಪೆಟ್ರೋಲಿಯಂ ಪೂರೈಕೆ ಹೆಚ್ಚಿಸಲು ಮಿರ್ಜಾಪುರದಲ್ಲಿ 1050 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಿರುವ ಹೊಸ ಪೆಟ್ರೋಲಿಯಂ ತೈಲ ಟರ್ಮಿನಲ್ ನಿರ್ಮಾಣಗಳಿಗೆ ಅಡಿಪಾಯ ಹಾಕಲಿದ್ದಾರೆ.

 

You might also like
Leave A Reply

Your email address will not be published.